ಕರ್ನಾಟಕ-ಮಹಾರಾಷ್ಟ್ರದ ನಡುವೆ ಭಂಡಾರ ಜಾತ್ರೆಗಳು ಬಾಂಧವ್ಯ ಬೆಸೆಯುವ ಕೊಂಡಿ ಎಂದು ಹೇಳಬಹುದು. ಎರಡೂ ರಾಜ್ಯಗಳ ಜನರ ನಡುವಿನ ಬಾಂಧವ್ಯ ಇಂತಹ ಜಾತ್ರೆಗಳಿಂದ ಮತ್ತಷ್ಟು ಗಟ್ಟಿಗೊಳ್ಳುತ್ತವೆ
ಅರಿಸಿನಕ್ಕೆ ಹೃದಯದ ಆರೋಗ್ಯ ಕಾಪಾಡುವ ಉರಿಯೂತ ನಿವಾರಿಸುವ ಕೀಲುಗಳ ಬಿಗಿತನ ತಡೆಯುವ ಹಾಗೂ ಚರ್ಮದ ಆರೋಗ್ಯ ಕಾಪಾಡುವ ಶಕ್ತಿ ಇದೆ ಎಂಬ ಕಾರಣಕ್ಕಾಗಿ ಭಂಡಾರ ರೂಪದಲ್ಲಿ ಬಳಸುವುದೇ ಆಚರಣೆಯ ಉದ್ದೇಶ ಇರಬಹುದು ಎಂದೆನಿಸುತ್ತದೆ