ನೆಲದಪಡೆ, ನೀರಪಡೆ, ಗಾಳಿಪಡೆ

ನೆಲದಪಡೆ (ನಾ). ಭೂಸೈನ್ಯ

ನೀರಪಡೆ (ನಾ). ನೀರಿನ ಮೇಲೆ ಸಂಚರಿಸುವ ಸೈನ್ಯ; ನೌಕಾಪಡೆ

ಗಾಳಿಪಡೆ (ನಾ). ವಾಯುಸೈನ್ಯ

ರಾವಣೇಶ್ವರನು ಯುದ್ಧ ಕುರಿತು ಚರ್ಚಿಸಲು ಸಭೆ ಕರೆಯುವನು. ಅದರಲ್ಲಿ ಪ್ರಥಮ ಸೇನಾನಿ ಪ್ರಹಸ್ತನು ತಮ್ಮಲ್ಲಿರುವ ಯುದ್ಧ ಸನ್ನದ್ದ ಪಡೆಗಳನ್ನು ತಿಳಿಸುವಾಗ ಅವುಗಳನ್ನು ಕುವೆಂಪು ಅವರು ನೆಲದಪಡೆ, ನೀರಪಡೆ, ಗಾಳಿಪಡೆಗಳೆಂದು ಕರೆದು ಹೀಗೆ ಬಣ್ಣಿಸಿರುವರು.

‘ನೆಲದಪಡೆ,

ನೀರಪಡೆ, ಗಾಳಿಪಡೆಗಳ್-ಕೋಟಿ ಕೋಟಿಗಳ್-

ಸಿದ್ಧವಾಗಿಹವಿಂದು ಯುದ್ಧ ಲೀಲಾ ವಿಲಯ

ಕಲೆಗೆ’

ಕುರಿಗೊಲೆ

ಕುರಿಗೊಲೆ (ನಾ). (ಆಲಂ) ಅಸಹಾಯ ಸ್ಥಿತಿಯಲ್ಲಿರುವವರ ಕೊಲೆ; ಭೀಕರವಾದ ಕೊಲೆ; ಕಗ್ಗೊಲೆ.

ರಾಮರಾವಣರ ಯುದ್ಧದಲ್ಲಿ ರಾವಣನು ತಾಮತಾಸ್ತ್ರ ಪ್ರಯೋಗಿಸುವನು. ಅದು ವಾನರರ ಪ್ರಾಣಗಳನ್ನು ಹೀರಿ ದುರ್ಮರಣ ತರಲು, ವಾನರರು ಕೆಟ್ಟು ಓಡುವರು. ಆಂಜನೇಯ, ನಳ, ನೀಲರು ಅವರನ್ನು ತಡೆಯುತ್ತಿರಲು ಸುಗ್ರೀವನನ್ನುದ್ದೇಶಿಸಿ ರಾಮನು ಹೇಳುವ ನುಡಿಯಲ್ಲಿ ಕುವೆಂಪು ಅವರು ‘ಕುರಿಗೊಲೆ’ ಎಂಬ ಪದವನ್ನು ಆಲಂಕಾರಿಕವಾಗಿ ಹೀಗೆ ಪ್ರಯೋಗಿಸಿದ್ದಾರೆ.

‘ಹನುಮ ಮೈಂದಾದಿ

ಕಲಿಗಳಿಂದೀ ಮಹಾ ದೈತ್ಯ ರಣರುದ್ರನಂ

ಕೆಣಕಿ ಬಾಳ್ವೆರಸಿ ಪಿಂತಿರುಗಲರಿಯರ್ ಕಣಾ!

ಮತ್ತೇತಕಿತರರಂ ನೂಂಕುತಿರ್ಪರು ಬರಿದೆ

ಕುರಿಗೊಲೆಗೆ?’

ಬಾನಲೆವರು

ಬಾನಲೆವರು (ನಾ). ಆಕಾಶದಲ್ಲಿ ಸಂಚರಿಸುವವರು; ದೇವತೆಗಳು

ಕುವೆಂಪು ಅವರು ಆಕಾಶದಲ್ಲಿ ಸಂಚರಿಸುವ ದೇವತೆಗಳನ್ನು ತಮ್ಮ ‘ಉದಯರವಿ’ ಮನೆಯ ತೋಟಕ್ಕೆ ಬರಲು ಹೀಗೆ ಆಹ್ವಾನಿಸಿದ್ದಾರೆ:

‘ಬನ್ನಿ, ಓ ಬಾನಲೆವರೆ, ನಮ್ಮ ತೋಟಕೆ,

ನಂದನವನೆ ಮೀರಿಸುವೀ ದಿವ್ಯ ನೋಟಕೆ.’

(ಸೌಂದರ್ಯಯಾಜಿ : ಅನಿಕೇತನ)⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.