ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ– ಗುಂಪುಲಿ

Published 21 ಜನವರಿ 2024, 4:51 IST
Last Updated 21 ಜನವರಿ 2024, 4:51 IST
ಅಕ್ಷರ ಗಾತ್ರ

ಗುಂಪುಲಿ

ಗುಂಪುಲಿ (ನಾ). (ಪಕ್ಷಿ ಮೊದಲಾದುವುಗಳು) ಒಟ್ಟಾಗಿ ಮಾಡುವ ಶಬ್ದ, ಸಾಮೂಹಿಕ ಧ್ವನಿ.

(ಗುಂಪು + ಉಲಿ)

ಪಂಚವಟಿಯಲ್ಲಿದ್ದಾಗ ಹೇಮಂತ ಋತುವಿನ ಒಂದು ದಿನ ಬೆಳಿಗ್ಗೆ ರಾಮಲಕ್ಷ್ಮಣರು ಗೋದಾವರಿಯಲ್ಲಿ ಮಿಂದು ಹಿಂತಿರುಗುತ್ತಿರುತ್ತಾರೆ. ಆಗ ರಾಮಚಂದ್ರನು ತಮ್ಮನಿಗೆ ‘ನಾವು ಇಲ್ಲಿಂದ ಒಂದು ಮಂಗಳ ಮುಹೂರ್ತದಲ್ಲಿ ಅಯೋಧ್ಯೆಗೆ ಹಿಂದಿರುಗೋಣ’ ಎಂದು ಹೇಳುವನು.

ಆ ಬೆಳಗಿನ ಹೊಂಬಿಸಿಲು ಬಿದ್ದ ಬಿದಿರ ಮೆಳೆಯ ತುದಿಗಣೆಯಲ್ಲಿದ್ದ ಕಾಮಳ್ಳಿಗಳ ಹಿಂಡು ಹಾರಿ ಹೋಗುವಾಗ ಅವು ಒಟ್ಟಾಗಿ ಮಾಡಿದ ಉಲಿತವನ್ನು ಕವಿಯು ‘ಗುಂಪುಲಿ’ ಎಂಬ ಪದ ರಚಿಸಿ ಉಲಿತದ ಸಾಂಗತ್ಯವನ್ನು ಪ್ರಕಟಪಡಿಸಿದ್ದಾರೆ.

ದಾರಿಯೆಡೆ

ಹೊಮ್ಮಿದೆಳ ಹೊಂಬಿಸಿಲ್ ಬಿಳ್ದೊಂದು ಬಿದಿರ್ಮೆಳೆಯ

ತುದಿಗಣೆಯೊಳಿರ್ದೊಂದು ಕಾಮಳ್ಳಿಗಳ ಹಿಂಡು

ಹಾರಿದುದು ಗುಂಪುಲಿಯನೆಸೆದು. (1.11: 230-232)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT