ದೇಸಿ ಬೀಜ ಸಂರಕ್ಷಣೆಗಾಗಿ ದುಡಿಯುತ್ತಿರುವ ಜಿ.ಕೃಷ್ಣಪ್ರಸಾದ್ ಈ ಬರಹದಲ್ಲಿ ನಾರಾಯಣರೆಡ್ಡಿ ಅವರ ಬದುಕು ಸಾಗಿ ಬಂದ ಹಾದಿ ಮತ್ತು ಅವರ ಪ್ರಯೋಗಗಳ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ.

ಹದಿನೈದು ವರ್ಷಗಳ ಹಿಂದಿನ ಮಾತು. ಕೋಲಾರ ಜಿಲ್ಲೆ ಮುಳಬಾಗಿಲು ಸಮೀಪದ ಹಳ್ಳಿಯೊಂದರಲ್ಲಿ ರೈತರ ಸಭೆಯೊಂದನ್ನು ಆಯೋಜಿಸಲಾಗಿತ್ತು. ಸಾವಯವ ಕೃಷಿಕರ ಬಳಗ ಶುರು ಮಾಡುವ ಹುಮ್ಮಸ್ಸಿನಿಂದ ನಡೆಸಿದ್ದ ಸಭೆ ಅದು. ಅದಕ್ಕೆ ಎಲ್. ನಾರಾಯಣ ರೆಡ್ಡಿ ಅವರನ್ನು ಆಹ್ವಾನಿಸಲಾಗಿತ್ತು. ಸಾವಯವ ಕೃಷಿಯ ಕುರಿತು ತಮ್ಮ ವಾಗ್ಝರಿಯಿಂದ ರೈತರ ಮನಸೆಳೆದ ರೆಡ್ಡಿಯವರು, ಆ ವಿಧಾನದ ರೂಪುರೇಷೆಗಳನ್ನು ಸರಳವಾಗಿ ತೆರೆದಿಟ್ಟರು. ಇವರ ಮಾತುಗಳಿಂದ ಸ್ಫೂರ್ತಿ ಪಡೆದ ಒಂದಷ್ಟು ರೈತರು, ಜೈವಿಕ ಮಿತವ್ಯಯಕಾರಿ ನಿಸರ್ಗ ಪ್ರಿಯ (ಜೈಮಿನಿ) ಕೃಷಿಕರ ಬಳಗಕ್ಕೆ ಚಾಲನೆ ಕೊಟ್ಟರು.

ಕಾರ್ಯಕ್ರಮದ ನಂತರ ಊರಿಗೆ ವಾಪಸು ಹೋಗಲು ಮುಳಬಾಗಲು ಬಸ್ ನಿಲ್ದಾಣಕ್ಕೆ ಬಂದಾಗ, ಅಲ್ಲಿ ನಿಂತಿದ್ದ ಟಾಟಾ ಸುಮೊದ ಹಿಂದಿನ ಸೀಟಿನಲ್ಲಿ ಹತ್ತಿ ಕುಳಿತು ನಮ್ಮನ್ನೂ ‘ಇಲ್ಲೇ ಬನ್ನಿ ಕೂರೋಣ’ ಎಂದು ಆಹ್ವಾನಿಸಿದರು. ಮುಂದೆ ಸೀಟುಗಳು ಖಾಲಿ ಇದ್ದರೂ , ಹಿಂಭಾಗದ ಸೀಟಿನಲ್ಲಿ ಗುಬ್ಬಚ್ಚಿಯಂತೆ ಒತ್ತರಿಸಿ ಕೂತು, ಉಳಿದವರನ್ನೂ ಕೂರಿಸಿಕೊಂಡರು. ಯಾವುದೇ ಹಮ್ಮು ಬಿಮ್ಮು ತೋರದೇ ಸಹಜವಾಗಿ ವರ್ತಿಸುವ ಅವರ ಸರಳತೆಗೆ ಇದೊಂದು ನಿದರ್ಶನ.

ಇದನ್ನೂ ಓದಿ:ಸಾವಯವ ಕೃಷಿಕ, ಮಾರ್ಗದರ್ಶಕ ನಾರಾಯಣ ರೆಡ್ಡಿ ಇನ್ನಿಲ್ಲ

ಬೆಂಗಳೂರು ಹೊರವಲಯದ ಸೋರಹುಣಸೆ ಗ್ರಾಮದ ಎಲ್. ನಾರಾಯಣ ರೆಡ್ಡಿ ಅವರದು ದೊಡ್ಡ ರೈತ ಕುಟುಂಬ. ಹೀಗಾಗಿ ವ್ಯವಸಾಯ ಚಿರಪರಿಚಿತ. ಬಾಲ್ಯದಲ್ಲಿ ಒಮ್ಮೆ ಕುರಿ ಮೇಯಿಸಲು ಹೋಗಿದ್ದ ನಾರಾಯಣ ರೆಡ್ಡಿ, ಅಲ್ಲಿ ಸಾಗಿ ಹೋಗುತ್ತಿದ್ದ ರೈಲು ನೋಡುತ್ತ ಮೈಮರೆತುಬಿಟ್ಟ. ಕುರಿಗಳನ್ನು ಮನೆಗೆ ಹೊಡೆದುಕೊಂಡು ಬರುವುದಕ್ಕೆ ತಡ ಆಗಿದ್ದರಿಂದ ಅಪ್ಪನ ಕೋಪಕ್ಕೆ ತುತ್ತಾಗಿ ಮನೆ ಬಿಟ್ಟು ಹೊರಟ. ಹೋಟೆಲ್ ಮಾಣಿ ಕೆಲಸಕ್ಕೆ ಸೇರಿ, ಕೆಲಸ ಮಾಡುತ್ತ, ಗಲ್ಲಾ ಪೆಟ್ಟಿಗೆಯ ಮೇಲೆ ಕೂರುವಷ್ಟು ವಿಶ್ವಾಸವನ್ನು ಮಾಲೀಕರಿಂದ ಗಳಿಸಿದ. ಅವರ ಸಹಕಾರದಿಂದಲೇ ವಿದ್ಯೆಯನ್ನೂ ಪಡೆದ.

ಅಲ್ಲಿಂದ ನಾರಾಯಣ ರೆಡ್ಡಿ ಅವರ ಬದುಕು ಹೊರಳಿದ್ದು ಲಾರಿ ಕ್ಲೀನರ್ ಕೆಲಸದತ್ತ. ಅಲ್ಲೂ ಮಾಲೀಕರ ವಿಶ್ವಾಸ ಗಳಿಸುತ್ತ ಮುಂದೆ ಆ ಸಾರಿಗೆ ಕಂಪನಿಯ ಮ್ಯಾನೇಜರ್ ಆಗಿ ಬಡ್ತಿ ಪಡೆದರು. ವಿವಿಧ ರಾಜ್ಯಗಳಿಂದ ಬರುತ್ತಿದ್ದ ಲಾರಿ ಚಾಲಕರ ಜತೆ ವ್ಯವಹರಿಸುತ್ತ, ಆರೇಳು ಭಾಷೆಯಲ್ಲಿ ಸರಾಗವಾಗಿ ಮಾತನಾಡುವಂತಾದರು.

ಇದನ್ನೂ ಓದಿ: ಸ್ಮರಣೆಯೊಂದೇ ಸಾಲದು; ಅವರು ನಡೆದ ದಾರಿಯಲ್ಲಿ ನಡೆಯಬೇಕು

ಆಕಸ್ಮಿಕವಾಗಿ ಒಮ್ಮೆ ಲಾರಿಯನ್ನು ಬಾಡಿಗೆಗೆ ಕೇಳಲು ಬಂದವರು ನಾರಾಯಣ ರೆಡ್ಡಿಯವರನ್ನು ಗುರುತುಹಿಡಿದರು. ಅವರು ರೆಡ್ಡಿಯವರ ಊರಿನವರು! ಇವರನ್ನು ವಾಪಸು ಊರಿಗೆ ಕರೆದುಕೊಂಡು ಹೋಗಿ, ಅಕ್ಕನ ಮಗಳ ಜೊತೆ ಮದುವೆ ಮಾಡಿಸಿ, ಕೃಷಿ ಕೆಲಸಕ್ಕೆ ನಿಯೋಜಿಸಿದರು. ಅಲ್ಲಿಂದ ನಾರಾಯಣ ರೆಡ್ಡಿಯವರ ಕೃಷಿ ಬದುಕು ಶುರುವಾಯಿತು. ಸತತ ಹಾಗೂ ಶ್ರದ್ಧೆಯ ದುಡಿಮೆ ರೆಡ್ಡಿಯವರ ಮಂತ್ರ. ಇವರ ವ್ಯವಸಾಯದ ಪರಿ ಹೇಗಿತ್ತೆಂದರೆ, 1976ರಲ್ಲೇ ಅಧಿಕ ರಾಗಿ ಇಳುವರಿ ತೆಗೆದು ‘ಪ್ರಗತಿಪರ ರೈತ’ ಎಂಬ ಖ್ಯಾತಿಗೆ ಪಾತ್ರರಾದರು. ಅವರ ಇಳುವರಿ ಪ್ರಮಾಣವನ್ನು ಈವರೆಗೆ ಯಾರೂ ದಾಟಿಲ್ಲ ಎಂಬುದೊಂದು ಹೆಗ್ಗಳಿಕೆ.

ಆಗ ತಾನೇ ಪ್ರಚಾರಕ್ಕೆ ಬರುತ್ತಿದ್ದ ರಾಸಾಯನಿಕ ಕೃಷಿಯನ್ನು ಅಪ್ಪಿಕೊಂಡ ರೆಡ್ಡಿಯವರ ತೋಟಕ್ಕೆ , ಸಮೀಪದ ಸಾಯಿಬಾಬ ಆಶ್ರಮಕ್ಕೆ ಬಂದಿದ್ದ ಅಮೆರಿಕದ ಆಲ್ಬರ್ಟ ಟ್ರಕ್ಕಾರ್ ಎಂಬ ವಿಜ್ಞಾನಿ ಬಂದರು. ಇವರ ವ್ಯವಸಾಯ ಪದ್ಧತಿ ನೋಡಿ ‘ನೀನು ಮಾಡುತ್ತಿರುವ ಕೃಷಿ ವಿಧಾನ ತಪ್ಪು. ಸಾವಯವ ಕೃಷಿ ಮಾಡು’ ಎಂದು ಸಲಹೆ ಮಾಡಿದರು; ಜತೆಗೆ ಫುಕುವೊಕ ಅವರ ‘ಒನ್ ಸ್ಟ್ರಾ ರೆವಲ್ಯೂಷನ್’ ಪುಸ್ತಕ ಕೊಟ್ಟರು. ಇಲ್ಲಿಂದ ನಾರಾಯಣ ರೆಡ್ಡಿಯವರ ಸಾವಯವ ಯಾತ್ರೆ ಆರಂಭವಾಯಿತು.

ಇದನ್ನೂ ಓದಿ: ಸಾವಯವ ಗುರುಕುಲ

80ರ ಕಾಲಘಟ್ಟದಲ್ಲಿ ಸಾವಯವ ಕೃಷಿಕರು ಇದ್ದುದೇ ಬೆರಳೆಣಿಕೆಯಷ್ಟು. ಅದರಲ್ಲಿ ನಾರಾಯಣ ರೆಡ್ಡಿ ಪ್ರಮುಖ ಹೆಸರು. ಮಧ್ಯಮ ವರ್ಗದ ರೈತ ಘನತೆಯಿಂದ ಮತ್ತು ಸಾಲರಹಿತವಾಗಿ ಬದುಕಬಹುದು ಎಂಬುದನ್ನು ತೋರಿಸಿದರು. ನಾರಾಯಣ ರೆಡ್ಡಿಯವರ ಬದುಕೇ ಒಂದು ರೋಚಕ. ರೈತ ದುಶ್ಚಟಗಳಿಗೆ ಬಲಿಯಾಗದೆ ಇದ್ದರೆ ಕೃಷಿಯಿಂದ ಹೇಗೆ ಆತ ಶ್ರೀಮಂತನಾಗಬಹುದು ಎಂಬುದನ್ನು ತೋರಿಸಿಕೊಟ್ಟರು.

ಸೋರಹುಣಸೆ ಗ್ರಾಮದ ಅವರ ಹೊಲವು ನಗರದ ಮಡಿಲಿಗೆ ಸೇರುತ್ತಿದ್ದಂತೆ, ದೂರದ ತಮಿಳುನಾಡಿನಲ್ಲಿ ಬೀಳು ಹೊಲ ಖರೀದಿಸಿ ಹಸಿರು ಉಕ್ಕಿಸಿದರು. ದೊಡ್ಡಬಳ್ಳಾಪುರದ ಮರಳೇನಹಳ್ಳಿಯನ್ನು ತಮ್ಮ ತಪೋವನವನ್ನಾಗಿ ಮಾಡಿಕೊಂಡು, ಸಾವಿರಾರು ಜನರಿಗೆ ದಾರಿ ತೋರಿದರು. ನಿರ್ಳಗವಾಗಿ ಇಂಗ್ಲಿಷ್ ಮಾತಾಡುತ್ತಿದ್ದ ನಾರಾಯಣರೆಡ್ಡಿ, ಇಂಗ್ಲಿಷ್ ಕೃಷಿ ಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ವಿಜ್ಞಾನಿಗಳಿಗೆ ಪಾಠ ಹೇಳಿದರು. ಅನೇಕ ದೇಶಗಳಿಗೆ ಹೋಗಿಬಂದರು.

ಇದನ್ನೂ ಓದಿ:ಕೃಷಿಕ ಬೇಡುವವನಾಗಬಾರದು, ಸದಾ ಸ್ವಾವಲಂಬಿಯಾಗಿರಬೇಕು: ಇದು ರೆಡ್ಡಿ ಮನದ ಮಾತು

ಇವರು ರಾಜಕೀಯದಿಂದ ದೂರ ಉಳಿದರೂ ರಾಜಕೀಯ ನೇತಾರರು ಇವರನ್ನು ಹುಡುಕಿಕೊಂಡು ಬರುತ್ತಿದ್ದರು. ಪಕ್ಷಗಳ ಕೃಷಿ ಘಟಕ, ಮಂಡಳಿಗಳ ಸದಸ್ಯರಾಗಲು ದುಂಬಾಲು ಬೀಳುತ್ತಿದ್ದರು. ನಾರಾಯಣರೆಡ್ಡಿ ಅವರು ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲರ ಬೀಗರೂ ಹೌದು. ಶಿಫಾರಸು, ವಶೀಲಿಗಳಿಂದ ಇವರು ಸದಾ ದೂರ.

ಬಿಜೆಪಿ ಸರ್ಕಾರ ಸಾವಯವ ಕೃಷಿ ಜನಪ್ರಿಯ ಮಾಡಲು ಸಾವಯವ ಕೃಷಿ ಮಿಷನ್ ಆರಂಭಿಸಿದಾಗ, ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಒಂದೇ ವರ್ಷದಲ್ಲಿ ಮಿಷನ್ ಕಾರ್ಯನೀತಿ ಸರಿ ಎನಿಸದಿದ್ದಾಗ, ಅದನ್ನು ವಿರೋಧಿಸಿ ಹೊರನಡೆದರು.

ಕಳೆದ ಕೆಲವು ವರ್ಷಗಳಿಂದ ತಮ್ಮ ಹೊಲದಲ್ಲೇ ತರಬೇತಿ ಕೇಂದ್ರ ಆರಂಭಿಸಿ, ತಮ್ಮನ್ನು ಹುಡುಕಿ ಬರುವ ರೈತರಿಗೆ ಪ್ರಾಯೋಗಿಕ ಪಾಠ ಹೇಳಿಕೊಡುತ್ತಿದ್ದರು. ದೇಶದೆಲ್ಲೆಡೆಯಿಂದ ರೈತರು ಇವರ ಅನುಭವ ಕೇಳಲು ಬರುತ್ತಿದ್ದರು. ಕಡಿಮೆ ನೀರು, ಬೀಜ, ಗೊಬ್ಬರ ಬಳಸಿ ಹೆಚ್ಚಿನ ಇಳುವರಿ ಪಡೆವ ಶ್ರೀ ಭತ್ತ ಪದ್ದತಿಯನ್ನು ರೈತರಿಗೆ ಪರಿಚಯಿಸಿದವರು ಇವರೇ. ಮುಂದೆ ಇದನ್ನು ಕೃಷಿ ವಿಶ್ವವಿದ್ಯಾಲಯ ‘ಎರೋಬಿಕ್ ಪದ್ಧತಿ’ ಎಂದು ಹೆಸರಿಟ್ಟು, ತನ್ನದೇ ಸಂಶೋಧನೆ ಎಂಬಂತೆ ಬೀಗಿತು!

ಇದನ್ನೂ ಓದಿ: ಸಹಜ ಜೀವನಕ್ಕಾಗಿ ಹಳ್ಳಗಳಿಗೆ ಹಿಂತಿರುಗಿ: ಕೃಷಿ ತಜ್ಞ ನಾರಾಯಣ ರೆಡ್ಡಿ ಸಲಹೆ

ಮಸನೊಬು ಫುಕುವೊಕ ಇವರ ಹೊಲಕ್ಕೆ ಬಂದು ಇಡೀ ದಿನ ಕಳೆದ ಕ್ಷಣಗಳ ಖುಷಿಯನ್ನು ಹೇಳುವಾಗ ರೆಡ್ಡಿಯವರ ಕಣ್ಣುಗಳಲ್ಲಿ ಹೊಳಪು. ರೆಡ್ಡಿಯವರು ಕನ್ನಡ ನಾಡಿನ ಪುಕುವೊಕ. ಇವರ ಸೆಳೆತಕ್ಕೆ ಸಿಕ್ಕ ಅದೆಷ್ಟೋ ಎಳೆಯರು ನಗರದ ಗದ್ದಲ ಬಿಟ್ಟು ಮಣ್ಣಿನ ಮಕ್ಕಳಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಇವರ ಭಾಷಣಗಳ ವಿಡಿಯೋ ನೋಡಿದ ನಗರವಾಸಿಗಳೂ ಕೂಡ `ನಾವು ಒಂದಷ್ಟು ಜಮೀನು ಕೊಂಡು, ಮನೆಗಾಗುವಷ್ಟನ್ನಾದರೂ ಬೆಳೆದುಕೊಳ್ಳಬೇಕು' ಎಂದು ಆಸೆ ಪಡುತ್ತಿದ್ದರು.

ಕಳೆದ ವರ್ಷ, ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ನಾರಾಯಣ ರೆಡ್ಡಿಯವರ ಮಾತುಕತೆ ಇತ್ತು. ಈ ಕಾರ್ಯಕ್ರಮದ ನಿರೂಪಕ ನಾನಾದದ್ದು ನನ್ನ ಬದುಕಿನ ಸಾರ್ಥಕ ಕ್ಷಣಗಳು. ಕನ್ನಡ ಭವನದ ಆಸನಗಳೆಲ್ಲಾ ತುಂಬಿ, ಜನ ನಿಂತು ಇವರ ಮಾತು ಕೇಳುತ್ತಿದ್ದರು.

ಇವರು ಪ್ರಶಸ್ತಿ ಹಿಂದೆ ಹೋಗಿದ್ದೇ ಇಲ್ಲ; ಅವೇ ಇವರನ್ನು ಹುಡುಕಿಕೊಂಡು ಬಂದವು. ನಾಡೋಜ, ರಾಜ್ಯೋತ್ಸವ ಮೊದಲಾದ ಪ್ರಶಸ್ತಿಗಳು ಅವುಗಳಲ್ಲಿ ಕೆಲವು.

ವಿಜ್ಞಾನಿಯ ಖಚಿತತೆ, ಸಂತನ ಸರಳತೆ , ತಾಯಿಯ ಪ್ರೀತಿ, ಗುರುವಿನ ಜ್ಞಾನ ಮತ್ತು ಮಗುವಿನ ಮುಗ್ಧತೆ ಒಟ್ಟಾಗಿ ಮೇಳೈಸಿದ್ದ ವ್ಯಕ್ತಿತ್ವ ನಾರಾಯಣರೆಡ್ಡಿ ಅವರದು. ಸಾವಯವ ಚಳುವಳಿಗೆ ಗಟ್ಟಿ ದನಿಯಾಗಿದ್ದ ರೆಡ್ಡಿಯವರು, ಆಂದೋಲನದ ಹಾದಿಯಲ್ಲಿ ಮಾಸಲಾರದ ಹೆಜ್ಜೆ ಗುರುತುಗಳನ್ನು ಉಳಿಸಿ ಹೋಗಿದ್ದಾರೆ.

ಪುಸ್ತಕ:ನೆಲದೊಡಲ ಚಿಗುರು (ನಾಡೋಜ ಡಾ. ಎಲ್ ನಾರಾಯಣ ರೆಡ್ಡಿ ಅವರ ಬದುಕು, ಚಿಂತನೆ)

ಲೇಖಕರು: ಎನ್.ಎಲ್. ಆನಂದ್ ಹಾಗೂ ಗುಂಡಪ್ಪ ದೇವಿಕೇರಿ.

ಪ್ರಕಾಶನ: ನವಕರ್ನಾಟಕ ಪಬ್ಲಿಕೇಶನ್ಸ್; ಪುಟ: 168; ಬೆಲೆ: 140 ರೂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.