ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ ಜೊಯಿಡಾ ತಾಲ್ಲೂಕಿನ ಡಿಗ್ಗಿ ಬಳಿಯ ಪಾಟ್ಷೆ ಗ್ರಾಮಕ್ಕೆ ಅಧ್ಯಯನದ ಸಲುವಾಗಿ ಹೋಗಿದ್ದರು. ರಾತ್ರಿ ತಡವಾದ ಕಾರಣಕ್ಕೆ ಸ್ಥಳೀಯ ಪರಿಚಯಸ್ಥರ ಮನೆಯಲ್ಲಿ ವಾಸ್ತವ್ಯ ಹೂಡುವ ಅನಿವಾರ್ಯ ಉಂಟಾಯಿತು. ತಡರಾತ್ರಿಯಾಗಿದ್ದರಿಂದ ಇವರು ಉಳಿದಿದ್ದ ಮನೆಯವರು ಮಾಡಿಟ್ಟ ಅನ್ನ ಖಾಲಿ ಆಗಿತ್ತು. ಊಟಕ್ಕೆ ಬೇಯಿಸಿದ ಗೆಡ್ಡೆ ನೀಡಿದ್ದರು. ಹಸಿದ ಹೊಟ್ಟೆ ತುಂಬಿಸಿದ್ದ, ಬೇಯಿಸಿದ ಗೆಡ್ಡೆಯ ರುಚಿಗೆ ಮನಸೋತರು. ಗೆಡ್ಡೆಗೆಣಸಿನ ಪ್ರಾಮುಖ್ಯತೆ ಹೊರ ಜಗತ್ತಿಗೂ ತಿಳಿಸಿ ಎಂದು ಜೊತೆಗಿದ್ದ ಸ್ಥಳೀಯ ಸ್ನೇಹಿತರಿಗೆ ಹೇಳಿದರು. ಅದು ‘ಗೆಡ್ಡೆಗೆಣಸು ಮೇಳ’ ಆರಂಭಕ್ಕೆ ನಾಂದಿಯಾಯಿತು.

ಈಚೆಗೆ ಜೊಯಿಡಾದ ಕುಣಬಿ ಭವನದ ಆವರಣದಲ್ಲಿ ನಡೆದ ಮೇಳದಲ್ಲಿ ಬಗೆಬಗೆಯ ಗೆಡ್ಡೆಗೆಣಸುಗಳನ್ನು ಕುತೂಹಲಭರಿತರಾಗಿ ನೋಡುತ್ತ, ಅವುಗಳ ಮಹತ್ವದ ಬಗ್ಗೆ ವಿವರಿಸುತ್ತಲೇ, ಮೇಳ ಆರಂಭದ ಹಿನ್ನೆಲೆಯನ್ನು ಬಿಚ್ಚಿಟ್ಟರು ಸಾಯಿಮನೆ.

‘ಜೊಯಿಡಾದ ಕಾಡಿನಂತೆ ಇಲ್ಲಿನ ನೆಲವೂ ಸಂಪದ್ಭರಿತ. ಈ ಕಾರಣಕ್ಕಾಗಿಯೇ ಇಲ್ಲಿ ಬೆಳೆಯುವಷ್ಟು ವೈವಿಧ್ಯಮಯ ಗೆಡ್ಡೆಗೆಣಸುಗಳು ಇತರೆಡೆ ಸಿಗುವುದು ಕಷ್ಟ. ವಿಪರ್ಯಾಸ
ವೆಂದರೆ ಗೆಡ್ಡೆಯ ಮೌಲ್ಯ ಸ್ಥಳೀಯರಿಗೆ ತಿಳಿದಿರಲಿಲ್ಲ. ಇದು ಅವರ ಪಾಲಿಗೆ ಕೇವಲ ಆಹಾರ ಮಾತ್ರ. ಹೊರಜಗತ್ತಿಗೆ ಅದ ಅಚ್ಚರಿಯೂ ಹೌದು. ಇಲ್ಲಿ ಮನುಷ್ಯನಷ್ಟು ಎತ್ತರದ, ಕಾಡುಪ್ರಾಣಿಗಳ ಆಕಾರ ಹೋಲುವ ಗೆಡ್ಡೆಗಳು ಬೆಳೆಯುತ್ತವೆ. ಅವುಗಳಲ್ಲಿ ಪೋಷಕಾಂಶ ಗುಣವೂ ಹೆಚ್ಚು. ಇದನ್ನು ಹೊರಜಗತ್ತಿಗೆ ಪರಿಚಯಿಸುವ ಅಗತ್ಯವಿತ್ತು. ಅದಕ್ಕೆ ‘ಗೆಡ್ಡೆಗೆಣಸು ಮೇಳ’ ವೇದಿಕೆಯಾಯಿತು’ ಎಂದು ಖುಷಿಯಿಂದ ಹೇಳಿದರು.

ಗಡ್ಡೆಗೆಣಸಿಗೆ ಇಂತಿಷ್ಟೇ ದರ ಇದೆ ಎಂಬುದೂ ಸ್ಥಳಿಯರಿಗೆ ಗೊತ್ತಿರಲಿಲ್ಲ. ಮೊದಲ ಗಡ್ಡೆ ಗೆಣಸು ಮೇಳದಲ್ಲಿ ಭಾಗಿಯಾಗಿದ್ದ ತಿರುವನಂತಪುರದ ಕೇಂದ್ರೀಯ ಗಡ್ಡೆಗೆಣಸು ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಗಡ್ಡೆ ಖರೀದಿಸಲು ದರ ವಿಚಾರಿಸಿದರೆ ಮಾರಾಟಕ್ಕೆ ಕುಳಿತಿದ್ದ ಮಹಿಳೆಯರು ಏನು ಹೇಳಬೇಕು ಎನ್ನುವುದು ತಿಳಿಯದೆ ಮೌನಕ್ಕೆ ಶರಣಾಗಿದ್ದರು. ಆಗ ವಿಜ್ಞಾನಿಯೇ ₹100 ನೀಡಿ ಗಡ್ಡೆ ಖರೀದಿಸಿ, ಅವರಿಗೆ ದರ ಪಾಠ ಹೇಳಿಕೊಟ್ಟಿದ್ದರು.

‘ಗಡ್ಡೆ ಗೆಣಸು ಮೇಳ ಮೊದಲ ಬಾರಿಗೆ ಆಯೋಜಿಸುವಾಗ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಜನರಿಗೆ (ಕುಣಬಿ ಸಮುದಾಯದವರಿಗೆ) ಗಡ್ಡೆಗೆಣಸು ಮಾರಾಟಕ್ಕೆ ಸರಕು ಆಗುತ್ತದೆ ಎಂಬ ಅರಿವು ಇರಲಿಲ್ಲ. ಗಡ್ಡೆಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತೇವೆ ಬನ್ನಿ ಎಂದಾಗ ನಕ್ಕಿದವರೇ ಹೆಚ್ಚು. 2014ರಲ್ಲಿ ಮೊದಲ ಮೇಳ ಆಯೋಜಿಸಿದ್ದಾಗ 88 ಮಂದಿ ಪಾಲ್ಗೊಂಡು, 18 ಬಗೆಯ ಗಡ್ಡೆಗೆಣಸು ಪ್ರದರ್ಶಿಸಿದ್ದರು. ಈಗ 48ಕ್ಕೂ ಹೆಚ್ಚು ಬಗೆಯ ಗಡ್ಡೆಗೆಣಸು ಪ್ರದರ್ಶನಕ್ಕೆ ಬರುತ್ತಿವೆ. ಮಾರಾಟಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಿಂತ ವೀಕ್ಷಣೆಗೆ ಮತ್ತು ಗಡ್ಡೆ ಗೆಣಸು ಖರೀದಿಗೆ ಬರವವರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿದೆ’ ಎನ್ನುತ್ತಾರೆ ಮೇಳದ ರೂವಾರಿ, ಜೊಯಿಡಾ ಗಡ್ಡೆ ಗೆಣಸು ಬೆಳೆಗಾರರ ಸಂಘದ ಅಧ್ಯಕ್ಷ ಜಯಾನಂದ ಡೇರೆಕರ.

ಮೇಳವು ವರ್ಷದಲ್ಲಿ ಒಂದೇ ದಿನ ನಡೆದರೂ ಗಡ್ಡೆ ಗೆಣಸುಗಳ ಮಹತ್ವವನ್ನು ಜೊಯಿಡಾ ಆಚೆಗೆ ಪಸರಿಸಿದೆ. ಮೊದಲ ಕೆಲವು ವರ್ಷ ಮೇಳಕ್ಕೆ ಬರುವವರ ಸಂಖ್ಯೆ ಸೀಮಿತವಾಗಿತ್ತು. ಈ ಬಾರಿ ಮಹಾರಾಷ್ಟ್ರದ ರತ್ನಗಿರಿ, ಸತಾರಾ, ಗೋವಾ, ಬೆಂಗಳೂರು, ಹುಬ್ಬಳ್ಳಿ–ಹೀಗೆ ನಾನಾ ಭಾಗಗಳಿಂದ ಜನರು ಬಂದಿದ್ದರು.

ಕಾಡಿನ ನಡುವಿನ ಹಳ್ಳಿಯ ಜನರು ತಮಗಷ್ಟೆ ಬೆಳೆದುಕೊಳ್ಳುವ ಪದಾರ್ಥವನ್ನು ಹೊರ ಊರಿಗೆ, ಹೊರ ರಾಜ್ಯಕ್ಕೆ ಪರಿಚಯಿಸುವಂತೆ ಮಾಡಿದ್ದು ಜೊಯಿಡಾದಲ್ಲಿ ನಡೆಯುವ ಗಡ್ಡೆಗೆಣಸು ಮೇಳ. 2014ರಲ್ಲಿ ಆರಂಭಗೊಂಡ ಮೇಳ ಸತತವಾಗಿ 11 ವರ್ಷಗಳಿಂದ ನಡೆದುಕೊಂಡು ಬಂದಿದೆ. ಕಾಳಿ ಹಿನ್ನೀರಿನಲ್ಲಿ ಮೋಜು ಮಾಡಲು, ವರ್ಷಾಂತ್ಯದ ವೇಳೆ ಇಲ್ಲಿನ ಹೋಮ್ ಸ್ಟೇ, ರೆಸಾರ್ಟ್ಗಳಿಗೆ ಮಾತ್ರವೇ ಬರುತ್ತಿದ್ದ ಪ್ರವಾಸಿಗರನ್ನು ಜನವರಿ ತಿಂಗಳಿನಲ್ಲಿ ನಡೆಯುವ ‘ಗಡ್ಡೆಗೆಣಸು ಮೇಳ’ ಸೆಳೆಯತೊಡಗಿದೆ.

ಮೇಳದಲ್ಲಿ ಜಗತ್ತಿನಲ್ಲಿ ಬೇರೆಲ್ಲೂ ಬೆಳೆಯದ ಮುಡ್ಲಿ ಕೋನ್ (ಉದ್ದನೆಯ ಕೆಸವಿನ ಗಡ್ಡೆ), ಆನೆಗಾತ್ರದ ಹಾತಿ ಕೋನ್, ನಾಗರಹಾವಿನ ಆಕಾರದ ನಾಗರ ಕೋನ್, ಆಲೆ ಕೋನ್, ತಾಂಬಡೆ ಕೋನ್, ಮುಣಕೆ ಕೋನ್, ಡುಕರ್ ಕೋನ್, ಕಾಟೆ ಕಣಗಾ, ಸುವರ್ಣ ಗಡ್ಡೆ, ಚಿರಾಕೆ.

ಬಹುಪಾಲು ಕಾಳಿ ಹುಲಿ ಸಂರಕ್ಷಿತಾರಣ್ಯ, ಕಾಳಿನದಿ, ನದಿಯ ಹಿನ್ನೀರುಗಳನ್ನೇ ಆವರಿಸಿಕೊಂಡಿರುವ ಈ ನೆಲದಲ್ಲಿ ಕೃಷಿ ಭೂಮಿ ಪ್ರಮಾಣ ತೀರಾ ಕಡಿಮೆ. ಕಾಡಿನ ಅಂಚಿನಲ್ಲೇ ಜೀವನ ಕಟ್ಟಿಕೊಂಡಿರುವ ಕುಣಬಿ ಸಮುದಾಯದ ಜನರು ಹಸಿವೆ ನೀಗಿಸಿಕೊಳ್ಳಲು ಮನೆಯ ಹಿತ್ತಲಿನಲ್ಲಿ ಬೆಳೆಯುವ ಗಡ್ಡೆಗೆಣಸು ಈಗ ಅವರ ಮನೆಯ ಹಿತ್ತಲು ದಾಟಿ ಊರಿನಾಚೆಗೂ ಸಾಗುತ್ತಿದೆ. ಪೇಟೆ, ಪಟ್ಟಣಗಳಿಂದ ದೂರವೇ ಉಳಿದ ಕುಣಬಿ ಜನರಿಗೆ ಮಾತ್ರ ಆಹಾರವಾಗುತ್ತಿದ್ದ ಅವು ಈಗ ಐಷಾರಾಮಿ ಜನರ ಊಟದ ತಟ್ಟೆಯಲ್ಲೂ ಸ್ಥಾನ ಪಡೆದುಕೊಳ್ಳುತ್ತಿವೆ.

ತುಂಡು ಭೂಮಿಯಲ್ಲಿ ಕೃಷಿ, ಜೀವನೋಪಾಯಕ್ಕೆ ಕೂಲಿನಾಲಿ ಮಾಡಿಕೊಂಡು ಬದುಕುವ ಕುಣಬಿ ಜನರನ್ನು ಒಂದೆಡೆ ಸೇರಿಸುತ್ತಿರುವ ಮೇಳವು ಜೀವನೋಪಾಯಕ್ಕೆ ತಕ್ಕಮಟ್ಟಿಗಿನ ಆದಾಯ ಗಳಿಕೆಗೂ ದಾರಿಮಾಡಿಕೊಡುತ್ತಿದೆ. ಅರ್ಧ ವರ್ಷಕ್ಕೆ ಸಾಲುವಷ್ಟು ಗಡ್ಡೆಗೆಣಸು ಬೆಳೆದಿಟ್ಟುಕೊಂಡ ಕುಣಬಿ ಸಮುದಾಯದ ಮಹಿಳೆಯರು ಜೊಯಿಡಾದ ಕುಣಬಿ ಭವನದ ಆವರಣದಲ್ಲಿ ನಡೆಯುವ ಮೇಳಕ್ಕೆ ತಂದು ಪ್ರದರ್ಶಿಸುತ್ತಾರೆ. ಮೇಳ ಬರುವುದನ್ನೇ ಕಾದು ಅಲ್ಲಿ ತರಹೇವಾರಿ ವಿಧದ, ದೊಡ್ಡ ಗಾತ್ರದ ಗಡ್ಡೆಗೆಣಸು ಪ್ರದರ್ಶಿಸುವುದು ಹಲವರಿಗೆ ಗತ್ತಿನ ವಿಷಯವೂ ಹೌದು.

ಕುಣಬಿ ಸಮಾಜವು ಸಂರಕ್ಷಿಸಿಕೊಂಡು ಬರುತ್ತಿರುವ ಕೆಸುವನ್ನು ಗುರುತಿಸಿ, ಸಸ್ಯ ತಳಿಗಳು ಹಾಗೂ ರೈತರ ಹಕ್ಕು ಪ್ರಾಧಿಕಾರವು ‘ಸಸ್ಯ ವಂಶವಾಹಿ ಸಂರಕ್ಷಣಾ ಪ್ರಶಸ್ತಿ’ಯನ್ನೂ ನೀಡಿದೆ.

ಗೆಡ್ಡೆಗೆಣಸಿಗೆ ಇಂತಿಷ್ಟೇ ದರ ಇದೆ ಎಂಬುದೂ ಸ್ಥಳಿಯರಿಗೆ ಗೊತ್ತಿರಲಿಲ್ಲ. ಮೊದಲ ಗೆಡ್ಡೆ ಗೆಣಸು ಮೇಳದಲ್ಲಿ ಭಾಗಿಯಾಗಿದ್ದ ತಿರುವನಂತಪುರದ ಕೇಂದ್ರೀಯ ಗೆಡ್ಡೆಗೆಣಸು ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಗೆಡ್ಡೆ ಖರೀದಿಸಲು ದರ ವಿಚಾರಿಸಿದರೆ ಮಾರಾಟಕ್ಕೆ ಕುಳಿತಿದ್ದ ಮಹಿಳೆಯರು ಏನು ಹೇಳಬೇಕು ಎನ್ನುವುದು ತಿಳಿಯದೆ ಮೌನಕ್ಕೆ ಶರಣಾಗಿದ್ದರು. ಆಗ ವಿಜ್ಞಾನಿಯೇ ₹100 ನೀಡಿ ಗೆಡ್ಡೆ ಖರೀದಿಸಿ, ಅವರಿಗೆ ವ್ಯಾಪಾರದ ಪಾಠ ಹೇಳಿಕೊಟ್ಟಿದ್ದರು.

‘ಗೆಡ್ಡೆ ಗೆಣಸು ಮೇಳ ಮೊದಲ ಬಾರಿಗೆ ಆಯೋಜಿಸುವಾಗ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಜನರಿಗೆ (ಕುಣಬಿ ಸಮುದಾಯದವರಿಗೆ) ಗೆಡ್ಡೆಗೆಣಸು ಮಾರಾಟಕ್ಕೆ ಸರಕು ಆಗುತ್ತದೆ ಎಂಬ ಅರಿವು ಇರಲಿಲ್ಲ. ಗೆಡ್ಡೆಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತೇವೆ ಬನ್ನಿ ಎಂದಾಗ ನಕ್ಕಿದವರೇ ಹೆಚ್ಚು. 2014ರಲ್ಲಿ ಮೊದಲ ಮೇಳ ಆಯೋಜಿಸಿದ್ದಾಗ 88 ಮಂದಿ ಪಾಲ್ಗೊಂಡು, 18 ಬಗೆಯ ಗಡ್ಡೆಗೆಣಸು ಪ್ರದರ್ಶಿಸಿದ್ದರು. ಈಗ 48ಕ್ಕೂ ಹೆಚ್ಚು ಬಗೆಯ ಗೆಡ್ಡೆಗೆಣಸು ಪ್ರದರ್ಶನಕ್ಕೆ ಬರುತ್ತಿವೆ. ಮಾರಾಟಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಿಂತ ವೀಕ್ಷಣೆಗೆ ಮತ್ತು ಗೆಡ್ಡೆ ಗೆಣಸು ಖರೀದಿಗೆ ಬರವವರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿದೆ’ ಎನ್ನುತ್ತಾರೆ ಮೇಳದ ರೂವಾರಿ, ಜೊಯಿಡಾ ಗೆಡ್ಡೆ ಗೆಣಸು ಬೆಳೆಗಾರರ ಸಂಘದ ಅಧ್ಯಕ್ಷ ಜಯಾನಂದ ಡೇರೆಕರ.

ಮೇಳವು ವರ್ಷದಲ್ಲಿ ಒಂದೇ ದಿನ ನಡೆದರೂ ಗೆಡ್ಡೆ ಗೆಣಸುಗಳ ಮಹತ್ವವನ್ನು ಜೊಯಿಡಾ ಆಚೆಗೆ ಪಸರಿಸಿದೆ. ಮೊದಲ ಕೆಲವು ವರ್ಷ ಮೇಳಕ್ಕೆ ಬರುವವರ ಸಂಖ್ಯೆ ಸೀಮಿತವಾಗಿತ್ತು. ಈ ಬಾರಿ ಮಹಾರಾಷ್ಟ್ರದ ರತ್ನಗಿರಿ, ಸತಾರಾ, ಗೋವಾ, ಬೆಂಗಳೂರು, ಹುಬ್ಬಳ್ಳಿ–ಹೀಗೆ ನಾನಾ ಭಾಗಗಳಿಂದ ಜನರು ಬಂದಿದ್ದರು.

ಕಾಡಿನ ನಡುವಿನ ಹಳ್ಳಿಯ ಜನರು ತಮಗಷ್ಟೆ ಬೆಳೆದುಕೊಳ್ಳುವ ಪದಾರ್ಥವನ್ನು ಹೊರ ಊರಿಗೆ, ಹೊರ ರಾಜ್ಯಕ್ಕೆ ಪರಿಚಯಿಸುವಂತೆ ಮಾಡಿದ್ದು ಜೊಯಿಡಾದಲ್ಲಿ ನಡೆಯುವ ಗೆಡ್ಡೆಗೆಣಸು ಮೇಳ. 2014ರಲ್ಲಿ ಆರಂಭಗೊಂಡ ಮೇಳ ಸತತವಾಗಿ 11 ವರ್ಷಗಳಿಂದ ನಡೆದುಕೊಂಡು ಬಂದಿದೆ. ಕಾಳಿ ಹಿನ್ನೀರಿನಲ್ಲಿ ಮೋಜು ಮಾಡಲು, ವರ್ಷಾಂತ್ಯದ ವೇಳೆ ಇಲ್ಲಿನ ಹೋಮ್ ಸ್ಟೇ, ರೆಸಾರ್ಟ್ಗಳಿಗೆ ಮಾತ್ರವೇ ಬರುತ್ತಿದ್ದ ಪ್ರವಾಸಿಗರನ್ನು ಜನವರಿ ತಿಂಗಳಿನಲ್ಲಿ ನಡೆಯುವ ‘ಗೆಡ್ಡೆಗೆಣಸು ಮೇಳ’ ಸೆಳೆಯತೊಡಗಿದೆ.

ಮೇಳದಲ್ಲಿ ಜಗತ್ತಿನಲ್ಲಿ ಬೇರೆಲ್ಲೂ ಬೆಳೆಯದ ಮುಡ್ಲಿ ಕೋನ್ (ಉದ್ದನೆಯ ಕೆಸವಿನ ಗೆಡ್ಡೆ), ಆನೆಗಾತ್ರದ ಹಾತಿ ಕೋನ್, ನಾಗರಹಾವಿನ ಆಕಾರದ ನಾಗರ ಕೋನ್, ಆಲೆ ಕೋನ್, ತಾಂಬಡೆ ಕೋನ್, ಮುಣಕೆ ಕೋನ್, ಡುಕರ್ ಕೋನ್, ಕಾಟೆ ಕಣಗಾ, ಸುವರ್ಣ ಗೆಡ್ಡೆ, ಚಿರಾಕೆ...

ಬಹುಪಾಲು ಕಾಳಿ ಹುಲಿ ಸಂರಕ್ಷಿತಾರಣ್ಯ, ಕಾಳಿನದಿ, ನದಿಯ ಹಿನ್ನೀರುಗಳನ್ನೇ ಆವರಿಸಿಕೊಂಡಿರುವ ಈ ನೆಲದಲ್ಲಿ ಕೃಷಿ ಭೂಮಿ ಪ್ರಮಾಣ ತೀರಾ ಕಡಿಮೆ. ಕಾಡಿನ ಅಂಚಿನಲ್ಲೇ ಜೀವನ ಕಟ್ಟಿಕೊಂಡಿರುವ ಕುಣಬಿ ಸಮುದಾಯದ ಜನರು ಹಸಿವೆ ನೀಗಿಸಿಕೊಳ್ಳಲು ಮನೆಯ ಹಿತ್ತಲಿನಲ್ಲಿ ಬೆಳೆಯುವ ಗೆಡ್ಡೆಗೆಣಸು ಈಗ ಅವರ ಮನೆಯ ಹಿತ್ತಲು ದಾಟಿ ಊರಿನಾಚೆಗೂ ಸಾಗುತ್ತಿದೆ. ಪೇಟೆ, ಪಟ್ಟಣಗಳಿಂದ ದೂರವೇ ಉಳಿದ ಕುಣಬಿ ಜನರಿಗೆ ಮಾತ್ರ ಆಹಾರವಾಗುತ್ತಿದ್ದ ಅವು ಈಗ ಐಷಾರಾಮಿ ಜನರ ಊಟದ ತಟ್ಟೆಯಲ್ಲೂ ಸ್ಥಾನ ಪಡೆದುಕೊಳ್ಳುತ್ತಿವೆ.

ತುಂಡು ಭೂಮಿಯಲ್ಲಿ ಕೃಷಿ, ಜೀವನೋಪಾಯಕ್ಕೆ ಕೂಲಿನಾಲಿ ಮಾಡಿಕೊಂಡು ಬದುಕುವ ಕುಣಬಿ ಜನರನ್ನು ಒಂದೆಡೆ ಸೇರಿಸುತ್ತಿರುವ ಮೇಳವು ಜೀವನೋಪಾಯಕ್ಕೆ ತಕ್ಕಮಟ್ಟಿಗಿನ ಆದಾಯ ಗಳಿಕೆಗೂ ದಾರಿಮಾಡಿಕೊಡುತ್ತಿದೆ. ಅರ್ಧ ವರ್ಷಕ್ಕೆ ಸಾಲುವಷ್ಟು ಗೆಡ್ಡೆಗೆಣಸು ಬೆಳೆದಿಟ್ಟುಕೊಂಡ ಕುಣಬಿ ಸಮುದಾಯದ ಮಹಿಳೆಯರು ಜೊಯಿಡಾದ ಕುಣಬಿ ಭವನದ ಆವರಣದಲ್ಲಿ ನಡೆಯುವ ಮೇಳಕ್ಕೆ ತಂದು ಪ್ರದರ್ಶಿಸುತ್ತಾರೆ. ಮೇಳ ಬರುವುದನ್ನೇ ಕಾದು ಅಲ್ಲಿ ತರಹೇವಾರಿ ವಿಧದ, ದೊಡ್ಡ ಗಾತ್ರದ ಗೆಡ್ಡೆಗೆಣಸು ಪ್ರದರ್ಶಿಸುವುದು ಹಲವರಿಗೆ ಗತ್ತಿನ ವಿಷಯವೂ ಹೌದು.

ಕುಣಬಿ ಸಮಾಜವು ಸಂರಕ್ಷಿಸಿಕೊಂಡು ಬರುತ್ತಿರುವ ಕೆಸುವನ್ನು ಗುರುತಿಸಿ, ಸಸ್ಯ ತಳಿಗಳು ಹಾಗೂ ರೈತರ ಹಕ್ಕು ಪ್ರಾಧಿಕಾರವು ‘ಸಸ್ಯ ವಂಶವಾಹಿ ಸಂರಕ್ಷಣಾ ಪ್ರಶಸ್ತಿ’ಯನ್ನೂ ನೀಡಿದೆ

ಇದು ‘ಬೆಳೆ’ಯಲ್ಲ!

‘ಜನರಿಂದ ಗೆಡ್ಡೆಗೆಣಸುಗಳಿಗೆ ಬೇಡಿಕೆ ಸಾಕಷ್ಟಿದೆ. ಆದರೆ ಬೇಡಿಕೆಗೆ ತಕ್ಕಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ ಎಂಬುದೇ ಬೇಸರ. ಹಿತ್ತಲಿನಲ್ಲಿ ಮಾತ್ರ ಬೆಳೆಯುವ ಗೆಡ್ಡೆಗೆಣಸನ್ನು ಗದ್ದೆಯಲ್ಲಿ ಬೆಳೆಸಲು ಮನಸ್ಸು ಮಾಡುತ್ತಿಲ್ಲ. ಗದ್ದೆಯಲ್ಲಿ ಬೆಳೆಸಿದರೆ ಕಾಡುಹಂದಿಯ ಕಾಟದಿಂದ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಾಗದು ಎಂಬ ಭಯ ಅವರಲ್ಲಿದೆ. ಹಣ ಖರ್ಚು ಮಾಡಿ ಬೆಳೆದರೂ ಕಾಡುಪ್ರಾಣಿಯ ಹಾವಳಿಯಿಂದ ಹಾನಿಯಾದರೆ ಪರಿಹಾರವೂ ಸಿಗದು. ಏಕೆಂದರೆ ಗೆಡ್ಡೆಗೆಣಸು ಅಧಿಕೃತ ‘ಬೆಳೆ’ ಎಂಬುದು ಇನ್ನೂ ಘೋಷಣೆಯಾಗಿಲ್ಲ. ರೈತರನ್ನು ಉತ್ತೇಜಿಸಲು ಮೊದಲಿಗೆ ಗೆಡ್ಡೆ ಗೆಣಸಿಗೆ ಬೆಳೆ ಮಾನ್ಯತೆ ಒದಗಿಸಬೇಕಾಗಿದೆ. ಬಳಿಕ ರೈತರ ಮನವೊಲಿಸಿ ಗೆಡ್ಡೆಗೆಣಸು ಬೆಳೆ ವಿಸ್ತರಿಸುವ ಯೋಚನೆ ಇದೆ’ ಎನ್ನುತ್ತಾರೆ ಜೊಯಿಡಾ ಗೆಡ್ಡೆ ಗೆಣಸು ಬೆಳೆಗಾರರ ಸಂಘದ ಅಧ್ಯಕ್ಷ ಜಯಾನಂದ ಡೇರೆಕರ.

‘ಜೊಯಿಡಾದ ನೆಲದಲ್ಲಿ ಬೆಳೆಯುವ ಗೆಡ್ಡೆಗೆಣಸಿನಲ್ಲಿ ಅಗತ್ಯ ಪೋಷಕಾಂಶಗಳು ಹೇರಳವಾಗಿವೆ ಎಂಬುದಾಗಿ ಆಹಾರ ತಜ್ಞರು ಹೇಳುತ್ತಾರೆ. ಇಲ್ಲಿ ಮಾತ್ರ ಬೆಳೆಯುವ ಮುಡ್ಲಿ ಕೋನ್ ರುಚಿಯ ಜೊತೆಗೆ ಉತ್ತಮ ಆಹಾರವೂ ಹೌದು. ಗೆಡ್ಡೆಗೆಣಸುಗಳನ್ನು ಬಳಸಿ ವಿವಿಧ ಬಗೆಯ ಆಹಾರಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಿಸಲು ಅವುಗಳ ಮೌಲ್ಯವರ್ಧನೆ ಮಾಡುವ ಅಗತ್ಯವಿದೆ’ ಎಂಬುದಾಗಿ ಬಾಲಚಂದ್ರ ಸಾಯಿಮನೆ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.