ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಭ್ರಷ್ಟಾಚಾರದ ಹಲವು ಮುಖಗಳು

Published 24 ಮಾರ್ಚ್ 2024, 0:03 IST
Last Updated 24 ಮಾರ್ಚ್ 2024, 0:03 IST
ಅಕ್ಷರ ಗಾತ್ರ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರದಲ್ಲಿ ಖಾತೆಗಾಗಿ ನಡೆದ ‘ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ’ದ ಹೋರಾಟದ ಮೂಲಕ ಹುಟ್ಟು ಪಡೆದಿದ್ದೇ ‘ಬೆಂಗಳೂರಿನ ಭೂಮಾಫಿಯಾ, ಭ್ರಷ್ಟಾಚಾರದ ಚಕ್ರವ್ಯೂಹ– ಗಾಂಧಿಗಿರಿ, ತಂತ್ರಜ್ಞಾನ, ನ್ಯಾಯಕ್ಕಾಗಿ ಅಸ್ತ್ರ’ ಎಂಬ ಪುಸ್ತಕ.

ಕಾನ್ಪುರ ಐಐಟಿಯಿಂದ ಎಂ.ಟೆಕ್ ಪದವಿ ಪಡೆದು, ಸ್ಟೇಟ್‌ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ ಸ್ಟೋನಿ ಬ್ರೂಕ್‌ನಿಂದ ಪಿ.ಎಚ್‌ಡಿ ಪದವಿ ಪಡೆದ ಡಾ. ಶಂಕರ ಕೆ. ಪ್ರಸಾದ್ ಅವರು ತಂತ್ರಾಂಶಗಳ ಅಭಿವೃದ್ಧಿಯ ಜತೆಗೆ, ಸಂಪೂರ್ಣ ಸ್ವರಾಜ್‌ ಪ್ರತಿಷ್ಠಾನದ ಸಂಸ್ಥಾಪಕರೂ ಹೌದು. ‘ಪ್ರಜಾವಾಣಿ’ ಪತ್ರಿಕೆಯನ್ನೂ ಒಳಗೊಂಡು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ನಾಲ್ಕು ದಶಕಗಳ ಕೆಲಸ ಮಾಡಿದ ನೆತ್ರಕೆರೆ ಉದಯಶಂಕರ ಅವರು ಇವರೊಂದಿಗೆ ಜತೆಗೂಡಿ ಸಚ್ಚಿದಾನಂದ ನಗರ ನ್ಯಾಯಪರ ಆಂದೋಲನ ನಡೆಸಿದವರು.

ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಂತ ಸೂರು ಹೊಂದಬೇಕೆಂಬ ಹಲವರು ಬೆಂಗಳೂರಿನ ಭೂಮಾಫಿಯಾದ, ಅಧಿಕಾರಶಾಹಿಗಳ ಭ್ರಷ್ಟಾಚಾರದಂತಹ ಚಕ್ರವ್ಯೂಹಕ್ಕೆ ಸಿಲುಕಿ ನರಳಾಡುತ್ತಿರುವ ಸಂದರ್ಭದಲ್ಲಿ, ತಾವು ಎದುರಿಸಿ, ಜಯಿಸಿದ ಕಥೆಯನ್ನೇ ಅಕ್ಷರ ರೂಪಕ್ಕೆ ಇಳಿಸಲಾಗಿದೆ. ಸುಮಾರು 42 ವಿವಿಧ ಸನ್ನಿವೇಶಗಳಲ್ಲಿ ಎದುರಾದ ಸಮಸ್ಯೆ, ಅದನ್ನು ಪರಿಹರಿಸಲು ಕೈಗೊಂಡ ಕ್ರಮಗಳು, ಅಧಿಕಾರಿಗಳು ಹಾಗೂ ಇನ್ನಿತರ ಪ್ರಮುಖರ ನೆರವು, ಹೆಜ್ಜೆ ಹೆಜ್ಜೆಗೂ ಎದುರಾಗುವ ಮಾಫಿಯಾ, ಭ್ರಷ್ಟಾಚಾರ ಇತ್ಯಾದಿಗಳು ಈ ಕೃತಿಯಲ್ಲಿ ದಾಖಲಾಗಿವೆ.

ಬೆಂಗಳೂರಿಗೆ ಬಂದು ಬದುಕು ಕಂಡುಕೊಳ್ಳಲು ಪರದಾಡುತ್ತಿರುವ ‘ಪ್ರಜೆ’ ಎಂಬ ವ್ಯಕ್ತಿ ಇಲ್ಲಿ ಆಯಾ ಸಂದರ್ಭದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾರೆ. ಅದಕ್ಕೆ ತಮ್ಮ ಹೋರಾಟದಲ್ಲಿ ಎದುರಾದ ಸವಾಲು ಮತ್ತು ಕಂಡುಕೊಂಡ ಮಾರ್ಗೋಪಾಯಗಳ ಕುರಿತು ಶಂಕ್ರಣ್ಣ ಹಾಗೂ ಉದಯಣ್ಣ ಉತ್ತರ ನೀಡುತ್ತಾ, ಸಂಕೀರ್ಣವಾಗಿದ್ದನ್ನು ಸರಳಗೊಳಿಸುತ್ತಾ ಸಾಗುತ್ತಾರೆ. ಇಲ್ಲಿ ಇವರ ಮಾತುಗಳೇ ಪ್ರೇರಣೆ ನೀಡುತ್ತವೆ. ಅಂತಿಮವಾಗಿ ಡಿಜಿಟಲ್ ಮೂಲಕ ಸಾರ್ವಜನಿಕರು ಅಗತ್ಯ ಮಾಹಿತಿ ಪಡೆಯುವ ಅವಕಾಶವೊಂದನ್ನು ಲೇಖಕರು ಇಲ್ಲಿ ಒತ್ತಿ ಹೇಳಿದ್ದಾರೆ. ಕೃತಿಯಲ್ಲಿ 458 ಉಲ್ಲೇಖಗಳನ್ನು ಬಳಸಿದ್ದು, ಇದು ಅವರ ಹೋರಾಟದ ಹಾದಿಯಲ್ಲಿ ದೊರೆತ ನೈಜ ಮಾಹಿತಿಗಳಾಗಿವೆ.

ಬೆಂಗಳೂರಿನ ಭೂಮಾಫಿಯಾ ಭ್ರಷ್ಟಾಚಾರದ ಚಕ್ರವ್ಯೂಹ

ಲೇ: ಶಂಕರ ಕೆ. ಪ್ರಸಾದ್ ಮತ್ತು ನೆತ್ರಕೆರೆ ಉದಯಶಂಕರ

ಪ್ರ: ಸಂಪೂರ್ಣ ಸ್ವರಾಜ್ ಫೌಂಡೇಶನ್‌

ಸಂ: 98450 49970

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT