ಯುವ ಬರಹಗಾರ ದಾದಾಪೀರ್ ಜೈಮನ್ ಅವರ ನಾಲ್ಕನೇ ಪುಸ್ತಕ ‘ಜಂಕ್ಷನ್ ಪಾಯಿಂಟ್’. ಲೇಖಕ ಬರೆದ ಅಂಕಣ ಬರಹಗಳು ಪುಸ್ತಕವಾಗಿ ಹೊರಬಂದಿದೆ. ಹೀಗಾಗಿ ಅವರ ಜೀವನದಲ್ಲಿ ಜರುಗಿದ ನೈಜ ಘಟನೆಗಳೇ ಇಲ್ಲಿನ ಬಹುತೇಕ ಕಥನಕಗಳು.

ಬೆಂಗಳೂರಿನ ಅದರಲ್ಲೂ ‘ಪೀಜಿ’ಯ ಘಟನೆಗಳು ಪುಸ್ತಕದ ತುಂಬಾ ಇವೆ. ಲೇಖಕ ನೋಡಿದ, ಪೀಜಿಯಲ್ಲಿ ಜೊತೆಗೆ ವಾಸ ಮಾಡಿದ ಸಾಮಾನ್ಯ ಜನರೇ ಇಲ್ಲಿನ ಅಂಕಣಗಳ ಹೀರೊಗಳಾಗಿದ್ದಾರೆ.

ನಮ್ಮ ಸುತ್ತಮುತ್ತಲೇ ಇರುವವರೊಳಗಿನ ಮತ್ತೊಂದು ಮುಖ, ಅವರು ಹೇಳಿಕೊಳ್ಳದ, ಹೇಳಿಕೊಂಡ ಕಥೆಗಳು ಇಲ್ಲಿವೆ. ಅವರ ಕಷ್ಟ, ಸುಖ, ಕನಸು, ಬದುಕು, ಭವಿಷ್ಯ ಎಲ್ಲವೂ ಕೂಡ ಯಾವುದೇ ಮುಚ್ಚುಮರೆಯಿಲ್ಲದೆ ಅಕ್ಷರ ರೂಪಕ್ಕಿಳಿದಿದೆ. ಇಲ್ಲಿನ ಇಮ್ಮು, ಕಡೆಪಾನ್ ಬಸ್ಯಾ, ಸೋಮ, ಕ್ಷಮಾ ಮತ್ತಿತರರು ನಮ್ಮ ಸುತ್ತಮುತ್ತಲೇ ಜೀವಿಸುತ್ತಿದ್ದಾರೆ ಎನಿಸುವಷ್ಟು ಆಪ್ತತೆ ಈ ಬರಹಗಳಲ್ಲಿವೆ.

ಪ್ರೀತಿ, ಪ್ರೇಮ, ಬದುಕು, ಸಂಪ್ರದಾಯ, ಊರು ಬಿಟ್ಟುಬಂದವರ ನೆನಪುಗಳು, ಮಹಾನಗರದ ಜೀವನ ಎಲ್ಲವೂ ಬಂದು ಹೋಗುತ್ತವೆ. ಇಲ್ಲಿ ಕೇವಲ ಗೆದ್ದವರ ಕಥೆಗಳಷ್ಟೇ ಇಲ್ಲ, ಸೋತವರ ಕಥೆಗಳೂ ಇವೆ. ಬದುಕಿನ ಗುರಿ ಕಂಡುಕೊಳ್ಳಲು ಓಡುತ್ತಲೇ ಇರುವವರ ಜೀವನದ ತುಣುಕು ಕೂಡ ಕಾಣಸಿಗುತ್ತವೆ.

ಇಲ್ಲಿನ ಕಥನಕಗಳು ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಓದುಗನಿಗೆ ಬರಹಗಾರನ ಆತ್ಮಕಥೆಯಾಗಿ, ಅನುಭವ ಕಥನವಾಗಿ, ಕೆಲವೊಮ್ಮೆ ಒಂದೊಳ್ಳೆ ಕಥೆಯಾಗಿ, ಮತ್ತೊಮ್ಮೆ ತಮ್ಮ ಸುತ್ತಲಿರುವವರ ಜೀವನವಾಗಿ, ಮಗದೊಮ್ಮೆ ತಮ್ಮದೇ ಬದುಕಾಗಿರುವಂತೆ ಭಾಸವಾಗುತ್ತದೆ. ಇಲ್ಲಿನ ಬರಹಗಳಲ್ಲಿ ಓದುಗನ ಅಂತರಂಗವನ್ನು ಶೋಧಿಸುವ ಶಕ್ತಿಯಿದೆ.

ಜಂಕ್ಷನ್ ಪಾಯಿಂಟ್ (ಅನುಭವ ಕಥನ)

ಲೇ: ದಾದಾಪೀರ್ ಜೈಮನ್

ಪ್ರ: ಹರಿವು ಬುಕ್ಸ್

ಸಂ: 8088822171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.