ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪರಿಚಯ: ಕಣ್ಣ ಕನ್ನಡಿಯಲ್ಲಿ ಅಬ್ಬೂರಿನ ಚಿತ್ರಗಳು

Published 8 ಜೂನ್ 2024, 23:59 IST
Last Updated 8 ಜೂನ್ 2024, 23:59 IST
ಅಕ್ಷರ ಗಾತ್ರ

ಅಬ್ಬೂರಿನ ಚಿತ್ರಗಳು ಎಂಬ ಒಕ್ಕಣೆಯೊಂದಿಗೆ ಆರಂಭವಾಗುವ ಈ ಪುಸ್ತಕ ಕೆಲವೆಡೆ ಅಬ್ಬೂರಿನ ವರದಿಗಳಾಗಿ ಬದಲಾಗಿದೆ. ಸರಳವಾಗಿ ನಿರೂಪಿಸುವ ಕಥನಶೈಲಿಯಲ್ಲಿರುವ ಲೇಖನಗಳು ಮುದಕೊಡುತ್ತವೆ. ಬಿಡಿ ಬರೆಹಗಳಾಗಿ ಓದುವಾಗ ಪುನರಾವರ್ತನೆಯಾದರೂ ಆ ಲೇಖನಕ್ಕೆ ಮಾಹಿತಿ ಸಂಗತವಾಗಿರುತ್ತದೆ. ಒಟ್ಟಿಗೆ ಪುಸ್ತಕ ಓದುವಾಗ ಚೂರು ತೊಡಕೆನಿಸುತ್ತದೆ. ಇದನ್ನು ಹೊರತು ಪಡಿಸಿ, ಅಬ್ಬೂರಿನ ಚಿತ್ರಗಳು ನಮ್ಮ ನಿಮ್ಮ ಸುತ್ತಲಿನ ಯಾವ ಗ್ರಾಮದ ಚಿತ್ರವಾದರೂ ಆಗಿರಬಹುದು. ಜಾತಿ ಪದ್ಧತಿ, ಮರೆಯಾಗುವ ಬೇಸಾಯದ ಜಮೀನು, ಕೆರೆ ನುಂಗುವವರು, ಸಂತೆ, ಮಠ, ದೇಗುಲ ಜಾತ್ರೆ ಇವೆಲ್ಲವೂ ನಿಮ್ಮೂರಿನ ಚಿತ್ರಗಳನ್ನೇ ಕಣ್ಮುಂದೆ ತರುವಂಥ ನಿರೂಪಣೆ ಇಲ್ಲಿದೆ. ಹಳ್ಳಿಗಳು ತಮ್ಮ ಜೀವಂತಿಕೆಯನ್ನು ಕಳೆದುಕೊಳ್ಳುವ ಹಳಹಳಿಕೆ, ಬಾಂಧವ್ಯಗಳಲ್ಲಿ ಚುಕ್ಕಿಯಾದವರ ಒಳಿತನ್ನು ನೆನಪಿಸಿಕೊಳ್ಳುವ ತಹತಹ ಎದ್ದು ಕಾಣುತ್ತದೆ. ಬಹು ವರ್ಷಗಳ ನಂತರ ಊರಿಗೆ ಭೇಟಿ ನೀಡಿ, ಪಡಸಾಲೆಯಲ್ಲಿ ಹರಟುವಂತೆ, ಇದ್ದವರ ಸಂಗತಿ, ಇಲ್ಲದವರ ನೆನಪು ಎಲ್ಲವನ್ನೂ ನೆನಪಿಸಿಕೊಳ್ಳುವ ಪುಸ್ತಕ ಇದಾಗಿದೆ.

ಆದರೆ ಒಂದೇ ಗುಕ್ಕಿನಲ್ಲಿ ಪುಸ್ತಕ ಓದುವಾಗ ಕೆಲವು ಅಂಶಗಳು (ಮಾರ್ಲಮ್ಮಿ ಹಬ್ಬ, ಆ ಸಂದರ್ಭದ ರಂಗಭೂಮಿಯ ವಿವರಗಳು, ಅವರ ಸಹೋದರಿ ಜಯಮ್ಮ ಮತ್ತು ಸಹೋದರ ರಾಜು)  ಪುನರಾವರ್ತನೆ ಆಗುತ್ತ ಹೋಗುತ್ತವೆ. ಫೇಸ್‌ಬುಕ್‌ನಲ್ಲಿ ಬರೆದ ಬಿಡಿ ಬರೆಹಗಳ ಈ ಸಂಗ್ರಹದಲ್ಲಿ ಇದೊಂದು ದೋಷವೆಂಬಂತೆ ಉಳಿದುಕೊಂಡಿದೆ. ಮುಂದಿನ ಆವೃತಿಯಲ್ಲಿ ಲೇಖಕರು ಈ ಸರಣಿ ಲೇಖನಗಳನ್ನು ಮತ್ತೊಮ್ಮೆ ಪರಿಷ್ಕರಿಸಿದರೆ ಉತ್ತಮ ಓದು ದೊರೆತಂತಾಗುತ್ತದೆ.

Cut-off box - ಕಣ್ಣ ಕನ್ನಡಿಯಲ್ಲಿ ಅಬ್ಬೂರಿನ ಚಿತ್ರಗಳು ಲೇ: ಅಬ್ಬೂರು ಪ್ರಕಾಶ್ಪ್ರ: ಬಹುರೂಪಿ ಸಂ: 7019182729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT