ಬಂಕಾಪುರಕ್ಕೆ ಹೋಗಬೇಕಾದ ಸಂದರ್ಭ ಹಾಗೂ ಹೋದ ಮೊದಲ ದಿನವೇ ಅನುಭವಿಸಿದ ಕಸಿವಿಸಿಯನ್ನು ಸೊಗಸಾಗಿ ನಿರೂಪಿಸಲಾಗಿದೆ. ವೈದ್ಯನಾದವನು ಬೆಳ್ಳಂಬೆಳಗ್ಗೆಯೇ ಹೆಣ ನೋಡಬೇಕಾದ, ಪೋಸ್ಟ್ ಮಾರ್ಟಂ ಮಾಡಬೇಕಾದ ಸನ್ನಿವೇಶ ಎದುರಿಸುವುದು, ಆ ಹೊತ್ತಿನಲ್ಲಿ ಅವರ ಕುಟುಂಬದವರ ತಳಮಳ ಅನುಭವಿಸುವುದು – ಈ ವಿವರಗಳು ಮೊದಲ ಕಥೆಯಲ್ಲೇ ರಸವತ್ತಾಗಿ ಮೂಡಿಬಂದಿವೆ. ಹಲವು ಅನುಭವದ ಮೂಟೆಗಳೇ ಇಲ್ಲಿವೆ. ವೈದ್ಯರ ಕುಟುಂಬದ ಕಾಳಜಿಯ ಮುಖ ತಿಳಿಯಬೇಕೆನ್ನುವವರು ಓದಬಹುದಾದ ಕೃತಿ.