ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ಮಲೆನಾಡನ್ನು ಮತ್ತೆ ತೆರೆದಿಡುವ ಕಥನ...

Published 10 ಫೆಬ್ರುವರಿ 2024, 23:30 IST
Last Updated 10 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ದುಪಡಿ

ಲೇ: ಚಂದ್ರಮತಿ ಸೋಂದಾ

ಪ್ರ: ಜ್ಯೋತಿ ಪ್ರಕಾಶನ ಮೈಸೂರು

ಸಂ: 9844212231 ಬೆ: 320 ಪು:284

ಸಾಗರ, ಸಿದ್ದಾಪುರ, ಸೊರಬ, ಬನವಾಸಿಯ ಸುತ್ತಲಿನ ಬದುಕು, ಭಾಷೆ, ಆಚರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಸೆರೆ ಹಿಡಿದಿರುವ ಕಾದಂಬರಿ ‘ದುಪಡಿ’. ಈ ಕೃತಿಯ ಕಥೆ ನಡೆಯುವುದು ಸೊರಬ ತಾಲ್ಲೂಕಿಗೆ ಸೇರಿದ ಕ್ಯಾಸನೂರು ಸೀಮೆಯಲ್ಲಿ. ಬಾಲ್ಯ ವಿವಾಹಕ್ಕೆ ಒಳಗಾಗುವ ಕಥಾ ನಾಯಕಿ ‘ಅಚ್ಚಿ’ಯ ಬದುಕಿನ ಪಯಣವೇ ಕಾದಂಬರಿಯ ಒಟ್ಟಾರೆ ಕಥೆ. ಆದರೆ ಆಕೆಯ ಬದುಕಿನುದ್ದಕ್ಕೂ ಬರುವ ಪಾತ್ರಗಳು, ಎದುರಿಸುವ ಸವಾಲುಗಳು, ಬದುಕಿನ ನದಿಯನ್ನು ದಾಟುವ ಪರಿಯ ಮೂಲಕ ಲೇಖಕಿ ಈ ಕೃತಿಯನ್ನು ಮಲೆನಾಡಿನ ಎಲ್ಲ ಹೆಣ್ಣುಮಕ್ಕಳ ಕಥೆಯನ್ನಾಗಿಸುತ್ತಾರೆ.

ಪೂರ್ತಿ ಕಾದಂಬರಿ ಹವಿಗನ್ನಡದಲ್ಲಿದೆ. ಸಾಗರ, ಸೊರಬ ಭಾಗದಲ್ಲಿ ಬಳಸುವ ಹವ್ಯಕ ಭಾಷೆಯನ್ನು ಇಲ್ಲಿ ಬಳಸಲಾಗಿದೆ. ಸ್ವತಂತ್ರ ಪೂರ್ವದಲ್ಲಿನ ಕಥೆಯೊಂದಿಗೆ ಇಂದು ಬಳಕೆಯಲ್ಲಿ ಇಲ್ಲದ ಅನೇಕ ಶಬ್ದಗಳನ್ನು ಇಲ್ಲಿ ಮತ್ತೆ ನೆನಪಿಸಿದ್ದಾರೆ. ‘ಈ ಕಾದಂಬರಿಯಲ್ಲಿ ಬರುವ ಹವ್ಯಕರಷ್ಟೇ ಬಳಸುವ ವಿಶಿಷ್ಟ ಪದಗಳು ಹಾಗೂ ನುಡಿಗಟ್ಟುಗಳನ್ನು ಸಂಗ್ರಹಿಸಿದರೆ ಒಂದು ಪದಕೋಶವೇ ಆದೀತು! ಅಷ್ಟರಮಟ್ಟಿಗೆ ಕಾದಂಬರಿಯ ಭಾಷೆ ಅನನ್ಯವಾಗಿದೆ. ಹಾಗೆಯೇ ಸಂವಹನಕ್ಕೆ ಕಿಂಚಿತ್ತೂ ತೊಡಕಾಗದಂತೆ ಲೇಖಕಿ ಕಾದಂಬರಿಯನ್ನು ನಿರ್ವಹಿಸಿದ್ದಾರೆ’ ಎಂದು ಗೀತಾ ವಸಂತ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ. 

ಹದಿನೈದು ಅಧ್ಯಾಯಗಳಿದ್ದು ಬೇರೆ, ಬೇರೆ ಕಾಲಘಟ್ಟಗಳೊಂದಿಗೆ ಕಥೆಯಲ್ಲಿ ಬರುವ ಹೆಣ್ಣಿನ ಬದುಕಿನ ಮಜಲುಗಳು ಬದಲಾಗುತ್ತ ಹೋಗುತ್ತವೆ. ಇಲ್ಲಿ ಪ್ರಸ್ತಾಪವಾಗುವ ಅನೇಕ ಸನ್ನಿವೇಶಗಳು, ಘಟನೆಗಳು, ಪಾತ್ರಗಳು ನಮ್ಮ ಅಪ್ಪ, ತಾತನ ಕಾಲದ ಮಲೆನಾಡನ್ನು ಮತ್ತೊಮ್ಮೆ ನೆನಪಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT