ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು: ಸ್ವಾರಸ್ಯಕರ ಘಟನೆಗಳೂ, ಪಾಠವೂ

Published 22 ಅಕ್ಟೋಬರ್ 2023, 0:30 IST
Last Updated 22 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಅರಣ್ಯ ಇಲಾಖೆಯೊಳಗೆ ನಡೆದಾಡಿದ ಲೇಖಕರ ಬದುಕಿನ ಅನುಭವಗಳು, ಚಾರಣಗಳ ನೆನಪುಗಳ ಬುತ್ತಿಯೊಳಗಿನ ಘಟನೆಗಳ ಲಲಿತ ಪ್ರಬಂಧಗಳ ಗುಚ್ಛವಿದು. ಬಯಲುಸೀಮೆಯ ಲೇಖಕರು ಒಟ್ಟು 20 ಲೇಖನಗಳಲ್ಲಿ ಹಲವು ವಿಷಯಗಳನ್ನು ಓದುಗರೆದುರಿಗೆ ಇರಿಸಿದ್ದಾರೆ. 

ಲೇಖಕರ ಸಾಹಿತ್ಯ ಪ್ರೀತಿಯನ್ನು ಅವರ ಬರವಣಿಗೆಯಲ್ಲೇ ಕಾಣಬಹುದಾಗಿದೆ. ನಿವೃತ್ತಿ ನಂತರ ಲೇಖನಿ ಹಿಡಿದು ರಚಿಸಿರುವ ಈ ಕೃತಿ ಅವರ ಅನುಭವಗಳನ್ನು ರುಚಿಕಟ್ಟಾಗಿ ಕಟ್ಟಿಕೊಟ್ಟಿದೆ. ಬಳಸಿರುವ ಭಾಷೆ ಆಕರ್ಷಕವಾಗಿದೆ. ಮಲೆನಾಡು–ಬಯಲುಸೀಮೆ ಜೋಡಿಯ ಸ್ವಾರಸ್ಯಕರ ಘಟನೆಗಳಿಂದಲೇ ಕೃತಿ ಆರಂಭವಾಗುತ್ತದೆ. ಲೇಖಕರು ಬರವಣಿಗೆ ಒಂದು ರೀತಿಯಲ್ಲಿ ಅನನುಕ್ರಮಣಿಕೆಯ ಚಿತ್ರಕಥೆಯ ರೀತಿಯಂತಿದೆ. ಹಲವು ನೆನಪುಗಳನ್ನು ಮೆಲುಕು ಹಾಕುತ್ತಾ, ಅದರೊಳಗೆ ಹಿಂದಿನ ಘಟನೆಗಳನ್ನು ಉಲ್ಲೇಖಿಸುತ್ತಾ ಸಾಗುತ್ತಾರೆ ಪುರುಷೋತ್ತಮ ರಾವ್‌. ಉದಾಹರಣೆಗೆ ಹೆಂಡತಿ ನೀಡಿದ ಕಷಾಯವೊಂದನ್ನು ಎದುರಿಗಿಟ್ಟುಕೊಂಡು ಬಯಲುಸೀಮೆಯ ಎಮ್ಮೆಯ ವಿವರಣೆಯತ್ತ ಸಾಗುತ್ತಾರೆ. ಅವುಗಳು ಕಲಗಚ್ಚು ಕುಡಿಯುವ ರೀತಿಯನ್ನು ಇವರು ಅಕ್ಷರಗಳಲ್ಲಿ ವರ್ಣಿಸುವುದೇ ಚೆಂದ. ಸಂದರ್ಭಕ್ಕೆ ತಕ್ಕಂತೆ ಹಲವು ವಿಷಯಗಳ ಜೋಡಣೆಗಳನ್ನು ಇಲ್ಲಿ ಕಾಣಬಹುದು. 

ತಮ್ಮ ಅನುಭವಗಳ ಜೊತೆಗೆ ಇತರರ(ಪಾತ್ರಗಳ) ಅನುಭವಗಳ ಸಾರವೂ ಇಲ್ಲಿದೆ.  ಹಳ್ಳಿಗಾಡಿನ ಕಥನಗಳನ್ನು ಸ್ವಾರಸ್ಯಕರ ನಿರೂಪಣೆಯಲ್ಲಿ ಓದುಗರ ಎದುರಿಗೆ ಇರಿಸಿದ್ದಾರೆ ಲೇಖಕರು. 

ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು 

ಲೇ: ಎಚ್‌.ಎ.ಪುರುಷೋತ್ತಮ ರಾವ್‌ 

ಪ್ರ: ನಿವೇದಿತ ಪ್ರಕಾಶನ 

ಸಂ: 9448733323

ಪುಟ: 180

ದರ: 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT