ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೇಜೋನಿಧಿ: ಸಮೂಹ ಪ್ರಜ್ಞೆ ಮಾತಾದ ಕೃತಿ

Published 11 ಮೇ 2024, 21:15 IST
Last Updated 11 ಮೇ 2024, 21:15 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಹಾಸಣಗಿ ಎಂಬ ಚಿಕ್ಕ ಹಳ್ಳಿಯಲ್ಲಿ ನೂರು ವರ್ಷಗಳ ಹಿಂದೆ ಆರಂಭವಾದ ಪ್ರಾಥಮಿಕ ಶಾಲೆಯ ಚಿತ್ರಣವನ್ನು ಹಳೆ ವಿದ್ಯಾರ್ಥಿಗಳ ಮೂಲಕ ‘ತೇಜೋನಿಧಿ’ಯಲ್ಲಿ ಕಟ್ಟಿಕೊಡಲಾಗಿದೆ. ಈ ಕೃತಿಯಲ್ಲಿರುವ ಲೇಖನಗಳು ಶಾಲೆಯ ಜೊತೆಗೆ ಇಡೀ ಗ್ರಾಮ, ಅಲ್ಲಿನ ಪರಿಸರ, ಸುತ್ತಮುತ್ತಲಿನ ಪ್ರದೇಶಗಳ ಸಮೃದ್ಧವಾದ ಸಾಂಸ್ಕಂತಿಕ ಇತಿಹಾಸವನ್ನೂ ತೆರೆದಿಡುತ್ತದೆ. ‘ತೇಜೋನಿಧಿ’ಯು ಮೂರುಭಾಗಗಳಲ್ಲಿ ಮೂಡಿ ಬಂದಿದೆ. ಮೊದಲ ಭಾಗವು ಹಿರಿಯರ, ಶಿಕ್ಷಣ ತಜ್ಞರ, ಸಾಹಿತಿಗಳ ಲೇಖನಗಳನ್ನು ಒಳಗೊಂಡಿದೆ. ಎರಡು ಮತ್ತು ಮೂರನೇ ಭಾಗಗಳಲ್ಲಿ ಹಾಸಣಗಿ ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರರ ಬರಹಗಳು ಅಡಕವಾಗಿವೆ. ಮೊದಲ ಲೇಖನವಾಗಿ ಮಹಾತ್ಮಗಾಂಧಿ ಅವರು 1908ರಲ್ಲಿ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಬರೆದ ಲೇಖನವನ್ನು ಆಯ್ದುಕೊಳ್ಳಲಾಗಿದೆ. ಅಲ್ಲದೆ ಜ್ಞಾನಪೀಠ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಅವರ ಉಪನ್ಯಾಸದ ಆಯ್ದ ಭಾಗ, ಸಾಹಿತಿ ಬರಗೂರು ರಾಮಚಂದ್ರಪ್ಪ, ನಿರಂಜನ ವಾನಳ್ಳಿ, ರಾಜಾಸಾಬ್, ಪಿ.ಎನ್.ಶಾಸ್ತ್ರಿ ಮತ್ತಿತರರ ಬರಹಗಳೂ ಇವೆ. ವಸಂತ ಭಟ್ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಒಟ್ಟಿನಲ್ಲಿ ಈ ಕೃತಿಯು ದೇಶದ ಮತ್ತು ರಾಜ್ಯದ ಹಳ್ಳಿಗಳ ಚಿತ್ರಣವನ್ನೂ ಶಿಕ್ಷಣದ ಮಹತ್ವವನ್ನೂ ಓದುಗರ ಮುಂದಿಡುತ್ತದೆ.

ಕೃತಿ: ತೇಜೋನಿಧಿ

ಸಂ: ವಸಂತ ಭಟ್
ಪ್ರ: ಹರಿವು ಬುಕ್ಸ್
ಸಂ: 8088822171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT