ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ಸೌದಾಮಿನಿ ಕಿತ್ತೂರು ರಾಣಿ ಚೆನ್ನಮ್ಮ: ಚಿತ್ರಸಂಪುಟದೊಳಗೆ ಕಿತ್ತೂರ ಸ್ಮೃತಿ

Published 18 ನವೆಂಬರ್ 2023, 23:42 IST
Last Updated 18 ನವೆಂಬರ್ 2023, 23:42 IST
ಅಕ್ಷರ ಗಾತ್ರ

‘ಕಿತ್ತೂರು’ ಎಂಬ ಹೆಸರು ಕೇಳಿದಾಕ್ಷಣ ಹಲವು ಘಟನೆಗಳ ಸ್ಮೃತಿ ಹಾದುಹೋಗುತ್ತದೆ. ಸ್ವಾತಂತ್ರ್ಯದ ಹೊಸಕಲ್ಪನೆ ಸೃಷ್ಟಿಸಿದ ಭೂಮಿ ಎಂದು ಕರೆಯಲಾಗುವ ಕಿತ್ತೂರಿನ ಚಿತ್ರಸಂಪುಟವೇ ಈ ಕೃತಿ. ಕನ್ನಡ, ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಇದು ರಚನೆಯಾಗಿದೆ.

ಚನ್ನಮ್ಮನ ಕುರಿತು ಸಾಹಿತ್ಯರೂಪದ ಹಲವು ಕೃತಿಗಳ ಪಟ್ಟಿಗೆ ಹೊಸ ಮಾದರಿಯ ಸೇರ್ಪಡೆ ಈ ಕೃತಿ. ಕಿತ್ತೂರು ಸಂಸ್ಥಾನದ ಚಾರಿತ್ರಿಕ ದೃಶ್ಯ ವಿವರಗಳ ಭಂಡಾರವಿದು. ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಮೆಲುಕು ಹಾಕುತ್ತಾ, ಆ ಭೂಮಿಯನ್ನು ಆಳಿದ ವ್ಯಕ್ತಿಗಳು, ಅವರ ಶೌರ್ಯ, ಪರಾಕ್ರಮಗಳ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತಾ, ಚನ್ನಮ್ಮನ ಜೀವನಗಾಥೆಯನ್ನು ಚಿತ್ರಗಳ ಮೂಲಕ ಇಲ್ಲಿ ಹರಡಿದ್ದಾರೆ ಲೇಖಕರು.

ಚಿತ್ರಗಳಿಗೇ ಇಲ್ಲಿ ಆದ್ಯತೆ. ಚಿತ್ರಸಂಪುಟದ ಕೆಲ ಪುಟಗಳಲ್ಲಿ ಕ್ಯೂಆರ್‌ ಕೋಡ್‌ಗಳನ್ನೂ ನೀಡಲಾಗಿದ್ದು, ಇದನ್ನು ಮೊಬೈಲ್‌ ಮೂಲಕ ಸ್ಕ್ಯಾನ್‌ ಮಾಡಿದರೆ, ಲೇಖಕರು ಉಲ್ಲೇಖಿಸುವ ವಿಷಯದ ವಿಡಿಯೊಗಳು ಲಭ್ಯವಾಗುತ್ತವೆ. ಉದಾಹರಣೆಗೆ: ಕಿತ್ತೂರು ಅರಮನೆಯ ವಿವರಣೆಯನ್ನೊಳಗೊಂಡ ಅಧ್ಯಾಯದಲ್ಲಿ ನೀಡಿರುವ ಕ್ಯೂಆರ್‌ಕೋಡ್‌ನಲ್ಲಿ ಅರಮನೆಯ ವಿಡಿಯೊ ವಿವರಣೆ ಇದೆ. ಜೊತೆಗೆ ನಕ್ಷೆಯ ಸಹಿತ ಅರಮನೆಯ ವಿವರಣೆ ನೀಡಿರುವುದು ಮಾಹಿತಿ ಗ್ರಹಿಕೆಗೆ ಅನುಕೂಲಕರವಾಗಿದೆ. ಕಿತ್ತೂರಿಗೆ ಇಲ್ಲಿಯವರೆಗೂ ಭೇಟಿ ನೀಡದೇ ಇರುವವರಿಗೆ ಈ ಕೃತಿ ಒಂದು ರೀತಿಯಲ್ಲಿ ‘ಗೈಡ್‌’. ಶಿವಶಂಕರ ಬಣಗಾರ ಅವರ ಚಿತ್ರಗಳೇ ಈ ಕೃತಿಯ ಜೀವಾಳ.

ವೀರ ಸೌದಾಮಿನಿ ಕಿತ್ತೂರು ರಾಣಿ ಚೆನ್ನಮ್ಮ 

ಲೇ: ಸಂತೋಷ ಹಾನಗಲ್ಲ

ಪ್ರ: ರಾಜಗುರು ಅಧ್ಯಯನ ಸಂಸ್ಥೆ ಕಲ್ಮಠ

ಸಂ: 9535725499

ಪುಟ: 372

ದರ: 999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT