ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ವಿವಾಹ ಒಂದು ಚಿಂತನ – ಕೌಟುಂಬಿಕ ವ್ಯಾಜ್ಯಗಳ ಬೇರಿಗೆ ಬೆಳಕು

Published 2 ಜುಲೈ 2023, 1:36 IST
Last Updated 2 ಜುಲೈ 2023, 1:36 IST
ಅಕ್ಷರ ಗಾತ್ರ

ವಕೀಲ ವೃಂದದಲ್ಲಿ ಮಹಿಳೆಯರ ಸಂಖ್ಯೆ ಯಾವತ್ತೂ ಕಡಿಮೆಯೇ. ಅದರಲ್ಲೂ ವಕೀಲಿಕೆಯ ಕುರಿತು ಸಾಹಿತ್ಯ ಕೃಷಿ ಮಾಡುವ ವಕೀಲರಂತೂ ಇನ್ನೂ ವಿರಳ. ಈ ಮಾತಿಗೆ ಅಪವಾದ ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲೆ ಎಸ್. ಸುಶೀಲ ಚಿಂತಾಮಣಿ. ಅವರ ಇತ್ತೀಚಿನ ಕೃತಿ, ‘ವಿವಾಹ ಒಂದು ಚಿಂತನ’ ಈಗ ಮಾರುಕಟ್ಟೆಯಲ್ಲಿದೆ. ಪುಸ್ತಕದ ಹೆಸರೇ ಸೂಚಿಸುವಂತೆ, ಇದೊಂದು ಕೌಟುಂಬಿಕ ವ್ಯಾಜ್ಯಗಳ ಉದ್ಭವಕ್ಕೆ ಕಾರಣವೇನು ಎಂಬುದನ್ನು ಬಿಡಿಸಿಡುವ ಪ್ರಯತ್ನದ ಅಪರೂಪದ ಕೃತಿ.

ಸಾಮಾನ್ಯವಾಗಿ ದಂಪತಿಗಳು ಇಂದಿನ ದಿ‌ನಮಾನಗಳಲ್ಲಿ ಒತ್ತಡದ ನೊಗವನ್ನೆಳೆಯುತ್ತಲೇ ಪರಸ್ಪರರ ಮಧ್ಯೆ ಹೇಗೆ ಭಿನ್ನವಾಗುತ್ತಾ ಸಂಘರ್ಷದ ಹಾದಿ ತುಳಿಯುತ್ತಾರೆ ಎಂಬುದನ್ನು ಲೇಖಕಿ ಅತ್ಯಂತ ಸರಳ ಮತ್ತು ಆಪ್ತ ಬಾಷೆಯ ಶೈಲಿಯಲ್ಲಿ ಹಿಡಿದಿಟ್ಟಿದ್ದಾರೆ. 50ಕ್ಕೂ ಹೆಚ್ಚು ಬಿಡಿ ಲೇಖನಗಳ ಈ ಹೊತ್ತಗೆ ಎಲ್ಲ ವರ್ಗದ ಓದುಗರಿಗೂ ಇಷ್ಟವಾಗಬಲ್ಲದು. ಗಾಢವಾದ ಇಚ್ಛಾಶಕ್ತಿಯಿಂದ ಸಂಗಾತಿಯ ಬೇಕು–ಬೇಡಗಳನ್ನು ಗುರುತಿಸಿ ಅರ್ಥಮಾಡಿಕೊಂಡಲ್ಲಿ ದಾಂಪತ್ಯದ ಸೊಗಸನ್ನು ಸವಿಯಬಹುದು ಎಂದು ಹೇಳುತ್ತಲೇ ಅನಿವಾರ್ಯ ಸಂದರ್ಭಗಳಲ್ಲಿ ಪತಿ ಅಥವಾ ಪತ್ನಿ ಮನಸ್ತಾಪಗಳನ್ನು ಪರಿಹರಿಸಿಕೊಳ್ಳಲು ಕಂಡುಕೊಳ್ಳಬಹುದಾದ ಸಕಾರಾತ್ಮಕ ಮಾರ್ಗಗಳೇನು ಎಂಬುದನ್ನು ಪುಸ್ತಕ ನಮಗೆ ದರ್ಶನ‌ ಮಾಡಿಸುತ್ತದೆ.

ಲೇಖಕಿ ಮೂಲತಃ ಸಮಾಜಶಾಸ್ತ್ರದ ವಿದ್ಯಾರ್ಥಿನಿ ಆಗಿರುವ ಕಾರಣದಿಂದ ಕೆಲವು ಅಧ್ಯಾಯಗಳಲ್ಲಿ ಬರವಣಿಗೆ ಮನುಷ್ಯ ಸ್ವಭಾವಗಳು ಮತ್ತು ಗುಣಗಳನ್ನು ವಿಶೇಷ ನೋಟದ ಮೂಲಕ ತೆರೆದಿಡುತ್ತದೆ.

ಕೃ: ವಿವಾಹ ಒಂದು ಚಿಂತನ

ಲೇ: ಎಸ್.ಸುಶೀಲ ಚಿಂತಾಮಣಿ ‌

ಪ್ರ: ವಿಕಾಸ ಪ್ರಕಾಶನ ಬೆಂಗಳೂರು

ನಂ: 99000-95204

ದರ: ₹ 350 ಪುಟ: 320

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT