ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿಯಲ್ಲಿ ಬಹುಮುಖಿ ಕಲಾವಿದೆ

Last Updated 2 ಜುಲೈ 2018, 11:22 IST
ಅಕ್ಷರ ಗಾತ್ರ

ಸಂಗೀತ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಅದರ ಶಕ್ತಿಯೇ ಹಾಗೆ. ಸುಶ್ರಾವ್ಯವಾದ ಆಲಾಪನೆ, ದೃಢವಾದ ತಾಳಬದ್ಧತೆಯಿಂದ ಕೂಡಿದ ಸಂಗೀತದ ಗಾಯನ ಕೂಟದಲ್ಲಿ ಶ್ರೋತೃಗಳು ತನ್ಮಯರಾಗಿ ತನುವನ್ನೇ ಬಿಡುತ್ತಾರೆ. ತಮಗರಿವಿಲ್ಲದಂತೆ ಸಂಗೀತ ಲೋಕದಾಳಕ್ಕೆ ಸಂಚರಿಸುತ್ತಾರೆ. ಅಂತಹ ಶಕ್ತಿಪೂರ್ಣ ಸಂಗೀತವನ್ನು ಕಚೇರಿಯನ್ನು ಪ್ರಸ್ತುತಪಡಿಸಬಲ್ಲವರು ಅಡೂರಿನ ವಿಜಯಮಾಲಾ ಸರಳಾಯ.

ಬಾಲ್ಯದಿಂದಲೇ ಈ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡವರು.ವಿಜಯಮಾಲಾ ಅವರ ಅಜ್ಜ ವೇದಬ್ರಹ್ಮ ಅಗ್ಗಿತ್ತಲ ರಾಮ ನಲ್ಲೂರಾಯರು ಅಪ್ರತಿಮ ಸಂಗೀತ ವಿದ್ವಾಂಸರು. ಅಜ್ಜನ ಸಂಗೀತ ಪ್ರೀತಿಯನ್ನು ಕಂಡು ಬೆಳೆದವರು ವಿಜಯಮಾಲಾ. ಅಜ್ಜನಿಂದ ಸಂಗೀತ ಪಾಠಗಳನ್ನು ಹೇಳಿಸಿಕೊಂಡವರು. ತಾಯಿ ವನಜಾಕ್ಷಿಯೇ ಅವರ ಮೊದಲ ಸಂಗೀತ ಗುರು. ಮೈಸೂರಿಗೆ ಬಂದು ನೆಲೆಸಿದ ಮೇಲೆ ಸಂಗೀತ ಶಿಕ್ಷಣವನ್ನು ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಅವರಿಂದ ಕಲಿತರು. ಈಚೆಗೆ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ಸಂಗೀತ ಹಾಗೂ ಗಾಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿದ್ದಾರೆ. ಅವರು 2 ಚಿನ್ನದ ಪದಕಗಳನ್ನೂ ಗಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ತಾನು ಸದಾ ವಿದ್ಯಾರ್ಥಿನಿಯೇ ಎಂದು ನಂಬಿದವರು ಅವರು.

ಕನ್ನಡ ಭಾಷೆಯಲ್ಲಿಯೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಅನೇಕ ಲೇಖನಗಳು ಹಾಗೂ ಅಂಕಣ ಬರಹಗಳು ಮೈಸೂರಿನ ಸುರಭಿಗಾನ ಕಲಾಮಂದಿರದ 'ಸುರಭಿ ಸಿಂಚನ' ತ್ರೈಮಾಸಿಕ ಪತ್ರಿಕೆ, ಗಾನಭಾರತಿಯ 'ತಿಲ್ಲಾನ', ಬೆಂಗಳೂರಿನ ಅನನ್ಯ ಸಂಸ್ಥೆಯ 'ಅನನ್ಯ ಸಿಂಚನ' ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. 13 ವರ್ಷಗಳಿಂದ ಸುರಭಿ ಸಿಂಚನ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರೂ ಆಗಿ ಕೆಲಸ ಮಾಡಿದ್ದಾರೆ.ಅವರು ಬರೆದ ಅಂಕಣ ಬರಹಗಳ ಸಂಕಲನ ಕೃತಿಯಾಗಿ ಬಿಡುಗಡೆಯಾಗಿದೆ. ನಾಟಕ ಕ್ಷೇತ್ರದಲ್ಲೂ ಚಟುವಟಿಕೆಯಲ್ಲಿ ಇರುವ ವಿಜಯಮಾಲಾ ಅವರು ಸ್ವತಃ ಬರದು ನಿರ್ದೇಶಿಸಿದ ಮಕ್ಕಳ ನಾಟಕವು ಮೈಸೂರಿನ ಆಕಾಶವಾಣಿಯಿಂದ ಪ್ರಸಾರವಾಗಿದೆ. ಆಕಾಶವಾಣಿಯ ಕೆಲವು ರೂಪಕಗಳಲ್ಲಿ ಕೂಡಾ ಅವರು ಭಾಗವಹಿಸಿದ್ದಾರೆ.

ಸುರಭಿ ಸಂಸ್ಥೆಯು ಪ್ರದರ್ಶಿಸಿದ ಕೆಲವು ಸಂಗೀತ ನಾಟಕ ರೂಪಕಗಳನ್ನೂ ಕೂಡಾ ವಿಜಯಮಾಲಾ ಬರೆದು ನಿರ್ದೇಶಿಸಿದ್ದಾರೆ. ಅನೇಕ ಪ್ರಸಿದ್ಧ –ಪ್ರಬುದ್ಧ ಶ್ರೋತೃಗಳ ವೇದಿಕೆಯಲ್ಲಿ ಕಾರ್ಯಕ್ರಮವನ್ನು ನಿರೂಪಿಸಿ, ಉತ್ತಮ ನಿರೂಪಕಿ ಎನಿಸಿಕೊಂಡಿದ್ದಾರೆ. ಚಿತ್ರಕಲೆಯ ವಿಭಾಗದಲ್ಲಿ ಅವರು ರೇಖಾಚಿತ್ರ ಹಾಗೂ ವರ್ಣಚಿತ್ರಗಳೊಂದಿಗೆ ಸಾಂಪ್ರದಾಯಿಕ ಮೈಸೂರು ಶೈಲಿಯಲ್ಲೂ ಚಿತ್ರ ರಚಿಸಿದ್ದಾರೆ. ಇವರ ವರ್ಣಚಿತ್ರಗಳು ಮೈಸೂರಿನ ದಸರಾ ಚಿತ್ರ ಪ್ರದರ್ಶನದಲ್ಲಿ ಸತತವಾಗಿ 3 ವರ್ಷ ಕಾಲ ಬಹುಮಾನ ಪಡೆದಿದೆ. ಹಲವು ಪ್ರಸಿದ್ಧ ಕೃತಿಗಳಿಗೆ ಮುಖಪುಟವನ್ನೂ ಬರೆದಿದ್ದಾರೆ. ಸುರಭಿ ಸೀಂಚನ ಪತ್ರಿಕೆಯಲ್ಲಿ ವಿಜಯಮಾಲ ರಚಿಸಿದ ಚಿತ್ರಕಥೆಗಳು ಜನಮನ ಗೆದ್ದಿವೆ. ಇವರ ಸಾಧನೆಯ ಕಡೆಗಿನ ಪಯಣದಲ್ಲಿ ಬೆಂಬಲವಾಗಿ ನಿಂತವರು ಸಂಗೀತ ಗುರುಗಳಾದ ವಿದುಷಿ ಡಾ. ಸುಕನ್ಯಾ ಪ್ರಭಾಕರ್, ಪತಿ ಅಡೂರು ಕೇಶವ ಸರಳಾಯ.

ಇವರು ಕೊಕ್ಕಡದ ಕೆ. ಎ. ಆನಂದ ಯಡಪಡಿತ್ತಾಯ- ವನಜಾಕ್ಷಿ ದಂಪತಿಯ ಪುತ್ರಿ. ವಿಜಯಮಾಲಾ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT