ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಲವಾದ ಅಡಿಪಾಯದ ಮೇಲೆ ಗಾಯಕ ರವಿ ಮೂರೂರು ಅವರು ರಂಗ ಸಂಗೀತ, ಸುಗಮ ಸಂಗೀತ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ರವಿ ಅವರು ಆರಂಭದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ಎಂ.ಪಿ.ಹೆಗಡೆ ಪಡಿಗೆರೆ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದರು. ನಂತರ ರಾಜು ಅನಂತಸ್ವಾಮಿ ಅವರ ಬಳಿ ಸುಗಮ ಸಂಗೀತ ಅಭ್ಯಾಸ ಮಾಡಿದರು. ಆಮೇಲೆ ಗಾನಗಾರುಡಿಗ ಸಿ.ಅಶ್ವತ್ಥ್ ಅವರ ಶಿಷ್ಯನಾಗಿ ಹಾಡುತ್ತಾ ಸಾಗಿದರು.

ಅಶ್ವತ್ಥ್ ಅವರ ‘ಕನ್ನಡವೇ ಸತ್ಯ’ ಸುಗಮ ಸಂಗೀತ ಸರಣಿಯಲ್ಲಿ 7 ವರ್ಷ ಪ್ರಮುಖ ಗಾಯಕರಾಗಿ ಹಾಡಿದರು. 2009, ಡಿಸೆಂಬರ್ 29ರಂದು ಮುಂಜಾನೆ ರವಿ ಮೂರೂರು ‘ಟಿಫನ್ ಬಕ್ಸ್’ ಸಂಗೀತ ಕಾರ್ಯಕ್ರಮದಲ್ಲಿ ‘ಹೇಳಿ ಹೋಗು ಕಾರಣ’ ಗೀತೆ ಹಾಡುವಾಗ ಗುರು ಅಶ್ವಥ್ ಸಾವಿನ ಸುದ್ದಿ ಬಂತು. ಆ ಕುರಿತ ಹಿತಾನುಭವ ಈ ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.