ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ | ಕಾತರಿಕೆಯೊಂದು ಹಂಬಲವಾಗಿ

Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಕಣ್ಣ ಪರದೆಯಿಂದ ಜಾರಿ ಎದೆಗಿಳಿದದ್ದು ಗೊತ್ತೇ ಆಗಿರಲಿಲ್ಲ
ಅವನ ಚರ್ಯೆ ಮನಸಿನಿಂದ ಎದೆಯಾಳಕ್ಕಿಳಿದದ್ದು ಗೊತ್ತೇ ಆಗಿರಲಿಲ್ಲ

ಬಿರುಬಿಸಿಲಿನ ಸೂರ್ಯನಿಂದ ಚಂದ್ರನಾದ ಪಲ್ಲಟವದೆಷ್ಟು ಅಚ್ಚರಿ
ತಂಗಾಳಿ ಸುಳಿದಂತೆ ಹವೆ ತಂಪಾಗಿ ಬದಲಾದದ್ದು ಗೊತ್ತೇ ಆಗಿರಲಿಲ್ಲ

ಮರೀಚಿಕೆಯೂ ನಿರ್ಜಲವಾಗಿತ್ತೆಂದು ಅರಿವಾಗಿ ಬಾರಿ ಬಾರಿ ಬೆದರಿದ್ದೆಷ್ಟು
ಆಂತರ್ಯದಲ್ಲಿ ಜೀವಸೆಲೆ ಚಿಮ್ಮಿ ಅಂತರ್ಜಲವಾಗಿದ್ದು ಗೊತ್ತೇ ಆಗಿರಲಿಲ್ಲ

ಕಣ್ಣ ಕಾಡಿಗೆ ಅಳಿಸದಂತೆ ಕಾಪಾಡಿಕೊಳ್ಳಲು ಹೆಣಗಿದ್ದು ಸಾಕಾಗಿತ್ತು
ಮೇಘ ಕರಗಿ ಹೊಳೆವ ಬೆಳಕೊಂದು ಕಾಂತಿಯಾಗಿದ್ದು ಗೊತ್ತೇ ಆಗಿರಲಿಲ್ಲ

ಮಸ್ತಿಷ್ಕ ಮಂದವಾಗಿ ಚುರುಕು ಚೆಲ್ಲಾಟವೆಲ್ಲ ಕಾಣೆಯಾಗಿತ್ತು ಗೊತ್ತೆ
ಶ್ರಮದ ಬೆವರ ಹನಿಯೊಂದು ಕನಸು ಕಟ್ಟಿಕೊಟ್ಟದ್ದು ಗೊತ್ತೇ ಆಗಿರಲಿಲ್ಲ

ಕಾತರಿಕೆಯೊಂದು ಹಂಬಲಕ್ಕೆ ತಿರುಗಿ ಕಾಡುತ್ತಿದೆಯಲ್ಲ ಈಗ ಶಮಾ
ಅವನ ಸಾಮೀಪ್ಯದ ಬಿಸುಪು ಸದ್ಯದಲ್ಲೆ ದಕ್ಕುವುದೆಂದು ಗೊತ್ತೇ ಆಗಿರಲಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT