ಮಂಗಳವಾರ, ಏಪ್ರಿಲ್ 7, 2020
19 °C

‘ಪ್ರದರ್ಶನ ಕಲೆಗಳ’ ಅನನ್ಯ ಛಾಯಾಗ್ರಾಹಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕ್ಯಾಮೆರಾ ಎಂಬ ಮಾಯಾ ಲೆನ್ಸ್‌ನಲ್ಲಿ ಛಾಯಾಗ್ರಾಹಕನೊಬ್ಬ ಅದ್ಭುತವನ್ನು ಸೆರೆ ಹಿಡಿಯಬಲ್ಲ. ಆತನಿಗೆ, ಶ್ರಮ, ಸಮಯಪ್ರಜ್ಞೆ, ತಂತ್ರಜ್ಞಾನದ ಜಾಣ್ಮೆಯ ಜೊತೆ ಸಹನೆ ಬೇಕಷ್ಟೇ. ಈಗ ಫೋಟೊಗ್ರಫಿ ತಂತ್ರಜ್ಞಾನ ಕೂಡ ಸಾಕಷ್ಟು ಅಭಿವೃದ್ಧಿಯಾಗಿದೆ. ಇದೆಲ್ಲವನ್ನು ಮೈಗೂಡಿಸಿಕೊಂಡಿರುವ ಛಾಯಾಗ್ರಾಹಕ ಶ್ರೀವತ್ಸ ಶಾಂಡಿಲ್ಯ ಪ್ರದರ್ಶನ ಕಲೆಗಳ (Performing arts) ಫೋಟೊಗ್ರಫಿಯಲ್ಲಿ ತಮ್ಮ ಅನನ್ಯತೆಯನ್ನು ರೂಪಿಸಿಕೊಂಡವರು.


ಶ್ರೀವತ್ಸ ಶಾಂಡಿಲ್ಯ

ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರ ಶ್ರೀವತ್ಸ, ಫೋಟೊಗ್ರಫಿಯನ್ನೇ ವೃತ್ತಿಯಾಗಿ ಆಯ್ದು ಕೊಂಡಿದ್ದಾರೆ. 1990ರಲ್ಲಿ ಪ್ರಜಾವಾಣಿ ದಿನಪತ್ರಿಕೆಗೆ ಹವ್ಯಾಸಿ ಛಾಯಾಗ್ರಾಹಕನಾಗಿ ಅವರ ಜರ್ನಿ ಶುರುವಾಗಿದ್ದು. ಫ್ಯಾಷನ್, ಸಿನಿಮಾ ತಾರೆಯರ ಭಾವ ಭಂಗಿಗಳನ್ನು ಕಲಾತ್ಮಕವಾಗಿ ಕ್ಲಿಕ್ ಮಾಡಿ ಹೆಸರಾದವರು. ಒಂದೇ ಚೌಕಟ್ಟಿನಲ್ಲಿ ಅನೇಕ ಚಿತ್ರಗಳೊಂದಿಗೆ ಕಥೆಯನ್ನು ರಚಿಸುವ ಬಹುಚಿತ್ರ ಛಾಯಾಗ್ರಹಣ ಕಲೆಯಲ್ಲೂ ಆಸಕ್ತಿ ಹೊಂದಿದವರು. ಪ್ರದರ್ಶನ ಕಲೆಗಳನ್ನು ಹೊಸ ಆಯಾಮದಲ್ಲಿ ಸೆರೆಹಿಡಿಯಲು ನೂತನ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲಿ ಇವರು ಮೊದಲಿಗರು. 

ಡಿಜಿಟಲ್ ಕ್ಯಾಮೆರಾದಲ್ಲಿ ಮಲ್ಟಿಪಲ್ ಎಕ್ಸ್‌ಪೋಷರ್‌ ಪೂಲ್ ಕಲೆಯನ್ನು ಕರಗತ ಮಾಡಿಕೊಂಡಂತಿರುವ ಶ್ರೀವತ್ಸ, ‘ಬಹುಚಿತ್ರ ಛಾಯಾಗ್ರಹಣದಲ್ಲಿ ಕಲ್ಪನೆ ಮತ್ತು ಸೃಜನಶೀಲತೆಗೆ ಮಿತಿ ಎಂಬುದೇ ಇಲ್ಲ. ಪ್ರತಿ ಬಹುಚಿತ್ರದ ಹಿಂದೆ ಒಂದು ಕಥೆ ಇರುತ್ತದೆ ಮತ್ತು ಅದನ್ನು ಸೆರೆಹಿಡಿಯುವುದು ಒಂದು ಸವಾಲು ಕೂಡ. ಚಿತ್ರಗಳು ಎದ್ದು ಕಾಣುವಂತೆ ಮತ್ತು ಅದರ ಫ್ರೇಂ ಗಮನ ಸೆಳೆಯುವಂತೆ ಮಾಡುವುದು ಸಾಹಸದ ಕೆಲಸ’ ಎನ್ನುತ್ತಾರೆ.

ಕೆಲ ವಿಶೇಷ ಚಿತ್ರಗಳನ್ನು ‘ಮೆಟ್ರೊ’ ಓದುಗರಿಗಾಗಿ ಇಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)