ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಲು

Last Updated 21 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಭಾರತದ ಅತ್ಯಂತ ಪುರಾತನ ವಾದ್ಯ ಪರಿಕರ ಕೊಳಲು. ಇದು ಅಜಂತಾದ ಚಿತ್ರಗಳಲ್ಲಿ ಕೂಡ ಕಾಣುತ್ತದೆ. ಶತಮಾನಗಳಷ್ಟು ಹಳೆಯದಾದ ದೇವಸ್ಥಾನಗಳ ಶಿಲ್ಪಗಳ ಕೈಯಲ್ಲಿ ಕೂಡ ಕೊಳಲು ಇದೆ. ಮೂಳೆಯಿಂದ ತಯಾರಿಸಿದ, ಸಾವಿರಾರು ವರ್ಷಗಳಷ್ಟು ಹಳೆಯದಾದ ಕೊಳಲಿನ ಅವಶೇಷಗಳು ಯೂರೋಪ್‌ ಮತ್ತು ಇತರ ಕೆಲವೆಡೆ ಸಿಕ್ಕಿವೆ. ಆದರೆ, ಭಾರತದಲ್ಲಿ ಸಂಗೀತ ಪರಿಕರವಾಗಿ ಬಳಕೆ ಮಾಡುವ ಕೊಳಲು ಆ ರೀತಿಯದ್ದಲ್ಲ.

ಕೊಳಲನ್ನು ಸಾಮಾನ್ಯವಾಗಿ ತಯಾರಿಸುವುದು ಒಳಗೆ ಟೊಳ್ಳು ಇರುವ ಬಿದಿರಿನಿಂದ. ಬೇರೆ ವಸ್ತುಗಳಿಂದ ಸಿದ್ಧಪಡಿಸುವುದೂ ಇದೆ. ಐದು ಅಥವಾ ಅದಕ್ಕಿಂತ ಹೆಚ್ಚಿನ ರಂಧ್ರಗಳು ಕೊಳಲಿಗೆ ಇರುತ್ತವೆ. ಆರಂಭದಲ್ಲಿ ಇರುವ ಒಂದು ರಂಧ್ರದ ಮೂಲಕ ಗಾಳಿಯನ್ನು ಹದವಾಗಿ ಊದುತ್ತ, ಇನ್ನುಳಿದ ರಂಧ್ರಗಳನ್ನು ಬೆರಳುಗಳನ್ನು ಬಳಸಿ ಸೂಕ್ತ ರೀತಿಯಲ್ಲಿ ಮುಚ್ಚಿ–ತೆರೆದು ಮಾಡಿ ಸ್ವರಗಳನ್ನು ಹೊರಡಿಸಲಾಗುತ್ತದೆ.

ಭಾರತದಲ್ಲಿ ಇರುವುದು ಮುಖ್ಯವಾಗಿ ಎರಡು ಬಗೆಯ ಕೊಳಲುಗಳು. ಒಂದು; ಬಾನ್ಸುರಿ. ಇದನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬಳಸಲಾಗುತ್ತದೆ. ಇನ್ನೊಂದು; ವೇಣು. ಇದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಬಳಕೆ ಮಾಡಲಾಗುತ್ತದೆ. ವೇಣು ಕೊಳಲಿಗೆ ಎಂಟು ರಂಧ್ರಗಳು ಇರುತ್ತವೆ. ಇದು ಬಾನ್ಸುರಿಗಿಂತ ಸಣ್ಣದು.

ಶ್ರೀಕೃಷ್ಣನನ್ನು ಬಹಳಷ್ಟು ಕಡೆಗಳಲ್ಲಿ, ಬಾನ್ಸುರಿ ಹಿಡಿದಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಆತನ ಕೊಳಲ ನಾದ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಿತ್ತು ಎನ್ನುವ ಮಾತು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT