ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿಕಣ ಸಂತೆ ಪುನರಾರಂಭ

Last Updated 1 ಅಕ್ಟೋಬರ್ 2021, 16:07 IST
ಅಕ್ಷರ ಗಾತ್ರ

ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಸಾಂಸ್ಕೃತಿಕ ಕೇಂದ್ರ ‘ರಾಗಿಕಣ’ ಸಂತೆ ಅ.2ರಂದು ಪುನರಾರಂಭಗೊಳ್ಳುತ್ತಿದೆ. ಕೋವಿಡ್‌ನಿಂದ ತೊಂದರೆಗೊಳಗಾದ ನೇಕಾರರ ಸಹಾಯಾರ್ಥವಾಗಿ ಅ. 2 ಮತ್ತು 3ರಂದು ಕೈಮಗ್ಗ ಮತ್ತು ಖಾದಿಯ ವಸ್ತ್ರಗಳ ಮಾರಾಟವನ್ನೂ ಆಯೋಜಿಸಲಾಗಿದೆ.

ನಿವೃತ್ತ ಪೋಲಿಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಸಂತೆ ಉದ್ಘಾಟಿಸಲಿದ್ದಾರೆ. ನಿಶಾಂತ್ ಗುರವ್ ಗಾಂಧಿ ಭಜನೆ ನಡೆಸಿಕೊಡುವರು. ನೃತ್ಯ ಕಲಾವಿದೆ ಸುಹಾಸಿನಿ ಕೌಲಗಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಅ. 3ರಂದು ಬೆಳಿಗ್ಗೆ 11ಕ್ಕೆ ‘ಖಾದಿ ಮತ್ತು ಕೈಮಗ್ಗದಲ್ಲಿ ಪ್ರಸ್ತುತ ಸವಾಲುಗಳು’ ವಿಷಯ ಕುರಿತು ಚರ್ಚೆ ನಡೆಯಲಿದೆ. ವಿಮೊರ್ ಸಂಸ್ಥೆಯ ಪವಿತ್ರಾ ಮುದ್ದಯ್ಯ, ‘ಮೆಟಫರ್ ರಾಚ’ದ ರವಿಕಿರಣ್, ಕಾಸ್‌ಕೋಮ್ ಸಂಸ್ಥೆಯ ಸ್ವಾಮಿನಾಥನ್ ವೈತಲಿಂಗಂ ಮತ್ತುವಸ್ತ್ರವಿನ್ಯಾಸಕಿ ಇಳಾ ದುಬೆ ಪಾಲ್ಗೊಳ್ಳುವರು. ಎರಡೂ ದಿನಗಳು ನೈಸರ್ಗಿಕವಾಗಿ ಬೆಳೆದ ಸೊಪ್ಪು– ತರಕಾರಿಗಳು, ದಿನಸಿ ಪದಾರ್ಥಗಳು, ಗಾಣದ ಎಣ್ಣೆ, ಕೈಉತ್ಪಾದಿತ ಕಲಾತ್ಮಕ ಹಾಗೂ ಕರಕುಶಲ ವಸ್ತುಗಳ ಮಾರಾಟವಿರುತ್ತದೆ.

ಸ್ಥಳ: ರಾಗಿಕಣ, ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ, ಬನ್ನೇರುಘಟ್ಟ ರಸ್ತೆ, ಗೊಟ್ಟಿಗೆರೆ, ಬೆಂಗಳೂರು.

ಸಂಪರ್ಕಕ್ಕೆ: 99726 76426, 99800 43911.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT