ಗುರುವಾರ , ಜೂನ್ 4, 2020
27 °C

ಯೂಟ್ಯೂಬ್‌ನಲ್ಲಿ ಆಕಾಶವಾಣಿ ನಾಟಕಗಳನ್ನು ಕೇಳಿ

ಸುಮತಿ ಬಿ ಕೆ Updated:

ಅಕ್ಷರ ಗಾತ್ರ : | |

Prajavani

ಸೂರ್ಯೋದಯವಾಗುತ್ತಿದೆ ಎಂಬುದರ ಚಿತ್ರಣದ ಅಂಶಗಳನ್ನು ಕಟ್ಟಿಕೊಡುವಾಗ, ಹಕ್ಕಿಗಳ ಕಲರವ, ಮೂಡುತ್ತಿರುವ ರವಿಯ ಹೊಂಬಣ್ಣದ ಜೊತೆ ಜೊತೆಗೇ ಬೆಸೆದುಕೊಂಡಿರುವ ಬಂಧನ ಸಂಗೀತ, ಅದು ಆಕಾಶವಾಣಿಯ ಶೀರ್ಷಿಕೆ ಸಂಗೀತ (Signature tune).

ರೇಡಿಯೊ ಇಂದು ದೇಶದ ಶೇಕಡಾ 99ರಷ್ಟು ಮಂದಿಯನ್ನು ಸುಲಭವಾಗಿ ತಲುಪುವ ಸಾಧನ. ರೇಡಿಯೊ ಅಂದರೆ ಆಕಾಶವಾಣಿ ಎನ್ನುವಷ್ಟು ಹೃದಯಗತ ಆಕಾಶವಾಣಿ. 1920 ರ ದಶಕದಲ್ಲಿ ಖಾಸಗಿ ಪ್ರಸಾರ ಗಳು ನಡೆಯುತ್ತಿದ್ದವು. ನಂತರ 30ರ ದಶಕದಲ್ಲಿ ಮುಂದುವರೆದು.. ರೇಡಿಯೋ ಕೇಂದ್ರಗಳು ಸ್ಥಾಪನೆ ಗೊಂಡು ಇಡೀ ಭಾರತದ ಒಂದು ಧ್ವನಿಶಕ್ತಿ ಯಾಯಿತು.

270 ಕೇಂದ್ರಗಳ ಆಕಾಶವಾಣಿ

ವಿಶ್ವದ ಅತ್ಯಂತ ದೊಡ್ಡ ಪ್ರಸಾರ ಜಾಲ ಹೊಂದಿರುವ ಆಕಾಶವಾಣಿ 270 ಕೇಂದ್ರಗಳನ್ನು ಹೊಂದಿದೆ, 23 ಭಾಷೆ, 146 ಉಪಭಾಷೆಗಳಲ್ಲಿ, ಪ್ರಾದೇಶಿಕ ಸೊಗಡಿನ ಸರಿಗಮ ಕೇಳಿಸುತ್ತಿದೆ. ಉಳ್ಳವನಿಗೆ ಹೊನ್ನಾಗಿ, ಬಡವನಿಗೆ ಬೆನ್ನಾಗಿ, ಸಾಮಾನ್ಯನಿಗೆ ಚೆನ್ನಾಗಿ, ದಣಿದ ಜೀವಗಳಿಗೆ ಚಿನ್ನವಾಗಿ ಕಿವಿ ತಲುಪುತ್ತಿದೆ.

ಅನೇಕ ಪರಿಕಲ್ಪನೆಯನ್ನು ಹುಟ್ಟುಹಾಕಿದ ಧೀಮಂತ. ಸಂಸ್ಕೃತಿ ವಾಹಕ, ಘನತೆಯ ಪ್ರಚಾರಕ, ಇತರ ಅನೇಕ ಮಾಧ್ಯಮಗಳಿಗೆ ಪದ ಕಟ್ಟಿಕೊಡುವ ಶಿಕ್ಷಕ.  ಆದರೂ .. ಇತ್ತೀಚಿನ ದಿನಗಳಲ್ಲಿ , ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳ ಗಂಟಲಾರಾಧನೆ ಕಾರಣ ಧ್ವನಿ ಆಧಾರಿತ ಗಂಟೆ ನಾದ ಕೇಳಿಸುತ್ತಿಲ್ಲವೇ ಎಂಬ ಸಂಶಯ ಕೆಲವರಿಗೆ.

ಕೇಳುಗರೇ ಕರ್ಣಬಂಧುಗಳು

ಒಂದು ರಾಗದ ಉದ್ಘೋಷಣೆ ತಪ್ಪಾದರೆ ಇಂದೂ ಕೂಡಲೇ ಕರೆಗಳು ಬರುತ್ತವೆ. ಅಕಸ್ಮಾತ್ ಪ್ರಸಾರದಲ್ಲಿ ಅಡಚಣೆ ಆದರೆ ಏನಾಯ್ತು ಸಾರ್ ಅಂತ ವಿಚಾರಿಸುವ ಕರ್ಣಬಂಧುಗಳು ನಮ್ಮ ಆಸ್ತಿ.

ಅತ್ಯಾಧುನಿಕ ತಂತ್ರಜ್ಞಾನ ದ ಮೂಲಕ ಸಂಸ್ಕೃತಿಯ ಸೇತುವಾಗಿ ಸಮಷ್ಟಿ ಸಂತುಷ್ಟಿ ಬಯಸುವ ಆಕಾಶವಾಣಿ ಈಗ you tube ಮೂಲಕ ನಿಮ್ಮ ಜೊತೆ ನಿಮಗೆ ಅನುಗುಣವಾಗಿ ನಿಮ್ಮಂತೆ ನಡೆಯಲು ಸಜ್ಜಾಗಿದೆ. ಯೂಟ್ಯೂಬ್‌ ಲಿಂಕ್‌ (Youtube link) ನಲ್ಲಿ ಬೆಂಗಳೂರು ಆಲ್‌ ಇಂಡಿಯಾ ರೇಡಿಯೊದ ಆಯ್ದ ಕಾರ್ಯಕ್ರಮಗಳು ಈಗ ಲಭ್ಯವಿವೆ. ಅದರಲ್ಲಿ ಧ್ವನಿ ಭಂಡಾರದ ಅತಿ ಅಮೂಲ್ಯ ನಾಟಕಗಳ ಲಿಂಕ್ ಅನ್ನು ಇಲ್ಲಿ ಕೊಡಲಾಗಿದೆ. ಲಿಂಕ್‌ ಒತ್ತಿ, ನಾಟಕ ಕೇಳಿ, ಆನಂದಿಸಿ.

ಗೋಕುಲ ನಿರ್ಗಮನ
ನಾಟಕಕಾರ: ಪು.ತಿ.ನರಸಿಂಹಾಚಾರ್.
ನಿರ್ದೇಶನ: ಬಿ.ವಿ.ಕಾರಂತ
https://www.youtube.com/watch?v=6Mzn2i8MSJs
===

ಕೇಳು ಜನಮೇಜಯ
ನಾಟಕಕಾರ: ಶ್ರೀರಂಗ
ನಿರ್ಮಾಣ: ವಸಂತ ಕವಲಿ
ನಿರ್ದೇಶನ: ಎಚ್.ಕೆ.ರಂಗನಾಥ
https://www.youtube.com/watch?v=Nbt53528TJc
===

ಕರ್ನಾಟಕುಲಪ್ರದೀಪ
ನಾಟಕಕಾರ್ತಿ: ಗಂಗಾದೇವಿ
ರಚನೆ ಮತ್ತು ನಿರ್ದೇಶನ: ಎಚ್.ಎಸ್.ನಾಗಭೂಷಣ ಭಟ್ಟ
https://www.youtube.com/watch?v=IZPPjSoTtGU
===

ವಿಗಡವಿಕ್ರಮರಾಯ
ನಾಟಕಕಾರ: ಸಂಸ
ನಿರ್ಮಾಣ, ನಿರ್ದೇಶನ: ಪರ್ವತವಾಣಿ
https://www.youtube.com/watch?v=5BHy5BUAVPI
===

ಜಾಗೃತರಾಷ್ಟ್ರ
ನಾಟಕಕಾರ: ಕೃಷ್ಣಕುಮಾರ ಕಲ್ಲೂರ
ನಿರ್ಮಾಣ: ಶ್ರೀನಿವಾಸ ಹಾವನೂರ
ನಿರ್ದೇಶನ: ಜ್ಯೋತ್ಸ್ನಾ ಕಾಮತ
https://www.youtube.com/watch?v=_70TpjyG0qc
===

ಮೈಮನಗಳ ಸುಳಿಯಲ್ಲಿ
ನಾಟಕಕಾರ: ಶಿವರಾಮ ಕಾರಂತ
ನಿರ್ಮಾಣ: ಯಮುನಾಮೂರ್ತಿ
ನಿರ್ದೇಶನ: ಜ್ಯೋತ್ಸ್ನಾ ಕಾಮತ
https://www.youtube.com/watch?v=nj42J5M26-M
===

ಮಹಾಶಿಲ್ಪಿ
ನಾಟಕಕಾರ: ಜ್ವಾಲನಯ್ಯ
ನಿರ್ಮಾಣ, ನಿರ್ದೇಶನ: ವಸಂತ ಕವಲಿ
https://www.youtube.com/watch?v=U8zHHGutuzk
===

ಜೋಗುತಿ ಕಲ್ಲು
ಸಾಹಿತ್ಯ: ಬೆಟಗೇರಿ ಕೃಷ್ಣಶರ್ಮಾ
ನಿರ್ಮಾಣ, ನಿರ್ದೇಶನ: ಜಿ.ಬಿ.ಪೂರ್ಣಿಮಾ
https://www.youtube.com/watch?v=vyLZ3TfYjPc
===

ಗೌಡರಮಲ್ಲಿ
ನಾಟಕಕಾರ: ಮಾಸ್ತಿ ವೆಂಕಟೇಶ ಐಯಂಗಾರ್
ನಿರ್ಮಾಣ, ನಿರ್ದೇಶನ: ಕೃಷ್ಣಮೂರ್ತಿ ಕವರ್ತಾರ
https://www.youtube.com/watch?v=S215A2CaUo0
===

ಮೃಗ ಮತ್ತು ಸುಂದರಿ
ನಾಟಕಕಾರ: ಪಿ.ಲಂಕೇಶ್
ನಿರ್ಮಾಣ, ನಿರ್ದೇಶನ: ಬಸವರಾಜ ಸದರ
https://www.youtube.com/watch?v=KV-wdmrdRoU
===

ಕಾಕನಕೋಟೆ
ನಾಟಕಕಾರ: ಮಾಸ್ತಿ ವೆಂಕಟೇಶ ಐಯಂಗಾರ್
ನಿರ್ಮಾಣ, ನಿರ್ದೇಶನ: ಬಿ.ಎಸ್.ನಾರಾಯಣ ರಾವ್
https://www.youtube.com/watch?v=UpS217A-4qU
===

ಜಲಗಾರ
ನಾಟಕಕಾರ: ಕುವೆಂಪು
ನಿರ್ಮಾಣ, ನಿರ್ದೇಶನ: ಎಸ್.ವಿ.ಕೃಷ್ಣ ಶರ್ಮಾ
https://www.youtube.com/watch?v=VVAUwXjEXh8
===

ಬೆಂಕಿ ಕೊಳವೆಯ ಹಕ್ಕಿ ಹಾಡು
ನಾಟಕಕಾರ: ಕೆ.ಮಹಾಲಿಂಗ ಭಟ್ಟ
ನಿರ್ಮಾಣ, ನಿರ್ದೇಶನ: ಬಿ.ಆರ್.ಶಿವರಾಮಯ್ಯ
https://www.youtube.com/watch?v=HFzmY9Alu8Q
===

ಹುಲಿಯ ಹೆಂಗರುಳು
ಸಾಹಿತ್ಯ: ಯು.ಆರ್.ಅನಂತಮೂರ್ತಿ
ನಿರ್ಮಾಣ, ನಿರ್ದೇಶನ: ನವರತ್ನರಾಮ್
https://www.youtube.com/watch?v=0lxqKuCsstk
===

ದೇವಿ
ಸಾಹಿತ್ಯ: ಎಚ್.ಎಸ್.ಪಾರ್ವತಿ
ನಿರ್ಮಾಣ, ನಿರ್ದೇಶನ: ಎಚ್.ಎಸ್.ಸರಸ್ವತಿ
https://www.youtube.com/watch?v=97nGe8KBp50

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.