ಸೋಮವಾರ, ಜನವರಿ 24, 2022
28 °C

'ಪ್ರಜಾವಾಣಿ’ ವರ್ಷದ ಸಾಧಕಿ: ನೊಂದವರಿಗೆ ನೆರವಾಗುವ ದಶ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಕಾಲದಲ್ಲಿ ನೊಂದವರ ನೋವಿಗೆ ಮಿಡಿದವರು ದಶ್ಮಿ. ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಿಯಾಗಿರುವ ಅವರಿಗೆ ಬೈಕ್‌ ಓಡಿಸುವುದೆಂದರೆ ಬಲು ಪ್ರೀತಿ.

ರಾಯಲ್‌ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ 650 ಸಿಸಿ ಬೈಕ್‌ನಲ್ಲಿ ನೂರಾರು ಕಿ.ಮೀ. ಸಂಚರಿಸಿ ಕೋವಿಡ್‌ಯೇತರ ರೋಗಿಗಳಿಗೆ ಔಷಧವನ್ನು ಒದಗಿಸಿದ್ದ ಅವರು, ಮನೆ ಆರೈಕೆಯಲ್ಲಿರುವ ಬೆಂಗಳೂರಿನ ನಿವಾಸಿಗಳಿಗೆ ಆಹಾರದ ಪೊಟ್ಟಣಗಳನ್ನೂ ಪೂರೈಸಿದ್ದರು. ಕುಗ್ರಾಮಗಳಲ್ಲಿ ನೆಲೆಸಿರುವ ವೃದ್ಧರು ಹಾಗೂ 50 ಬಡ ಕುಟುಂಬಗಳಿಗೆ ಅಗತ್ಯ ಔಷಧ ತಲುಪಿಸಿದ್ದಲ್ಲದೆ, ಸಾವಿರ ಮಂದಿಗೆ ಸ್ಯಾನಿಟರಿ ಪ್ಯಾಡ್‌ ಹಾಗೂ 50 ಕುಟುಂಬಗಳಿಗೆ ದಿನಸಿ ಕಿಟ್‌ ಅನ್ನು ವಿತರಿಸಿದ್ದರು.

ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಪತಿ ಹಾಗೂ ಮಕ್ಕಳ ಜೊತೆ ಮನೆಯಲ್ಲಿಯೇ ಉಳಿಯದ ದಶ್ಮಿ, ವಿಶೇಷ ಕಾರ್ಯದಲ್ಲಿ ತೊಡಗಿಕೊಳ್ಳಲು ತೀರ್ಮಾನಿಸಿದ್ದರು. ಕೊರೊನಾ ಮೊದಲ ಅಲೆಯ ವೇಳೆ ಕೋವಿಡ್‌ ಸೇನಾನಿಯಾಗಿ ಕೆಲಸ ಮಾಡಿದ್ದ ಅವರು ಎರಡನೇ ಅಲೆ  ವೇಳೆಯೂ ಕೆಲ ಸ್ವಯಂ ಸೇವಾ ಸಂಸ್ಥೆಗಳು ತಿಳಿಸಿದ ವಿಳಾಸಕ್ಕೆ ಬೈಕ್‌ನಲ್ಲೇ ಹೋಗಿ ಮನೆ ಆರೈಕೆಯಲ್ಲಿದ್ದವರಿಗೆ ಔಷಧ ಪೂರೈಸಿದ್ದರು.

ಬಿಡದಿಯ ಮಹಿಳೆಯೊಬ್ಬರು ಎಚ್‌ಐವಿಯಿಂದ ಬಳಲುತ್ತಿದ್ದರು. ಅವರಿಗೆ ತುರ್ತಾಗಿ ಅಗತ್ಯವಿದ್ದ ಔಷಧವನ್ನು ರಾಮನಗರದಿಂದ ತಂದು ಕೊಟ್ಟಿದ್ದರು. ಒಮ್ಮೆ ತುಮಕೂರಿನ ಕುಣಿಗಲ್‌ ರಸ್ತೆಯಲ್ಲಿರುವ ಗೂಳೂರಿಗೂ ಹೋಗಿ ವ್ಯಕ್ತಿಯೊಬ್ಬರಿಗೆ ಔಷಧ ತಲುಪಿಸಿದ್ದರು.

ಹೆಸರು: ದಶ್ಮಿ ರಾಣಿ
ವೃತ್ತಿ: ವಿಜ್ಞಾನ ಶಿಕ್ಷಕಿ
ಸಾಧನೆ: ಸಮಾಜ ಸೇವೆ (ಬಡ ಕುಟುಂಬಗಳಿಗೆ ನೆರವು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು