ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕದ ಮೊದಲ ಓದು: ಸಿಡ್ನಿ ಶ್ರೀನಿವಾಸ್ ಅವರ ಅಳಿಯಲಾರದ ನೆನಹು

Last Updated 12 ಮಾರ್ಚ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರಿನ ಭಾವಗಳು, ಬದುಕಿನಲ್ಲಿ ಕಂಡ ನೋಟಗಳು ಸಿಡ್ನಿಯಲ್ಲಿ ಕಾಡಿ ಕಥನರೂಪ ಪಡೆದಿವೆ. ಈ ಕಥೆಗಳ ನಿರೂಪಣೆಗೆ ಮಾತ್ರ ಸಾಹಿತ್ಯಿಕ ಒಗ್ಗರಣೆ ಇದೆ. ಆದರೆ, ವಸ್ತುಗಳು ಮಾತ್ರ ಲೇಖಕ ಸಿಡ್ನಿ ಶ್ರೀನಿವಾಸ್‌ ಅವರ ದೈನಂದಿನ ಬದುಕಿನಲ್ಲಿ ಕಂಡದ್ದು, ಕೇಳಿದ್ದು ಮತ್ತು ಕಾಡಿದ್ದು. ಫೇಸ್‌ಬುಕ್‌ನಲ್ಲಿ ಕಂಡ ಮಲ್ಲೇಶ್ವರದ ಹುಡುಗಿ, ಸುರೇಶ್‌– ಜಾನಕಿ ಅವರ ಕ್ಲಬ್ಬಿನ ಸನ್ನಿವೇಶ, ಸಂಪ್ರದಾಯಸ್ಥರು ಮತ್ತು ಪಾಶ್ಚಾತ್ಯರ ಕೂಟದಲ್ಲಿ ಸೃಷ್ಟಿಯಾಗುವ ಉಭಯ ಸಂಕಟ... ಹೀಗೆ ಬದುಕಿನ ಹತ್ತಾರು ವಿಷಯಗಳು ಕಥೆಗಳ ಚೌಕಟ್ಟಿನೊಳಗೆ ಸೇರಿಕೊಂಡಿವೆ.

ಈಗಿನ ಬದುಕು ಮತ್ತು ಮುಂದಿನ ತಲೆಮಾರಿನ ಮೇಲಿನ ಕಾಳಜಿಯ ಆಶಯ ಹಲವು ಕಥೆಗಳಲ್ಲಿ ವ್ಯಕ್ತವಾಗಿವೆ.

ಸಂಬಂಧಗಳ ಸಿಕ್ಕು, ಅಹಂ, ಪ್ರತಿಷ್ಠೆ, ಭಾವ, ನೋವು, ದ್ವಂದ್ವ, ಸಂಸ್ಕೃತಿಯ ಸಂಘರ್ಷಗಳು ಎಲ್ಲವನ್ನೂ ಒಂದು ಕೃತಿಯೊಳಗೆ ಕಟ್ಟಿಕೊಡಲು ಲೇಖಕರು ಯತ್ನಿಸಿದ್ದಾರೆ. ‘ಮಯೂರ’ ಸೇರಿದಂತೆ ನಾಡಿನ ನಾನಾ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ಕಥೆಗಳಿವು. 16 ಕಥೆಗಳಿವೆ. ಕೆಲವು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತವೆ. ಇನ್ನೂ ಕೆಲವು ದೀರ್ಘವಾಗಿವೆ.

ಕೃತಿ: ಅಳಿಯಲಾರದ ನೆನಹು

ಲೇ: ಸಿಡ್ನಿ ಶ್ರೀನಿವಾಸ್‌

ಪ್ರ: ಪ್ರಿಸಂ ಬುಕ್ಸ್‌ ಪ್ರೈ. ಲಿ., ಬೆಂಗಳೂರು
ಸಂ. 080–26714108

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT