ಮಂಗಳವಾರ, ಜೂನ್ 28, 2022
26 °C

‘ಬೆಂಗಳೂರು ದರ್ಶನ’ ಸಂಪುಟ: ರಿಯಾಯಿತಿ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉದಯಭಾನು ಕಲಾಸಂಘವು ತನ್ನ 58ನೇ ಸಂಸ್ಥಾಪನಾ ದಿನಾಚರಣೆ ಹಾಗೂ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ‘ಬೆಂಗಳೂರು ದರ್ಶನ’ ತ್ರಿವಳಿ ಸಂಪುಟವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದರ ದಿನಾಂಕವನ್ನು ಈ ತಿಂಗಳ ಅಂತ್ಯದವರೆಗೂ ವಿಸ್ತರಿಸಿದೆ. 

‘ತಲಾ 1 ಸಾವಿರ ಪುಟಗಳು ಹಾಗೂ 7 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಒಳಗೊಂಡಿರುವ ಈ ಸಂಪುಟಗಳು ನಗರದ ಸಮಗ್ರ ಪರಿಚಯ ನೀಡುವ ಪ್ರಕಟಣೆಗಳಾಗಿವೆ. ಈ ಗ್ರಂಥಗಳ ಮುಖಬೆಲೆ ₹3,750. ಓದುಗರ ಅನುಕೂಲಕ್ಕಾಗಿ ಇವುಗಳನ್ನು ₹2 ಸಾವಿರಕ್ಕೆ ಒದಗಿಸಲಾಗುತ್ತಿದೆ. ಗ್ರಂಥ ಖರೀದಿಸುವವರಿಗೆ 3 ಸಂಪುಟಗಳ ಡಿವಿಡಿಗಳನ್ನು ₹300ಕ್ಕೆ ನೀಡಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ: 080–26609343 ಅಥವಾ 26601831.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು