ಈ ಕೃತಿಯಲ್ಲಿ35 ಅಧ್ಯಾಯಗಳಿವೆ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಸಮಗ್ರ ಮಾಹಿತಿಯನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಅವರ ಹೆಜ್ಜೆ ಗುರುತುಗಳನ್ನು, ಅವರ ಜೀವನಯಾನದ ಪ್ರತಿ ಘಟನೆಯನ್ನೂ ಕಾಲಾನುಕ್ರಮಣಿಕೆಯಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ಬಳಕೆ ಮಾಡಿರುವ ಸಂದರ್ಭೋಚಿತ ಚಿತ್ರಗಳು ಕೃತಿಗೆ ಅಂದ ತಂದುಕೊಟ್ಟಿವೆ. ಸರಳ ಭಾಷೆ, ಆಕರ್ಷಕ ನಿರೂಪಣೆಯಿಂದ ಕೃತಿ ಸರಾಗವಾಗಿ ಓದಿಸಿಕೊಳ್ಳುತ್ತದೆ. ಇದೊಂದು ಕನ್ನಡಕ್ಕೆ ಅಪರೂಪದ ಕೃತಿ ಎನ್ನಬಹುದು.

ಎಲ್ಲಾ ಮುಖ್ಯ ಸಂದರ್ಭಗಳಲ್ಲಿನ ಅಂಬೇಡ್ಕರ್ ಅವರ ಪ್ರತಿಕ್ರಿಯೆ, ಪ್ರತಿಸ್ಪಂದನೆ, ಸಮರ್ಥನೆಗಳು ಈ ಕೃತಿಯಲ್ಲಿ ಯಥಾವತ್ತಾಗಿ ದಾಖಲುಗೊಂಡಿವೆ. ಆದರೆ ಗಾಂಧೀಜಿಯವರ ಹತ್ಯೆಯಾದಾಗಿನ ಅಂಬೇಡ್ಕರ್ ಪ್ರತಿಕ್ರಿಯೆಯ ವಿವರಗಳಿಲ್ಲದಿರುವುದು ಕುತೂಹಲಕಾರಿಯಾಗಿದೆ ಎಂದು ಲೇಖಕ ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಮಾತು ಚಿಂತನಾರ್ಹವಾಗಿದೆ. ಲೇಖಕರು ಆಳವಾದ ಅಧ್ಯಯನ ಮತ್ತು ಸಂಶೋಧನೆ ನಡೆಸಿ ರಚಿಸಿರುವ ಈ ಕೃತಿಯಲ್ಲಿ ಈ ಅಂಶ ಇಲ್ಲದಿರುವುದು ಕೃತಿಯ ಕೊರತೆಯಂತೆ ಕಾಣಿಸುತ್ತದೆ.

ಅಂಬೇಡ್ಕರ್ ಮಹಾಮಾನವನ
ಮಹಾಯಾನ

ಪುಟ: 790
ಬೆಲೆ: ₹1,500
ಲೇ: ಡಾ.ಸಿ.ಚಂದ್ರಪ್ಪ,
ಪ್ರ: ಸ್ವಪ್ನ ಬುಕ್ ಹೌಸ್, ಬೆಂಗಳೂರು
ಮೊ: 93428 13528

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.