ಶುಕ್ರವಾರ, ಏಪ್ರಿಲ್ 23, 2021
28 °C

ಪೂ ಮತ್ತು ಇತರ ಕತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೇಖಕ: ಮಂಜುನಾಯಕ ಚಳ್ಳೂರು
ಪ್ರಕಾಶನ: ಅಹರ್ನಿಶಿ
ಪುಟ ಸಂಖ್ಯೆ: 80 
ಬೆಲೆ: ₹ 80
ಮೊಬೈಲ್: 94491 74662

***

‘ಫೂ ಮತ್ತು ಇತರ ಕತೆಗಳು’ ಕಥೆಗಾರ ಮಂಜುನಾಯಕ ಚಳ್ಳೂರು ಅವರ ಮೊದಲ ಕಥಾಸಂಕಲನ. ಒಟ್ಟು ಏಳು ಕಥೆಗಳು ಇಲ್ಲಿವೆ. ಪ್ರತಿ ಕಥೆಯೂ ತಾಜಾ ರೂಪಕ ಮತ್ತು ವಿಶಿಷ್ಟ ಕಥನ ತಂತ್ರವನ್ನು ಒಗ್ಗೂಡಿಸಿಕೊಂಡಿದೆ.

ಕಥಾ ವಿನ್ಯಾಸ, ಕುತೂಹಲಕಾರಿ ಭಾಷಾ ಪ್ರಯೋಗ, ದೇಸಿ ನುಡಿಗಟ್ಟಿನ ಬಳಕೆಯಿಂದ ಈ ಕಥೆಗಳ ಓದು ಹೆಚ್ಚು ಆಪ್ತವಾಗುತ್ತದೆ. ಇಲ್ಲಿನ ಬಹುತೇಕ ಕಥೆಗಳು ಮನುಷ್ಯನ ಬದುಕಿನ ಶೋಧವನ್ನೇ ಕೇಂದ್ರವಾಗಿ ಹೊಂದಿದ್ದು, ಗ್ರಾಮೀಣ ಕಟ್ಟುಕಟ್ಟಳೆಗಳ ಬದುಕು ಇಲ್ಲಿನ ಕಥಾವಸ್ತುಗಳಾಗಿವೆ.

ಗ್ರಾಮೀಣ ಹೆಣ್ಣುಮಕ್ಕಳ ಬದುಕಿನ ದುರ್ಗಮ ದಾರಿಗಳ ಪಯಣದ ಗಳಿಗೆಗಳನ್ನು ಕಥೆಗಾರ ಕಥನವಾಗಿಸಿದ್ದು, ಹುಸಿ ಭಾವುಕತೆ, ಜನಪ್ರಿಯ ಗ್ರಹೀತಗಳಿಗೆ ಒಳಗಾಗದೆ ಬದುಕಿನ ಘೋರ ವಾಸ್ತವವನ್ನು ಎದುರಾಗಿಸುವಲ್ಲಿ ಗೆದ್ದಿದ್ದಾರೆ. ಇಲ್ಲಿನ ಬಹುತೇಕ ಕಥೆಗಳು ಮನುಷ್ಯನ ಅಂತಃಕರಣವನ್ನು ಪೊರೆದಿವೆಯೆ ವಿನಃ ಅದರ ವಿರುದ್ಧದ ದನಿಯಾಗಿಲ್ಲ ಎಂಬುದೇ ಓದುಗರಿಗೆ ಭರವಸೆ ಹುಟ್ಟಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು