ಭಾನುವಾರ, ಮಾರ್ಚ್ 29, 2020
19 °C

ಸ್ತ್ರೀವಾದ ಮತ್ತು ಲೈಂಗಿಕತಾವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮನುಷ್ಯ ಮೌಲ್ಯ ಕಳೆದುಕೊಂಡು ಬದುಕುತ್ತಿರುವ ಈ ಸಮಾಜದಲ್ಲಿ ಪುರುಷ ಧೋರಣೆಗಳು ಮಹಿಳೆಯರನ್ನು ಹತ್ತಿಕ್ಕುತ್ತಲೇ ಬಂದಿವೆ. ಶೋಷಣೆಗಳನ್ನೂ ಮೀರಿ ಸ್ತ್ರೀಯರು ಸಮಾಜದ ಮುನ್ನೆಲೆಗೆ ಬರುತ್ತಿರುವುದು ಒಂದೆಡೆ ಸಂತಸ ತಂದರೆ, ಮತ್ತೊಂಡೆ ಅಂಥವರನ್ನು ನೋಡುವ ದೃಷ್ಠಿಕೋನವೇ ಬೇರೆ. 

ಪ್ರತಿ ನಿತ್ಯ ಅತ್ಯಾಚಾರ, ಹಿಂಸೆಗಳು, ಲೈಂಗಿಕ ಕಿರುಕುಳಗಳು ವರದಿಯಾಗುತ್ತಲೇ ಇವೆ. ಇವುಗಳನ್ನು ಪ್ರಶ್ನಿಸುವ ಹಿನ್ನೆಲೆಯಲ್ಲಿ ಸ್ತ್ರೀವಾದಿಗಳು ಧನಿ ಎತ್ತಿದ್ದು, ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. 

ಸ್ತ್ರೀವಾದ ಮತ್ತು ಲೈಂಗಿಕತಾವಾದಗಳು ಹೇಗೆ ಹುಟ್ಟಿದವು ಮತ್ತು ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನವನ್ನು ಹೇಳುವ ಪ್ರಯತ್ನವನ್ನು ಲೇಖಕಿ ಈ ಕೃತಿಯಲ್ಲಿ ಮಾಡಿದ್ದಾರೆ. ಲೈಂಗಿಕತಾವಾದ ಎಂದರೇನು ಎಂದು ವಿವರಿಸುತ್ತಾ ಲೇಖಕಿ, ವ್ಯಕ್ತಿಗಳ ನಂಬಿಕೆ, ಆಚರಣೆ ಮತ್ತು ಅಭಿವ್ಯಕ್ತಿಯಲ್ಲಿ ಇದು ಆಳವಾಗಿ ಅಡಗಿದೆ ಎನ್ನುತ್ತಾರೆ. ಲೈಂಗಿಕತೆ ಎನ್ನುವುದು ಸಮಾಜದ ಚರಿತ್ರೆಯಷ್ಟೇ ಹಳೆಯದು. ಈ ದಮನದ ಬಗೆಯು ಕಾಲಕಳೆದಂತೆ ಇನ್ನಷ್ಟು ವ್ಯಾಪಕವಾಗಿ, ವೈವಿಧ್ಯಮಯವಾಗಿ ಹೊಸ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳತೊಡಗಿವೆ ಎಂದು ಮರುಗಿದ್ದಾರೆ.

ಸ್ತ್ರೀವಾದಿಗಳ ಕೆಲಸ, ಹೋರಾಟದ ಹಾದಿ ಇವುಗಳನ್ನು ವಿವರಿಸುವ ಲೇಖಕಿ, ಸ್ತ್ರೀವಾದದ ಬಗೆಗೆ ತಿಳಿವಳಿಕೆ ನೀಡಲು ಈ ಕೃತಿಯಲ್ಲಿ ಪ್ರಯತ್ನಿಸಿರುವುದು ಎದ್ದುಕಾಣುತ್ತದೆ. ಹಾಗೆಯೇ ಕಾಲಮಾನದ ಸ್ತ್ರೀವಾದದ ಬಹುರೂಪಗಳನ್ನು ಎಳೆಯೆಳೆಯಾಗಿ ವಿವರಿಸಿದ್ದಾರೆ. ಪಿತೃಪ್ರಧಾನ ಕುಟುಂಬದಲ್ಲಿ ಕಳೆದುಹೋದ ತನ್ನ ಅಸ್ಮಿತೆಯನ್ನು ಸ್ತ್ರೀ ಉಳಿಸಿಕೊಳ್ಳುವ ಚಿಂತನೆಯಿಂದ ಹಿಡಿದು ವಿವಿಧ ಹಂತದಲ್ಲಿ ಅವಳ ಸ್ಥಾನವನ್ನು ಕುರಿತು ಈ ಪುಸ್ತಕವು ವಿವರವಾಗಿ ಬಿಚ್ಚಿಟ್ಟಿದೆ.

ಪುಸ್ತಕ: ಸ್ತ್ರೀವಾದ ಮತ್ತು ಲೈಂಗಿಕತಾವಾದ

ಲೇಖಕಿ: ಎಚ್‌ ಎಸ್‌ ಶ್ರೀಮತಿ

ಬೆಲೆ: ₹ 90 

ಪುಟ: 92

ಪ್ರಕಾಶಕರು: ಅಹರ್ಶಿನಿ ಪ್ರಕಾಶನ

ಮೊ: 9449174662

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)