ಸೋಮವಾರ, ಜೂನ್ 1, 2020
27 °C

ಬುದ್ಧಿಶಕ್ತಿ ಒಂದಲ್ಲ, ಹಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬುದ್ಧಿಶಕ್ತಿ ಏಕವಲ್ಲ, ಅನೇಕ. ಮನುಷ್ಯರಲ್ಲಿ ಒಂದು ರೀತಿಯ ಬುದ್ಧಶಕ್ತಿಗೆ ಬದಲಾಗಿ ಬಹುವಿಧದ ಬುದ್ಧಿಶಕ್ತಿಗಳಿವೆ; ಅಷ್ಟೇ ಅಲ್ಲ ಒಂಬತ್ತು ಬಗೆಯ ಬುದ್ಧಿಶಕ್ತಿ ಇವೆ ಎನ್ನುವ ವಾದ ಸಮಕಾಲೀನ ಮನೋವಿಜ್ಞಾನಿ ಹೋವರ್ಡ್‌ ಗಾರ್ಡನರ್‌ದು. ಇಂತಹ ಬಹುವಿಧದ ಬುದ್ಧಿಶಕ್ತಿಯ ಪರಿಕಲ್ಪನೆಯಂತೂ ಕನ್ನಡದ ಮಟ್ಟಿಗೆ ಹೊಸತು. ಗಾರ್ಡನರ್‌ ಥಿಯರಿ ಮನೋವಿಜ್ಞಾನ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಚಿಂತನೆ ಹುಟ್ಟು ಹಾಕಿರುವುದಷ್ಟೇ ಅಲ್ಲ, ದೊಡ್ಡ ಅಲೆಯನ್ನೆ ಎಬ್ಬಿಸಿದೆ. ಎಲ್ಲ ಮನುಷ್ಯರ ಬುದ್ಧಿಮಟ್ಟ ಏಕೆ ಏಕ ರೀತಿಯಲ್ಲಿರುವುದಿಲ್ಲ ಎನ್ನುವ ಪ್ರಶ್ನೆಗೂ ಗಾರ್ಡನರ್‌ ನೀಡಿರುವ ಉತ್ತರಗಳು ಈ ಕೃತಿಯಲ್ಲಿವೆ. ಸಾಮಾನ್ಯ ಜನರು ಬುದ್ಧಿಶಕ್ತಿಯನ್ನು ಗ್ರಹಿಸುವ ಪರಿಗೂ ಮತ್ತು ಮನೋವಿಜ್ಞಾನಿಗಳು ಗ್ರಹಿಸುವ ಪರಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ಎಂಟು ಅಧ್ಯಾಯಗಳಿರುವ ಪುಟ್ಟ ಕೃತಿ ಇದು. ಅನುಬಂಧದಲ್ಲಿರುವ ‘ಬುದ್ಧಿಶಕ್ತಿ ಸೂಚ್ಯಂಕ’, ‘ಬಹುವಿಧ ಬುದ್ಧಿಶಕ್ತಿಗಳು ಪರೀಕ್ಷಣ’ ಹಾಗೂ ‘ಬಹುವಿಧ ಬುದ್ಧಿಶಕ್ತಿಗಳ ಸಮೀಕ್ಷೆ’ ಮಾದರಿಗಳಿಂದ ನಮ್ಮ ನಮ್ಮ ಬುದ್ಧಿಶಕ್ತಿ ಮಟ್ಟವನ್ನು ಪರೀಕ್ಷಿಸಿಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು