ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ
ಲೇ: ಟಿ.ಎಸ್.ಗೊರವರ
ಪ್ರ: ಸಂಗಾತ ಪುಸ್ತಕ
ಮೊ: 93417 57653

ಭಾವಗೀತಾತ್ಮಕ ಭಾಷೆಯ ಮೂಲಕ ಗಮನಸೆಳೆದಿರುವ ಕಥೆಗಾರ ಟಿ.ಎಸ್. ಗೊರವರ ಅವರ ಗದ್ಯ ಕವಿತೆಗಳ ಸಂಕಲನ ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’. ಮೂರು ಕಥಾ ಸಂಕಲನಗಳು ಹಾಗೂ ಒಂದು ಕಾದಂಬರಿ ಮೂಲಕ ಈಗಾಗಲೇ ಸಾಹಿತ್ಯದ ನೆಲದಲ್ಲಿ ಗಟ್ಟಿಯಾದ ಹೆಜ್ಜೆ ಗುರುತು ಮೂಡಿಸಿರುವ ಗೊರವರ, ಈಗ ರೂಪದಲ್ಲಿ (ಫಾರ್ಮ್) ಹೊಸಹಾದಿಯ ಹುಡುಕಾಟದಲ್ಲಿದ್ದಾರೆ. ಇಲ್ಲಿನ ಬರಹಗಳು ಒಮ್ಮೊಮ್ಮೆ ಗದ್ಯದ ನುಡಿಗಟ್ಟಿಗೆ ಪದ್ಯವನ್ನು ಅಳವಡಿಸಿಕೊಂಡರೆ, ಮತ್ತೆ ಕೆಲವೊಮ್ಮೆ ಪದ್ಯದ ನುಡಿಗಟ್ಟಿಗೆ ಗದ್ಯವನ್ನು ಅಳವಡಿಸಿಕೊಂಡಿರುವುದು ಕುತೂಹಲಕಾರಿ. ಲೇಖಕರೇ ಹೇಳುವಂತೆ ಕಾವ್ಯದ ಲಯ, ಕಲಾತ್ಮಕತೆ, ಅದರ ಚೆಲುವು ಮತ್ತು ಗದ್ಯದ ಕುಸುರಿತನ ಮಿಳಿತಗೊಂಡ ರಚನೆಗಳು ಇವಾಗಿವೆ.

ಕಟ್ಟಿದ ರೂಪವನ್ನು ಒಡೆದು ಹೊಸರೂಪ ಕಟ್ಟಲು ಹಂಬಲಿಸುವ ಈ ರಚನೆಗಳು ಗದ್ಯ ಕವಿತೆಗಳ ಪ್ರಕಾರ ತುಳಿದಿರುವ, ತುಳಿಯಬೇಕಾದ ಹಾದಿಯ ಕುರಿತು ಚರ್ಚೆಯನ್ನೂ ಹುಟ್ಟುಹಾಕುತ್ತವೆ. ಮುನ್ನುಡಿ ಬರೆದಿರುವ ಮನು ವಿ. ದೇವದೇವನ್, ‘ಈ ರೂಪವು ಅಭಿವ್ಯಕ್ತಿಯ ಅಪಾರ ಸಾಧ್ಯತೆಗಳನ್ನು ತೆರೆದಿಡುತ್ತದೆ’ ಎಂದಿದ್ದಾರೆ. ಭಾವತೀವ್ರತೆಯಿಂದ ಕೂಡಿರುವ ಗೊರವರ ಅವರ ಗಪದ್ಯ ಸಾಲುಗಳ ಒಂದು ಸ್ಯಾಂಪಲ್ ನೋಡಿ: ‘ನೀನೋ ಗಾಳಿಗೆ ಓಲಾಡುವ ಭತ್ತದ ಪೈರಿನಂತೆ ಅಲ್ಲೇ ಸೊಗಸುಗೊಂಡು ನಿಂತಿದ್ದೆ. ಕೊನೆಗೂ ನಿನ್ನ ವಿಳಾಸ ಸಿಕ್ಕಿತು ಬಿಸಿಲೊಳಗೆ ಮರದ ನೆರಳು ಸಿಕ್ಕಂತೆ’!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.