ಸೋಮವಾರ, ಮಾರ್ಚ್ 30, 2020
19 °C

ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು

ಲೇ: ಶಾಂತಿ ಕೆ. ಅಪ್ಪಣ್ಣ

ಪ್ರ: ಸಂಗಾತ ಪುಸ್ತಕ

ಮೊ: 93417 57653

ಬದುಕಿನ ಸುತ್ತವೇ ಹೆಣೆದ ಕಥೆಗಳು ಇವು. ಮನುಷ್ಯ ಸಂಬಂಧಗಳು ಮತ್ತು ಪ್ರೀತಿವಾತ್ಸಲ್ಯಗಳೇ ಈ ಕಥೆಗಳ ಜೀವದ್ರವ್ಯವಾಗಿ ಮೂಡಿಬಂದಿವೆ. ಈ ಸಂಕಲನದಲ್ಲಿ 13 ಕಥೆಗಳಿವೆ. ಸ್ತ್ರೀ ಸಂವೇದನೆಯೂ ಇವುಗಳಲ್ಲಿ ಹಾಸುಹೊಕ್ಕಾಗಿದೆ.

ಕೊನೆಯಲ್ಲಿ ಹೇಳಬೇಕಾದ್ದನ್ನು ನೇರವಾಗಿ ಹೇಳದೆ ಸೂಚ್ಯವಾಗಿ ಧ್ವನಿಸುವ ಗುಣ ಮತ್ತು ಕ್ರಮವನ್ನು ಕಥೆಗಾರ್ತಿ ಕಾಯ್ದುಕೊಂಡಿದ್ದಾರೆ. ಈ ಗಟ್ಟಿತನವೇ ಎಲ್ಲ ಕಥೆಗಳಲ್ಲಿಯೂ ಢಾಳಾಗಿಯೂ ಕಾಣಿಸುತ್ತವೆ ಮತ್ತು ಓದುಗರನ್ನು ಕಾಡುತ್ತವೆ. ಎಲ್ಲೋ ಯಾವುದೋ ಹೊತ್ತಿನಲ್ಲಿ ಮನದೊಳಗೆ ಮಿಂಚಿನಂತೆ ಏಳುವ, ಯಾವುದೋ ಒಂದು ಅನಾಮಿಕ ಎಳೆಯನ್ನು ಹಿಡಿದುಕೊಂಡು ಅದು ಕೊಂಡೊಯ್ಯುವ ಹಾದಿಯಲ್ಲಿ ನಡೆಸುತ್ತಾ ಸುಖ ನೀಡುವ ಕಥೆಗಳು ಇವು ಎಂದರೆ ಉತ್ಪ್ರೇಕ್ಷೆ ಎನಿಸದರು. 

ಇಲ್ಲಿಯ ಬಹುತೇಕ ಕಥೆಗಳು ನಮ್ಮವೇ ಎನ್ನಿಸುವಷ್ಟು ಆಪ್ತವೂ, ಮಧುರವೂ ಆಗಿವೆ. ಆದರೆ, ಪ್ರತಿ ಕಥೆಯಲ್ಲೂ ಸಣ್ಣಸಣ್ಣ ವಿವರಗಳನ್ನು ಕಥೆಗಾರ್ತಿ ಪೋಣಿಸುತ್ತಾ ಹೋಗಿರುವುದು ಸರಾಗ ಓದಿನ ಹಾದಿಯನ್ನು ತುಸು ತ್ರಾಸಗೊಳಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)