ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ತೆಪರೇಸಿ ತಿನಿಸಿದ ‘ಚುರುಮುರಿ’

Last Updated 9 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ತೆಪರೇಸಿ ರಿಟರ್ನ್ಸ್‌
‘ಪ್ರಜಾವಾಣಿ’ಯ ವಿನೋದ ಅಂಕಣ ಬರಹಗಳು
ಲೇ: ಬಿ.ಎನ್‌. ಮಲ್ಲೇಶ್‌
ಪ್ರ: ಬಹುರೂಪಿ
ಸಂ: 7019182729

ರಾಜಕೀಯ ವಿಡಂಬನೆಗಳು ಪತ್ರಿಕೆಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪವಾಗಿವೆ. ಸಾಹಿತ್ಯದ ಅಂತಹ ಅಪರೂಪದ ಪ್ರಭೇದದ ವಾರಸುದಾರರಲ್ಲಿ ಬಿ.ಎನ್‌. ಮಲ್ಲೇಶ್‌ ಕೂಡ ಒಬ್ಬರು. ‘ಪ್ರಜಾವಾಣಿ’ಯಲ್ಲಿ ಅವರು ಬರೆದ ವಿಡಂಬನಾತ್ಮಕ ಬರಹಗಳ ಗುಚ್ಛ ತೆಪರೇಸಿ ರಿಟರ್ನ್ಸ್‌. ಇಲ್ಲಿನ ಬರಹಗಳು ವರ್ತಮಾನದ ವಿದ್ಯಮಾನಗಳಿಗೆ ಸ್ಪಂದನಾತ್ಮಕವಾಗಿ ರಚಿತವಾಗಿದ್ದರೂ ಕಾಲದ ಚೌಕಟ್ಟಿನ ಆಚೆಗೂ ಅವುಗಳು ಉಸಿರಾಡಬಲ್ಲವು. ಅಂತೆಯೇ ಆ ಬರಹಗಳ ಗುಚ್ಛ ಪುಸ್ತಕದ ರೂಪದಲ್ಲಿ ಈಗ ಓದುಗರ ಕೈಯಲ್ಲಿದೆ.

ಮಲ್ಲೇಶ್‌ ಅವರಿಗೆ ರಂಗಭೂಮಿ ಹಿನ್ನೆಲೆ ಇದೆ. ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವವೂ ಇದೆ. ವಿಡಂಬನಾತ್ಮಕ ಬರವಣಿಗೆ ಅವರಿಗೆ ಕರಗತವಾಗಲು ಈ ಎರಡೂ ಕೌಶಲಗಳು ನೆರವಿಗೆ ಬಂದಿವೆ. ತೀಕ್ಷ್ಣತೆ ಇಲ್ಲಿನ ಬರಹಗಳ ಪ್ರಧಾನ ಲಕ್ಷಣ. ತಮ್ಮ ಇರುವಿನ ಗುರುತು ಹಾಕುವ ಪಂಚ್‌ಗಳು ಮುಖದ ಮೇಲೆ ನಗೆಯ ಗೆರೆಗಳನ್ನು ಮೂಡಿಸುವಲ್ಲಿ ಸಫಲವಾಗುವ ಜತೆಗೆ ಚಿಂತನೆಗೂ ಹಚ್ಚುತ್ತವೆ.

ಒಮ್ಮೆ ಪತ್ರಕರ್ತ, ಮತ್ತೊಮ್ಮೆ ಪೊಲೀಸ್‌ ಪೇದೆ, ಮಗದೊಮ್ಮೆ ರಾಜಕಾರಣಿ ಮತ್ತು ಇನ್ನೊಮ್ಮೆ ಗುಜರಿ ವ್ಯಾಪಾರಿ, ಕೊನೆಗೆ ಪೆದ್ದ ಅಬ್ಬೇಪಾರಿ... ಹೀಗೆ ನಾನಾ ಅವತಾರ ಎತ್ತಿ ಬರುವ ತೆಪರೇಸಿ ಸಾಮಾನ್ಯ ಜನರ ಪ್ರತಿನಿಧಿ. ವ್ಯಂಗ್ಯ ವಿಡಂಬನೆಯಿಂದ ಎಂಥವರನ್ನೂ ನಗಿಸಬಲ್ಲ. ಆತನ ಸಾಹಸಗಳನ್ನು ಜನ ‘ಚುರುಮುರಿ’ಯಂತೆ ಸವಿಯಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT