ಬುಧವಾರ, ಮಾರ್ಚ್ 29, 2023
27 °C

ಪುಸ್ತಕ ವಿಮರ್ಶೆ | ಅಡಿಕೆ ಇತಿಹಾಸದ ಮೇಲೆ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಣಿಜ್ಯ ಬೆಳೆ ಅಡಿಕೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ ಏನು ಅನ್ನುವುದರ ಬಗ್ಗೆ ವಿಸ್ತಾರವಾಗಿ ಚರ್ಚಿಸಿದೆ ಈ ಕೃತಿ. ಇದು ಕೇವಲ ಆಕರ ಗ್ರಂಥಗಳ ಉಲ್ಲೇಖಿತ ಕೃತಿ ಅಲ್ಲ. ಬದಲಾಗಿ ಸ್ವತಃ ಅಡಿಕೆ ಬೆಳೆಗಾರರಾಗಿ, ವ್ಯಾಪಾರಿಯಾಗಿ, ಇದೇ ಕ್ಷೇತ್ರದ ಅಧ್ಯಯನ, ವಿಚಾರ ವಿನಿಮಯಕ್ಕಾಗಿ ಜಗತ್ತು ಸುತ್ತಿ ಬರೆದ ಅನುಭವದ ಬುತ್ತಿ. 

ಬೆಳೆಗಾರರ, ಪ್ರಮುಖ ರೈತರ, ಸಂಶೋಧಕರ ವಿಚಾರ ವಿನಿಮಯದ ಸಂಗತಿಗಳು ಇಲ್ಲಿವೆ. ಅಡಿಕೆಯ ಮೌಲ್ಯವರ್ಧನೆ ಬಗ್ಗೆ ಚರ್ಚೆ ಇದೆ. ಅಡಿಕೆ ಮಾರುಕಟ್ಟೆಯಲ್ಲಿ ಆಗಬೇಕಾದ ಪ್ರಗತಿ, ಆಮದು– ರಫ್ತು ನೀತಿಯಲ್ಲಾಗಬೇಕಾದ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು, ವಿವರಣೆ, ಸಲಹೆಗಳು ಇಲ್ಲಿವೆ. ಅಡಿಕೆ ಬೆಳೆ ಕುರಿತು ಪ್ರಮುಖ ಮಾರುಕಟ್ಟೆಗಳ ವರ್ಷವಾರು ದರಪಟ್ಟಿ, ರಾಜ್ಯದಲ್ಲಿರುವ ಅಡಿಕೆ ಬೆಳೆಯ ವಿಸ್ತೀರ್ಣವಾರು ವಿವರ, ಬೆಳೆಗೆ ತಗಲುವ ರೋಗಗಳ ಮಾಹಿತಿಗಳನ್ನು ಕೃತಿ ಹೊಂದಿದೆ.

ಲೇಖಕರೇ ಹೇಳಿಕೊಂಡಿರುವಂತೆ ಭಾರತದಲ್ಲಿ ಅಡಿಕೆ ಕೃಷಿಯ ಬಗ್ಗೆ ಬರೆದ ಮೊದಲ ಸಂಶೋಧನಾ ಪ್ರಬಂಧ ಇದಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್‌ ಸಿಕ್ಕಿದೆ. ಅಡಿಕೆ ಕೃಷಿ ಆಸಕ್ತರಿಗೆ ಅನುಕೂಲವಾಗಬಲ್ಲ ಕೃತಿ ಇದಾಗಿದೆ. ಕೃತಿಯ ಕೊನೆಯಲ್ಲಿ ಕೃಷಿ ಕ್ಷೇತ್ರದ ಕುರಿತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳು ಇಂದಿಗೂ ಪ್ರಸ್ತುತ.

***

ಕೃತಿ: ಕರ್ನಾಟಕದಲ್ಲಿ ಅಡಿಕೆ ಕೃಷಿ
ಲೇ: ಡಾ.ಕಡಿದಾಳ್‌ ಗೋಪಾಲ್‌
ಪ್ರ: ಸಹ್ಯಾದ್ರಿ ಪ್ರಕಾಶನ, ಶಿವಮೊಗ್ಗ
ಸಂ. 9845537070

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು