ಸುರಂಗದ ಕತ್ತಲೆ...

7

ಸುರಂಗದ ಕತ್ತಲೆ...

Published:
Updated:
Prajavani

ಪದ್ಮರಾಜ ದಂಡಾವತಿ ಅವರು ‘ಪ್ರಜಾವಾಣಿ’ಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ ‘ಸುರಂಗದ ಕತ್ತಲೆ...’ ಇದರಲ್ಲಿನ ಬರಹಗಳನ್ನು ಅವರು ಐದು ವಿಭಾಗಗಳಲ್ಲಿ ನೀಡಿದ್ದಾರೆ. ಸಮಾಜ, ಸಾಹಿತ್ಯ, ಸಂಸ್ಕೃತಿ, ಮಾಧ್ಯಮ, ರಾಜಕೀಯ, ಶಿಕ್ಷಣ... ಹೀಗೆ ದಂಡಾವತಿ ಅವರ ಬರಹಗಳ ಹರವು ದೊಡ್ಡದು. ಅವರ ಎಲ್ಲ ಬರಹಗಳ ಪ್ರಾತಿನಿಧಿಕ ರೂಪದಂತೆ ಇದೆ ಈ ಪುಸ್ತಕ.

ಪತ್ರಕರ್ತನಲ್ಲಿರುವ ಖಚಿತ ನಿಲುವು ಪುಸ್ತಕದ ಬರಹಗಳಲ್ಲಿ ಕಾಣುವ ಗುಣ. ಓದುಗನ ಮೇಲೆ ವಿಚಾರ ‘ಹೇರದ’, ವಿಷಯ ‘ಹೇಳುವ’ ವಿನ್ಯಾಸದಲ್ಲಿವೆ ಇಲ್ಲಿನ ಬರವಣಿಗೆಗಳು. ಇದನ್ನು ವಿಶೇಷವಾಗಿ, ರಾಜಕೀಯ ಸಂಸ್ಕೃತಿಯ ಆಸಕ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮಗಾಗೇ ಬರೆದ ಕೃತಿಯೆಂಬಂತೆ ಓದಿಕೊಳ್ಳಬಹುದು.

ಸುರಂಗದ ಕತ್ತಲೆ...

ಲೇ: ಡಾ. ಪದ್ಮರಾಜ ದಂಡಾವತಿ

ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಬೆಲೆ: ₹ 300

ಪುಟ: 368

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !