ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗೆ ‘ಡಾನ್ಸ್‌ ಥೆರಪಿ’ ಚಿಕಿತ್ಸೆ

Last Updated 13 ಜುಲೈ 2020, 6:51 IST
ಅಕ್ಷರ ಗಾತ್ರ

ವಿಶ್ವವನ್ನು ತಲ್ಲಣಗೊಳಿಸಿರುವ ಕೋವಿಡ್‌–19 ವೈರಾಣು ನಾಶಕ್ಕೆ ವಿಜ್ಞಾನಿಗಳು ಲಸಿಕೆಯ ಅಭಿವೃದ್ಧಿಯಲ್ಲಿ ತೊಡಗಿದ್ದರೆ, ಬೆಂಗಳೂರಿನ ಹನುಮಂತನಗರದ ಹಿರಿಯ ನೃತ್ಯ ಕಲಾವಿದ ಡಾ.ಎ.ವಿ.ಸತ್ಯನಾರಾಯಣ, ಕೊರೊನಾ ಸೋಂಕಿಗೆ ಡಾನ್ಸ್‌ ಮೂಲಕ ಚಿಕಿತ್ಸೆ ನೀಡುವ ಪ್ರಯತ್ನದಲ್ಲಿದ್ದಾರೆ.

ಡಾನ್ಸ್‌ ಥೆರಪಿಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಥೆರಪಿ ಅತ್ಯ ಪರಿಣಾಮಕಾರಿ ನೈಸರ್ಗಿಕ ಚಿಕಿತ್ಸೆ ಎನ್ನುತ್ತಾರೆ ಅವರು.

ಲಾಕ್‌ಡೌನ್‌ ಸಮಯದಲ್ಲಿ ಅವರು ಆನ್‌ಲೈನ್‌ನಲ್ಲಿ (ಸ್ಕೈಪ್‌) ದೇಶ, ವಿದೇಶಗಳ ಆಸಕ್ತರಿಗೆ ‘ಡಾನ್ಸ್‌ ಥೆರಪಿ’ ಕಲಿಸಿಕೊಡುತ್ತಿದ್ದಾರೆ. ಅದರೊಂದಿಗೆ ನೃತ್ಯಗಳ ಮೂಲಕ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.‌ ಭರತನಾಟ್ಯ ಮತ್ತು ಕಥಕ್ ಎರಡೂ ಪ್ರಕಾರಗಳಲ್ಲಿ ಪರಿಣತರಾಗಿರುವ ಸತ್ಯನಾರಾಯಣ ವಯಸ್ಸು 65 ದಾಟಿದರೂ ಈಗಲೂ ಯುವಕರನ್ನು ನಾಚಿಸುವಂತೆ ನೃತ್ಯ ಮಾಡುತ್ತಾರೆ.

‘ನೃತ್ಯ ಕೇವಲ ಮನೋರಂಜನೆಯ ಮಾಧ್ಯಮ ಅಲ್ಲ. ಅದೊಂದು ಸಂಕೀರ್ಣ ಚಿಕಿತ್ಸೆ ಕೂಡ. ಭಾರತೀಯ ನೃತ್ಯದಲ್ಲಿ ವೈಜ್ಞಾನಿಕ ಅಂಶಗಳೂ ಅಡಗಿವೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಾದ ರೋಗನಿರೋಧಕ ಶಕ್ತಿ ವೃದ್ಧಿಸಲು ನೃತ್ಯ ಸಹಕಾರಿ’ ಎನ್ನುವುದು ಅವರ ಅಭಿಪ್ರಾಯ.

ಸಂಕೀರ್ಣ ಚಿಕಿತ್ಸಾ ವಿಧಾನ

ಭಾರತೀಯ ನೃತ್ಯಗಳಲ್ಲಿ ರೇಖಾಶಾಸ್ತ್ರದ ವಿನ್ಯಾಸ ವರ್ಣ ವೈಭವ, ಶಿಲ್ಪಕಲೆಯ ರೂಪಲಾವಣ್ಯ, ನಟನ ಜೀವಾನುಕರಣ, ಸಂಗೀತದ ರಾಗ, ಲಯಗಳು ಸಮವಾಗಿ ಬೆರತು ಸಂಕೀರ್ಣ ಮತ್ತು ನೈಸರ್ಗಿಕ ಚಿಕಿತ್ಸಾ ವಿಧಾನ ಆಗಿದೆ.ಪಾದ ಮತ್ತು ಹಸ್ತಗಳ ಚಲನೆ, ದೇಹದ ಎಲ್ಲ ಅಂಗ ಹಾಗೂ ಅಂಗಾಂಗಳ ಚಲನವಲನಗಳಿಂದ ಇಡೀ ದೇಹಕ್ಕೆ ನೈಸರ್ಗಿಕವಾಗಿ ಚಿಕಿತ್ಸೆ ದೊರೆಯುತ್ತದೆ.

ಕುಣಿಯುವಾಗ ಭೂಮಿಯೊಂದಿಗೆ ಸಂಪರ್ಕ ಪಡೆಯುವ ಪಾದದ ನರಮಂಡಲ ಬಿಂದುಗಳು ರಿಚಾರ್ಜ್‌ ಆಗುತ್ತವೆ. ದೇಹದಲ್ಲಿ ನಕಾರಾತ್ಮಕ ಶಕ್ತಿ ಭೂಮಿಗೆ ಇಳಿದು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಡಿಯಿಂದ ಮುಡಿಯವರೆಗೆ ನರವ್ಯೂಹ ಚೇತೋಹಾರಿಗೊಳ್ಳುತ್ತದೆ. ದೇಹದ ಪ್ರತಿ ರಕ್ಷಣಾಶಕ್ತಿಯ ಕೋಟೆಯಂತೆ ಕೆಲಸ ಮಾಡುವ ಗ್ರಂಥಿಗಳು ಸಹಜವಾಗಿ ಸಕ್ರಿಯಗೊಳ್ಳುತ್ತವೆ. ಗ್ರಂಥಿಗಳು ಆರೋಗ್ಯವಾಗಿದ್ದರೆ ರೋಗನಿರೋಧಕ ಶಕ್ತಿ ತಾನಾಗಿಯೇ ಬೆಳೆಯುತ್ತದೆ. ಇವಷ್ಟು ಅವರು ದಶಕಗಳ ಅನುಭವದಿಂದ ಕಂಡುಕೊಂಡ ಸಂಗತಿಗಳು.

ಮೈ, ಮನಗಳಿಗೆ ಚಿಕಿತ್ಸೆ

ಭಾರತೀಯ ನೃತ್ಯ ಪ್ರಕಾರಗಳು ಮೈ ಮತ್ತು ಮನಸ್ಸುಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತವೆ. ಮಾನಸಿಕ ಒತ್ತಡ ನಿವಾರಣೆ ಜತೆಗೆ ದೇಹನ್ನು ಕಾಡುವ ಅನೇಕ ರೋಗಗಳನ್ನು ನಿಯಂತ್ರಿಸುತ್ತವೆ. ಮಧುಮೇಹ ನಿಯಂತ್ರಣಕ್ಕೆ ಮಯೂರ ನೃತ್ಯ ಇರುವಂತೆ ಸುಖಿ ಲೈಂಗಿಕ ಜೀವನ, ಗರ್ಭಿಣಿಯರ ಸುಲಭ ಪ್ರಸೂತಿಗೆ, ಮಾನಸಿಕ ಒತ್ತಡ ನಿವಾರಣೆ, ರೋಗನಿರೋಧಕ ಶಕ್ತಿ ವೃದ್ಧಿಗೆ ಬೇರೆ, ಬೇರೆ ನೃತ್ಯ ಚಿಕಿತ್ಸೆಗಳಿವೆ ಎನ್ನುತ್ತಾರೆ ಸತ್ಯನಾರಾಯಣ. ಡಾನ್ಸ್ ಥೆರಪಿ ಕುರಿತ ಮಾಹಿತಿಗಾಗಿ ಸಂಪರ್ಕ:98456 98089.

ಇ–ಮೇಲ್‌: dancetherapyindia@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT