ಕನ್ನಡ ಸಾರಸ್ವತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅನನ್ಯವಾದದ್ದು. ಮಹಿಪತಿದಾಸರು, ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಕೀರ್ತನೆಗಳ ಮೂಲಕ ನೀಡಿದ ಕೊಡುಗೆ ಅನುಪಮವಾದದ್ದು.

ದಾಸಸಾಹಿತ್ಯದ ಮೂಲ ಆಶಯ ಭಕ್ತಿ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯ ಮೆಟ್ಟಿಲನ್ನು ತೋರಿಸಿಕೊಟ್ಟವರು ಹರಿದಾಸರು. ಜನಸಾಮಾನ್ಯರಿಗೆ ತಿಳಿಹೇಳುವಲ್ಲಿ ರಚಿಸಿದ ಪದ್ಯಗಳಲ್ಲಿಯೂ ಅನೇಕ ಪ್ರಯೋಗಗಳೂ ನಡೆದಿವೆ. ಅವುಗಳಲ್ಲಿ ಮಿಶ್ರಭಾಷಾ ಪದ್ಯಗಳ ರಚನೆಯೂ ಒಂದು. ಒಂದೇ ಪದ್ಯದಲ್ಲಿ ಬೇರೆ ಬೇರೆ ಭಾಷೆಯ ಪದಗಳನ್ನು ಬಳಸಿ ರಚಿಸಿದ ಕ್ರಮ ಗಮನ ಸೆಳೆಯುತ್ತದೆ. ಶ್ರೀಮಹಿಪತಿದಾಸರ ಒಂದು ಕೀರ್ತನೆಯ ಕೆಲವು ಸಾಲುಗಳನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದು:

ಸಮಜ್ಯೊ ಯಾರಾ ಅಪನೊ ಮೆ ತರಿಕತ ಹಕೀಕತ |
ಭಿಸ್ತ ಕೆ ದರವಾಜಾ ಹೈ ಯೊ ಶರಿಯೆತ ಮಾರುತ |

ತಿಳಿದರ ಕಳವದು ಅಂಧತ್ವ ಬಧಿರತ್ವ |

ತೊಳದು ಕಳವದು ಮೂಕತ್ವ ಪಿಶಾಚತ್ವ |

ಶರಣ ರಿಘಾ ಗುರು ಜ್ಞಾನ ಉಪದೇಶಿಲ ಪ್ರಕಾಶಿಲ |

ಸದ್ಗುರು ಕೃಪೆಯಿಂದ ಪಾಹತಾ ಸರ್ವಮಯ ದಿಸೆಲ ಭಾಸೆಲ |
ಈ ಪದ್ಯದಲ್ಲಿ ಕನ್ನಡ, ಮರಾಠಿ ಮತ್ತು ಹಿಂದಿ ಪದಗಳು ಬಳಕೆಯಾಗಿವೆ.

ಇನ್ನೊಂದು ಕೀರ್ತನೆಯ ಕೆಲವು ಸಾಲುಗಳು:

ಸೀಧಾ ನುಡಿಯೊ ಸಾಕ್ಷಾತ್ಕಾರವಾ |

ಸಾಧು ಕಾ ದಸ್ತ ಪಂಜ್ಯಾ ಲೇಣಾ, ಸಾಧು ಕೆ ಸಂಗ ಕರಣಾ |

ಸಾಧ್ಯವಾಹುದು ಸದ್ಗುರೂ ಕರುಣಾ, ನಿರ್ಧಾರ ಹೇ ಜಾಣಾ |

ಬಾಹಂ ಯಾತ್ರಿ ಜೋ ಪಾಹೇ ಗೋವಿಂದಾ ಇಹಪರ ಆವಾಗಾನಂದಾ |
ದೇಹಶ್ರಾಂತಿಗೆ ಸಿಲುಕದೆ ನಿಂದಾ, ವಹಿ ಖುದಾ ಕಾ ಬಂದಾ |

ಐದು ನುಡಿಗಳ ಪದ್ಯವಿದು. ಪಲ್ಲವಿಯ ಸಾಲು ಕನ್ನಡದಲ್ಲಿದೆ. ಅನಂತರದ ನುಡಿಗಳ ಸಾಲುಗಳಲ್ಲಿ ದಖನಿ ಹಿಂದಿ, ಉರ್ದು, ಮರಾಠಿ ಮತ್ತು ಕನ್ನಡದ ಪದಗಳಿವೆ.

ವಿವಿಧ ಭಾಷಾ ಪದಗಳ ಪ್ರಯೋಗದಿಂದಾಗಿ ಈ ರಚನೆಗಳು ಗಮನ ಸೆಳೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.