ಮಂಗಳವಾರ, ಅಕ್ಟೋಬರ್ 27, 2020
28 °C

ಕವಿತೆ: ಹೇಗೆ ಕರೆತರಲಿ...

ರಜಿಯಾ ಡಿ.ಬಿ. Updated:

ಅಕ್ಷರ ಗಾತ್ರ : | |

Prajavani

ಮತ್ತೆ ಹೇಗೆ ನಾ
ನಿಮ್ಮನ್ನು ಹುಡುಕಲಿ
ಹೇಗೆ ಕರೆತರಲಿ
ಗಾಡಂಧಕಾರವೇ....
ಲೋಕ ವ್ಯಾಪಿಸಿ
ಮೌಲ್ಯಗಳು ಕಾಣದಂತೆ;

ವ್ಯೂಹಗಳ ಜಾಲ
ಸತ್ಯ ನಿಷ್ಠೆಯ
ತಕ್ಕಡಿ
ಮೇಲೆಕೆಳಗೆ ತಿರುಗಿಸುವ

ಮೂಢರ ಕೈಚಳಕವೇ
ಮುಖ್ಯವಾಗಿ ನಿಮ್ಮ
‘ಚರಕದ ತಿರುಗು ಗಾಣದೆ’
ಆ ಸಿದ್ಧಾಂತ ತತ್ವಗಳು
ತೂರಿ ಹಾರಿಸಿ
ಅಟ್ಟಹಾಸಗೈಯುವ
ಅರಾಜಕತೆಯ ತಾಂಡವ
ವಿಜೃಂಭಿಸುವಾಗ

ಅಭಯದ ನೆರಳಿಂದ ನಿಮ್ಮ
ಎಲ್ಲಿ ಹುಡುಕಲಿ ಹೇಗೆ ಕರೆತರಲಿ
ಕರಕಾಗುವ ಅಹಿಂಸೆ
ನಾನಾ ರೂಪಗಳ ಕೂಪವಾಗಿ
ಹೆಣ್ತನವ ಕುಕ್ಕಿಕುಕ್ಕಿ ಕೊಲ್ಲುವ ಕಮಟು

ಧಗೆಯ ದಟ್ಟವಾಗಿ
ಶಾಂತಿಯ ಸಮನ್ವಯದ
ಸಹಬಾಳ್ವೆಗೆ
‘ಅಭಯವೆ’
ಎಲ್ಲಿ ಹುಡುಕಲಿ
ಹೇಗೆ ಕರೆತರಲಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.