ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಧ್ಯಾನವೆಂದರೆ ಹೀಗೆ

Last Updated 31 ಜನವರಿ 2021, 1:29 IST
ಅಕ್ಷರ ಗಾತ್ರ

ಹಕ್ಕಿ ಗೂಡಿನೊಳಗಿಣುಕಿ
ತನ್ನ ಮರಿಗಳನ್ನು ನೋಡುವಂತೆ
ಅರೆನಿಮೀಲಿತ ಕಣ್ಣುಗಳು
ಒಳಮುಖವಾಗಿ ನಖಶಿಖಾಂತ
ತದೇಕ ದಿಟ್ಟಿಸುತ್ತಿರಬೇಕು

ಆನೆಯಂತೆ ಕಿವಿಗಳನ್ನು
ಒಳಗೆಳೆದುಕೊಂಡು
ಒಡಲಮುಖ ಮಾಡಿ
ನಾಡಿಬಡಿತವನ್ನು ಕೇಳಿಸಿಕೊಳ್ಳುತ್ತಿರಬೇಕು

ಮೂಗು ಅರಳುವ ಹೂವಿನಂತೆ
ಹೊರಳೆ ಅರಳಿಸಿ
ಬರುವ ಹೋಗುವ
ಉಸಿರ ಸಂಚಾರದ ಲೆಕ್ಕ ಇಡಬೇಕು

ತುಟಿಗಳು
ಕಮಲದಂತೆ ಬಿರಿದು
ಮುಗುಳುನಗುವಿನ
ಬುದ್ಧಕಳೆಯನ್ನು ಚೆಲ್ಲಬೇಕು

ಮೋಡದ ರಭಸಕ್ಕೆ
ಬೆಟ್ಟದ ನವಿಲು ಗರಿಗೆದರಿ ನರ್ತಿಸುವಂತೆ
ಚರ್ಮವು ಸ್ಪರ್ಶಾತೀತವಾಗಿ
ರೋಮಾಂಚನಗೊಳ್ಳಬೇಕು

ಮನಸ್ಸು ಜಲತರಂಗಗಳ
ನಿಃಶಬ್ದವನ್ನು ಸವಿಯುತ್ತಾ
ಚಿತ್ತವಿಹೀನ ಸ್ಥಿತಿಯಲ್ಲಿ
ತಂಗಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT