ಭಾನುವಾರ, ಸೆಪ್ಟೆಂಬರ್ 27, 2020
21 °C

ಇರುವೆ, ಬಾ ಇರುವೆ

ಬಸವನಗೌಡ ಹೆಬ್ಬಳಗೆರೆ Updated:

ಅಕ್ಷರ ಗಾತ್ರ : | |

ಇರುವೆ ಇರುವೆ ಬಾ ಇರುವೆ
ಎಲ್ಲಿ ನೀನು ಅಡಗಿರುವೆ
ಸರತಿ ಸಾಲಲಿ ಚಲಿಸುವ ನಿನ್ನಯ
ಶಿಸ್ತಿನ ಜೀವನ ಕಲಿಸು ಇರುವೆ

ಸಕ್ಕರೆ ತುಂಡು ಎಲ್ಲೇ ಬಿದ್ದರೂ
ಅಲ್ಲಿಗೆ ನೀನು ಓಡಿ ಬರುವೆ
ಯಾರು ನಿನಗೆ ಮಾಹಿತಿ ಕೊಡುವರು
ಇದಕೆ ನಾ ಬೆರಗಾಗಿರುವೆ…!

ತೂಕಕೂ ಹೆಚ್ಚು ಭಾರ ಹೊರುವೆ
ಗೂಡಲಿ ಆಹಾರ ಶೇಖರಿಸಿಡುವೆ
ನಿನ್ನಯ ಶಕ್ತಿಯ ಗುಟ್ಟನು ತಿಳಿಯುವ
ಕಾತುರ ಬಾ ಬಾ ಓ ಇರುವೆ

ಗುಂಪಲಿ ನೀನು ಬದುಕಿರುವೆ
ಒಗ್ಗಟ್ಟಿನ ಬಲವ ತೋರಿರುವೆ
ಜಾತಿ ಭೇದದಿ ಬಡಿದಾಡುತಿರುವ
ಮನುಜಗೆ ಬುದ್ಧಿ ಹೇಳು ಇರುವೆ...!

ನಿನ್ನಯ ಪಾಡಿಗೆ ನಿನ್ನನು ಬಿಟ್ಟರೆ
ಯಾರಿಗೂ ತೊಂದರೆ ಕೊಡದಿರುವೆ
ನಿನ್ನನು ತುಳಿದು ನೋವನು ಕೊಟ್ಟರೆ
ಕಚ್ಚಿ ಮರಳಿ ಉತ್ತರ ಕೊಡುವೆ...!

ಆ ಮನೆ ಈ ಮನೆ ಭೇದವು ಇಲ್ಲ
ಎಲ್ಲರ ಮನೆಯಲೂ ನೀನಿರುವೆ
ಭೇದ ಭಾವವ ಮಾಡುವ ಮನುಜಗೆ
ನಿನ್ನಯ ಗುಣವ ಕಲಿಸು ಇರುವೆ…!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.