ಬುಧವಾರ, ಏಪ್ರಿಲ್ 21, 2021
25 °C

ಭೂಮಿಗೆ ಹೂಗಳ ತಂದವರಾರು

ಸೋಮಲಿಂಗ ಬೇಡರ ಆಳೂರ Updated:

ಅಕ್ಷರ ಗಾತ್ರ : | |

Prajavani

ಸೃಷ್ಟಿಗೆ ಅಂದವ ತುಂಬುವ ಹೂಗಳೆ

ನಿಮ್ಮನು ಭೂಮಿಗೆ ತಂದವರಾರು

ದೃಷ್ಟಿಗೆ ಮೆರುಗನು ನೀಡುವ ಹೂಗಳೆ

ನಿಮ್ಮೊಳು ಮೊದಲಿಗೆ ಬಂದವರಾರು

 

ತರತರ ಬಣ್ಣದಿ ಮೆರೆಯುವ ಹೂಗಳೆ

ನಿಮಗೆ ಬಣ್ಣವ ಕೊಟ್ಟವರಾರು

ನಾನಾ ಹೆಸರನು ಹೊಂದಿದ ಹೂಗಳೆ

ನಿಮಗೆ ಹೆಸರನು ಇಟ್ಟವರಾರು

 

ಘಮಘಮ ಪರಿಮಳ ಬೀರುವ ಹೂಗಳೆ

ನಿಮಗೆ ಗಂಧವ ಸುರಿದವರಾರು

ಫಳಫಳ ಹೊಳೆಯುವ ಸುಂದರ ಹೂಗಳೆ

ನಿಮಗೆ ಅರಳಲು ತಿಳಿಸಿದರಾರು

 

ದೇವರ ಪೂಜೆಗೆ ಸಲ್ಲುವ ಹೂಗಳೆ

ನಿಮ್ಮಯ ವಿಸ್ಮಯ ತಿಳಿದವರಾರು

ಸಕಲರ ಮನವನು ಸೆಳೆಯುವ ಹೂಗಳೆ

ನಿಮ್ಮಯ ನಗುವಿಗೆ ಕಾರಣರಾರು

 

ಎಲ್ಲಾ ಕಾಲದಿ ದೊರೆಯುವ ಹೂಗಳೆ

ನಿಮ್ಮಯ ಕಷ್ಟಕೆ ಆಗುವರಾರು

ಕಾಣದೆ ಹೋದರೆ ಜಗದಲಿ ಹೂಗಳೆ

ನಿಮ್ಮಯ ಸ್ಥಾನವ ತುಂಬುವರಾರು!?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.