ಬುಧವಾರ, ಜುಲೈ 6, 2022
23 °C

ಕವಿತೆ: ಅರಿಬಿ, ಅಕ್ಷರ ಮತ್ತು ಅರಿವು

ಶರೀಫ್ ಹಸಮಕಲ್ Updated:

ಅಕ್ಷರ ಗಾತ್ರ : | |

Prajavani

ಸಹೋದರ
ಯಾತಕ್ಕಾಗಿ ಈ ದ್ವೇಷ
ನಿನ್ನ ಹೆಗಲ ಮೇಲಿರುವ
ಕೇಸರಿ ಶಾಲನ್ನು ನನಗೆ ನೀಡು
ಅದನ್ನೆ ಹಿಜಾಬ್ ಆಗಿ ಕಟ್ಟಿಕೊಳ್ಳುವೆ

ನಾನು ಅಕ್ಷರಸ್ಥಳಾಗುವುದು
ನಿನಗೆ ಇಷ್ಟವಿಲ್ಲವೆ
ನಿನ್ನಿಂದಾಗಿ ನಾನು
ಅನಕ್ಷರಸ್ಥಳಾಗಬೇಕೆ
ನನ್ನ ಅಣ್ಣ ಅಪ್ಪನಿಗೆ
ಮುಖಕ್ಕೆ ಮುಖಕೊಟ್ಟು ಮಾತಾಡದ ನಾನು
ಕತ್ತಲೆಯ ಕೋಣಿಯಲ್ಲಿದ್ದೇನೆ
ಹೊಸ್ತಿಲು ದಾಟದ ನಾನು
ಈಗೀಗ
ಈ ಹಿಜಾಬ್ ಕಟ್ಟಿಕೊಂಡಾದರೂ
ಅಕ್ಷರ ಮತ್ತು ಅರಿವಿಗಾಗಿ
ನಿನ್ ಪಕ್ಕದಲ್ಲಿ ಕುಳಿತಿರುವೆ
ಇದಕ್ಕೂ ಕಲ್ಲಾಕಬೇಡ

ಅಂಗಳದ ಮಾತು ಬೇರೆ
ಎದೆಯಂಗಳದ ಮಾತು ಬೇರೆ
ಯೋಚಿಸಿ ನೋಡು

ತಾಳ್ಮೆ ಇರಲಿ
ನಿನ್ನಾಸೆಯಂತೆ ಈ ಹಿಜಾಬ್
ತೆಗೆದು ಬರುವ ಕಾಲವೊಂದು ಬರಲಿದೆ
ಅಲ್ಲಿಯವರೆಗೂ
ಈ ಸಹೋದರಿಗೆ ನೆರಳಾಗಿರು
ಅಕ್ಷರ ಕಲಿಕೆಗೆ ಉರುಳಾಗಬೇಡ
ಮತ್ತೊಮ್ಮೆ ಹೇಳುವೆ
ಅಂಗಳದ ಮಾತು ಬೇರೆ
ಎದೆಯಂಗಳದ ಮಾತು ಬೇರೆ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು