ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಟರ್‌ ಬ್ಲಾಸ್ಟರ್‌ ಎನ್ನುವ ಮಿನಿ ಜಿಮ್‌

Last Updated 30 ಡಿಸೆಂಬರ್ 2018, 19:32 IST
ಅಕ್ಷರ ಗಾತ್ರ

ಮಾಸ್ಟರ್‌ ಬ್ಲಾಸ್ಟರ್‌ ಸಾಧನ ಹಲವು ಸಾಧನಗಳನ್ನು ಒಗೊಂಡಿರುವ ಗುಚ್ಛ. ಇದನ್ನು ಮಿನಿ ಜಿಮ್‌ ಎಂದು ಸಹ ಕರೆಯಲಾಗುತ್ತದೆ. ಈ ಸಾಧನದಲ್ಲಿ 22ಕ್ಕೂ ಹೆಚ್ಚು ರೀತಿಯ ವ್ಯಾಯಾಮಗಳನ್ನು ಮಾಡಬಹುದಾಗಿದೆ.ದೇಹದ ಎಲ್ಲ ಅಂಗಾಂಗಗಳಿಗೆ ಸಂಪೂರ್ಣ ವ್ಯಾಯಾಮ ನೀಡುವ ಸಾಧನ ಇದಾಗಿದೆ.

ಯಾವೆಲ್ಲ ಸಾಧನವಿದೆ: ಈ ಸಾಧನದಲ್ಲಿ ಸೈಕಲ್‌ ಪೆಡಲ್‌, ರಿಸೆಸ್ಟೆಂಟ್‌ ಬ್ಯಾಂಡ್‌, ಡಂಬಲ್ಸ್‌ ಮತ್ತು ಪುಷ್‌ಅಪ್‌ ಹ್ಯಾಂಡಲ್‌ ಸಾಧನಗಳು ಜೋಡಣೆಯಾಗಿದೆ. ನಿಮ್ಮ ದೇಹದ ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ ಇದನ್ನು ಸರಿಹೊಂದಿಸಿಕೊಳ್ಳಬಹುದಾಗಿದೆ.

ಯಾವೆಲ್ಲ ವ್ಯಾಯಾಮಗಳನ್ನು ಮಾಡಬಹುದು: ಈ ಸಾಧನದಲ್ಲಿ ಪೆಡಲಿಂಗ್‌, ಡಂಬಲ್ಸ್‌ ಎತ್ತುವುದು, ಪುಷ್‌ಅಪ್‌ ಸೇರಿದಂತೆ ಹಲವು ವ್ಯಾಯಾಮಗಳನ್ನು ಮಾಡಬಹುದು. ಈ ಸಾಧನದಲ್ಲಿ ಸಣ್ಣ ಕುರ್ಚಿಯೂ ಇರಲಿದ್ದು ಅದರ ಮೇಲೆ ಕುಳಿತುಕೊಂಡು ಈ ಸಾಧನದಲ್ಲಿರುವ ಡಂಬಲ್ಸ್‌ ಅನ್ನು ಕಾಲು ಮತ್ತು ಕೈಗಳಿಂದ ಎತ್ತಬಹುದು. ಹಾಗೆಯೇ ಈ ಸಾಧನದಲ್ಲಿ ದಿಂಬಿನಂತಿರುವ ಭಾಗದ ಮೇಲೆ ಒರಗಿಕೊಂಡು ಕೈಗಳನ್ನು ಎದೆಯ ಮೇಲೆ ವಿರುದ್ಧ ದಿಕ್ಕಿನಲ್ಲಿಟ್ಟುಕೊಂಡು ಹಿಂದಕ್ಕೆ ಬಗ್ಗಿ, ಮುಂದಕ್ಕೆ ಎದ್ದೇಳುವ ಮೂಲಕವೂ ವ್ಯಾಯಾಮ ಮಾಡಬಹುದು. ಕೈಬೆರಳುಗಳನ್ನು ತಲೆಯ ಹಿಂಬದಿಗೆ ಇಟ್ಟುಕೊಂಡು (ಕಾರು ಕುರ್ಚಿಯಲ್ಲಿ ಹಿಂದಕ್ಕೆ ವಾಲಿಕೊಂಡಂತೆ) ಹಿಂದಕ್ಕೆ ಮತ್ತು ಮುಂದಕ್ಕೆ ಎಳುವುದರ ಮೂಲಕವೂ ವ್ಯಾಯಾಮ ಮಾಡಬಹುದು. ಇದರಿಂದ ಬೆನ್ನಿನ ಭಾಗಕ್ಕೆ ಅರಾಮು ಸಿಗಲಿದೆ.

ಬಾರಿ ತೂಕವನ್ನು ಎತ್ತಿ ವ್ಯಾಯಾಮ ಮಾಡಲು ಸಾಧ್ಯವಾಗದಿರುವರಿಗೆ ಹಾಗೂ ಮಹಿಳೆಯರು ತಮಗೆ ಅನುಕೂಲವಾಗುವ ರೀತಿಯಲ್ಲಿ ವ್ಯಾಯಾಮ ಮಾಡುವುದಕ್ಕೆ ಈ ಸಾಧನವನ್ನು ಅಡ್ಜಸ್ಟ್‌ ಮಾಡಿಕೊಳ್ಳಬಹುದು. ಪುಷ್‌ಅಪ್‌ ಮಾಡುವಾಗ ನಿಂತು ಏಕಮುಖವಾಗಿ ಪುಷ್‌ಅಪ್‌ ಮಾಡಲು ಸಾಧ್ಯವಾಗದೆ ಇದ್ದರೆ ಮಂಡಿಯೂರಿಯೂ ಈ ಸಾಧನದ ಕೈ ಹಿಡಿಕೆಯ ಮೂಲಕ ಪುಷ್‌ಅಪ್‌ ಮಾಡಬಹುದು.

ಈ ಸಾಧನದ ಹಿಂಬದಿಯಲ್ಲಿರುವ ರಿಸಿಸ್ಟೆಂಟ್‌ ಬ್ಯಾಂಡ್‌ನ ಹಿಡಿಕೆಯಿಂದ ಮುಂದಕ್ಕೆ ಮತ್ತು ಹಿಂದಕ್ಕೆ ಕುಳಿತುಕೊಂಡು, ನಿಂತುಕೊಂಡು ವ್ಯಾಯಾಮ ಮಾಡಬಹುದಾಗಿದೆ. ಸೈಕಲ್‌ನಲ್ಲಿ ಪೆಡಲಿಂಗ್‌ ಇರುವುದರಿಂದ ಪೆಡಲಿಂಗ್‌ ಸಹ ಮಾಡಬಹುದಾಗಿದೆ. ಕುರ್ಚಿಯಲ್ಲಿ ಕುಳಿತು ಕಾಲುಗಳನ್ನು ಎಡಕ್ಕೆ ಮತ್ತು ಬಲಕ್ಕೆ ತಿರುಗಿಸಿ ವ್ಯಾಯಾಮಕ್ಕೆ ಬಳಸಬಹುದು.

ಸದೃಢ ದೇಹಕ್ಕೆ ಬೆಸ್ಟ್‌: ಈ ಸಾಧನವನ್ನು ಬಳಸಿ ವ್ಯಾಯಾಮ ಮಾಡುವುದರಿಂದ ದೇಹದ ಹಲವು ಅಂಗಾಂಗಗಳಿಗೆ ಅರಾಮು ಸಿಗಲಿದೆ. ಕಚೇರಿಯಲ್ಲಿ ಕುಳಿತುಕೊಂಡು ಕೆಲಸ ಮಾಡುವವರು, ಬೆನ್ನು, ಕಾಲಿನ ಮಾಂಸಖಂಡಗಳಲ್ಲಿ ನೋವಿರುವವರಿಗೆ ಈ ಸಾಧನ ಹೆಚ್ಚು ಸಹಾಯವಾಗಲಿದೆ. ಹಾಗೆಯೇ ತೋಳು ಭುಜ ಸದೃಢತೆಗೂ ಇದು ಸಹಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT