ಸುಳ್ಯ: ದೈಹಿಕವಾಗಿ ಎರಡೂ ಕಾಲು ಗಳಿಗೆ ಬಲವಿಲ್ಲದಿದ್ದರೂ ದುಡಿದು ಉಣ್ಣ ಬೇಕು ಎಂಬ ಛಲ ಹೊತ್ತ ಯುವಕ ನೊಬ್ಬ ಸರ್ವೀಸ್ ಸ್ಟೇಶನ್ ಆರಂಭಿಸಿ ಸ್ವಂತ ಉದ್ಯೋಗ ಕೈಗೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಅಂಗವಿಕಲರು ಸಾಮಾನ್ಯವಾಗಿ ಇತರರನ್ನೇ ಅವಲಂಬಿಸಿ ಜೀವನ ನಡೆಸು ತ್ತಿರುವ ಘಟನೆಗಳ ಮಧ್ಯೆ ಸುಳ್ಯದ ಗುರುಂಪು ನಿವಾಸಿ ಖಲಂದರ್ ಶಾಫಿ ಎಂಬವರು ಮೂರು ವರ್ಷಗಳ ಹಿಂದೆ ಮನೆ ಪಕ್ಕ ಶಾಫಿ ಸರ್ವೀಸ್ ಸ್ಟೇಶನ್ ಆರಂಭಿಸಿದ್ದು, ಯಶಸ್ವಿಯಾಗಿ ನಡೆಸಿ ಕೊಂಡು ಹೋಗುತ್ತಿದ್ದಾರೆ.

ಮೂರು ತಿಂಗಳ ಮಗು ಇರುವಾಗಲೇ ಜ್ವರ ಪೀಡಿತ ರಾಗಿ ಪೋಲಿಯೋ ಬಡಿದು ತನ್ನ ಎರ ಡೂ ಕಾಲುಗಳ ಸ್ವಾಧೀನವನ್ನೇ ಕಳೆದು ಕೊಂಡಿರುವ ಶಾಫಿ ಅವರ ಹಂಬಲಕ್ಕೆ ಬೆಂಬಲವಾಗಿ ನಿಂತವರು ಅವರ ಮನೆಯವರು.

ಉಜಿರೆಯ ರುಡ್ಸೆಟ್ ಸಂಸ್ಥೆಯ ವರು ನಡೆಸುವ 10 ದಿನಗಳ ಉದ್ಯಮ ಶೀಲತಾ ತರಬೇತಿಗೆ ಹಾಜರಾಗಿ ತಾನೂ ಉದ್ಯಮಿಯಾಗಬೇಕು ಎಂಬ ಕನಸಿಗೆ ನಾಲ್ಕು ಲಕ್ಷ ರೂಪಾಯಿ ಸಾಲ ನೀಡಿದ ವರು ಸುಳ್ಯದ ವಿಜಯಾ ಬ್ಯಾಂಕಿನವರು. ಒಬ್ಬ ಸಹಾಯಕರನ್ನು ಇಟ್ಟುಕೊಂಡು ಒಂದು ರ್್ಯಾಂಪ್ನ ಸಣ್ಣ ಸರ್ವೀಸ್ ಸ್ಟೇಶನ್ ಆರಂಭಿಸಿರುವ 28ರ ಹರೆಯದ ಶಾಫಿ ಈಗ ಗ್ಯಾರೇಜು ಮಾಲಕರ ಸಂಘದ ಸದಸ್ಯರೂ ಆಗಿದ್ದಾರೆ.

ಒಂದೇ ರ್್ಯಾಂಪ್ ಅಳವಡಿಸಿ ದ್ದರಿಂದ ಘನ ವಾಹನಗಳ ಸರ್ವೀಸ್ ಮಾಡಲು ಸಾಧ್ಯವಾಗುತ್ತಿಲ್ಲ. ಆಲೆಟ್ಟಿ ರಸ್ತೆ ಬದಿ ಗುರುಂಪು ಎಂಬಲ್ಲಿ ಸ್ವಂತ ಜಮೀ ನು ಹೊಂದಿರುವ ಅವರು ಮನೆ ಪಕ್ಕವೇ ಸರ್ವೀಸ್ ಸ್ಟೇಶನ್ ನಡೆಸುತ್ತಿದ್ದಾರೆ. ಸ್ವಂತ ಕೆರೆಯಿಂದ ಪಂಪ್ ಮೂಲಕ ಟ್ಯಾಂಕಿಗೆ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕೈಕೊಟ್ಟಾಗ ಜನರೇಟರ್ ಕೂಡಾ ಅಳವಡಿಸಿದ್ದಾರೆ. ಹಾಗಾಗಿ ಸರ್ವೀಸ್ಗೆ ಬಂದ ವಾಹನಗಳು ಕಾಯು ವ ಪ್ರಮೇಯ ಇಲ್ಲ.

ದಿವ್ಯ ಎಂಬ ಸಹಾ ಯಕರಿಗೆ ಅವರು ಉದ್ಯೋಗವನ್ನೂ ನೀಡಿದ್ದಾರೆ. ಉದ್ಯಮ ಆರಂಭಿಸಲು ಮಾರ್ಗದರ್ಶನ ನೀಡಿದ ಉಜಿರೆಯ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಕೇಂದ್ರವನ್ನು ಅವರು ಸದಾ ಸ್ಮರಿಸುತ್ತಾರೆ.

ಕೆ.ಎಚ್.ಅಹಮ್ಮದ್, ಸಫಿಯಾ ದಂಪತಿಯ ಮೂರು ಗಂಡು ಮಕ್ಕಳಲ್ಲಿ ಹಿರಿಯವರು ಖಲಂದರ್ ಶಾಫಿ. ಎರ ಡನೆಯವರು ಶಹೀದ್ ಸಾಮಾಜಿಕ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಕೊನೆಯವರು ಸಿಯಾದ್ ಕಾಲೇಜು ಓದುತ್ತಿದ್ದಾರೆ. ತಮ್ಮಂದಿರು ಶಾಲೆಗೆ ಹೋಗಿ ಓದುತ್ತಿದ್ದಾಗ ತನಗೂ ಓದುವ ಬಯಕೆ. ಆದರೆ ನಡೆಯಲು ಸಾಧ್ಯವಿಲ್ಲದೆ ಮನೆಯಲ್ಲಿಯೇ ಓದಿದವರು ಖಲಂ ದರ್. ತಮ್ಮಂದಿರ ಪುಸ್ತಕ ಓದಿ ಕನ್ನಡ, ಇಂಗ್ಲಿಷ್ ಕಲಿತವರು.

ಅವರಿಗೆ ಸ್ವತಃ ಅವರೇ ಗುರು. ತಮ್ಮ ಉದ್ಯಮಕ್ಕೆ ಸಂಬ ಂಧಿಸಿದ ದಾಖಲೆ ಪತ್ರಗಳನ್ನು ಸ್ವತಃ ಓದಿ ಯೇ ಸಹಿ ಮಾಡುತ್ತಾರೆ. 6 ತಿಂಗಳ ಹಿಂದೆ ಸ್ಕೂಟರ್ ಒಂದನ್ನು ಖರೀದಿಸಿ ಅದನ್ನು ಬೇಕಾದಂತೆ ಪರಿವರ್ತನೆ ಮಾಡಿಸಿದ್ದಾರೆ.

ವ್ಯವಹಾರಕ್ಕೆ ಸಂಬಂಧಿಸಿ ಎಲ್ಲಿಗೆ ಬೇಕಾದರೂ ಅದರಲ್ಲೇ ಓಡಾಡು ತ್ತಾರೆ. ಹಾಗಾಗಿ ಅವರೀಗ ಎಲ್ಲಾ ವಿಷ ಯದಲ್ಲೂ ಸ್ವಾವಲಂಬಿ. ಮೃದು ಸ್ವಭಾ ವದ ಖಲಂದರ್ ಶಾಫಿ ಎಲ್ಲರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.

ಅಂಗವಿಕಲರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಕೆಲವಕ್ಕೆ ಅರ್ಜಿ ಹಾಕಿದ್ದರೂ ಆದಾಯ ಅಧಿಕ ಎಂಬ ಕಾರಣಕ್ಕೆ ಇವರಿಗೆ ಸಿಕ್ಕಿಲ್ಲ. ಈ ಕಾರಣಕ್ಕೆ ಖಲಂದರ್ ಅವರಿಗೆ ಯಾವುದೇ ಬೇಸರವಿಲ್ಲ. ವಿಕಲಚೇತನರ ವೇತನವೂ ಅವರಿಗೆ ಸಿಕ್ಕಿಲ್ಲ. ಬ್ಯಾಂಕಿನ ಸಾಲದ ಕಂತುಗಳನ್ನು ಸರಿಯಾಗಿ ಪಾವ ತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉದ್ಯಮವನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಬಯಕೆಯನ್ನು ಅವರು ವ್ಯಕ್ತಪ ಡಿಸುತ್ತಾರೆ. ಕೆ.ಎಚ್.ಅಹಮ್ಮದ್ ಸಫಿ ಯಾ ದಂಪತಿಯದು ಕೃಷಿ ಕುಟುಂಬ. ಕೃಷಿಯನ್ನೇ ಅವಲಂಬಿಸಿ ಅವರ ಜೀವನ. ದುಡಿದು ಉಣ್ಣುವ ಮಗನ ಛಲದ ಬಗ್ಗೆ ಅವರಿಗೆ ತುಂಬು ಅಭಿಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.