ದಿನ ಭವಿಷ್ಯ: ಮಾತಿನಿಂದಾಗಿ ಮನೆಯಲ್ಲಿ ಯುದ್ಧದ ವಾತಾವರಣ ನಿರ್ಮಾಣ ಮಾಡಿಕೊಳ್ಳದಿರಿ
Published 15 ನವೆಂಬರ್ 2025, 22:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಲಧಿಕಾರಿಗಳು ಹಾಗೂ ಹಿರಿಯರು ನಿಮ್ಮ ಕೆಲಸಗಳಲ್ಲಿ ಸಹಕಾರ ನೀಡುತ್ತಾರೆ. ನಿಮ್ಮ ಉತ್ತಮ ಧ್ಯೇಯೋದ್ಧೇಶಕ್ಕಾಗಿ ಇಂದಿನಿಂದ ಹೆಚ್ಚಿನ ಶ್ರಮ ಪಡುವಿರಿ. ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡು ಬರುವುದು.
ವೃಷಭ
ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆಯಿದ್ದು, ಹೆಚ್ಚಿನ ಗಮನವಿರಲಿ. ಕುಟುಂಬಸ್ಥರ ನಿಧನದಿಂದ ದುಃಖವಾಗುತ್ತದೆ. ವಿದ್ಯಾಭ್ಯಾಸದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಹೊಂದುತ್ತೀರಿ.
ಮಿಥುನ
ಫಲಾಫಲಗಳನ್ನು ಅರಿತು ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದರೆ ಕಹಿ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ. ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿ ದೊರೆಯುವ ಮಾರ್ಗ ಸಿಗಲಿದೆ.
ಕರ್ಕಾಟಕ
ಬಾಲ್ಯದಲ್ಲಿ ಕಲಿತ ಅಥವಾ ತಿಳಿದುಕೊಂಡಿದ್ದ ಕೆಲ ವಿಷಯಗಳು ವೃತ್ತಿಪರವಾಗಿ ಇಂದು ಉಪಯೋಗಕ್ಕೆ ಬರಲಿವೆ. ಹತ್ತಿರದ ಬಂಧುಗಳನ್ನು ಅನಿರೀಕ್ಷಿತವಾಗಿ ಕಂಡು ನಿಮಗೆ ಹರ್ಷ ಉಂಟಾಗುತ್ತದೆ.
ಸಿಂಹ
ಶ್ರದ್ಧೆ, ತಾಳ್ಮೆಯಿಂದ ಹಾಗೂ ಹಿಂದಿನ ಸೋಲು ಹೇಳಿಕೊಟ್ಟ ಪಾಠದಿಂದ ನಿಮ್ಮ ಪಾಲಿನ ಕಾರ್ಯ ಸಿದ್ಧಿಯಾಗುವುದು. ಕೆಲವರು ನಡೆಸುತ್ತಿರುವ ಕಾನೂನುಬಾಹಿರವಾದ ವಿಚಾರಗಳನ್ನು ಬಯಲು ಮಾಡುವಿರಿ.
ಕನ್ಯಾ
ಸಂಗಾತಿಯ ಮನಸ್ಸಿನ ಮಾತುಗಳನ್ನು ಅರಿತು ಅದನ್ನು ಈಡೇರಿಸುವ ಸಂಕಲ್ಪ ಮಾಡುವಿರಿ. ಮಕ್ಕಳಿಂದ ಅಚ್ಚರಿಯ ಸುದ್ದಿ ಕೇಳುವಿರಿ. ಹಿಂದೆ ರೂಪಿಸಿದ್ದ ಯೋಜನೆಗಳು ಯಶಸ್ಸು ಕಾಣುವುದನ್ನು ಕಂಡು ಸಂತಸಪಡುವಿರಿ.
ತುಲಾ
ಜ್ಞಾನ ಸಂಪಾದನೆಯ ಮಾರ್ಗದಲ್ಲಿ ಉತ್ತಮವಾದ ಗುರುವಿನ ಕೊರತೆಯಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ. ನೀವು ಗಳಿಸಿದ ಸಂಪಾದನೆಯಲ್ಲಿ ತೃಪ್ತಿ ಹೊಂದುವುದು ಅತ್ಯಗತ್ಯ.
ವೃಶ್ಚಿಕ
ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಡುವವರಿಗೆ ವಿದ್ಯಾರ್ಹತೆಗಿಂತ ನಿಮ್ಮ ಸ್ವಪ್ರತಿಭೆ ಬಹಳ ಮುಖ್ಯವಾದದ್ದು ಎಂಬುವುದು ಅರಿವಾಗುವುದು. ಮನೆಯಲ್ಲಿ ಮಾತಿನಿಂದಾಗಿ ಯುದ್ಧದ ವಾತಾವರಣ ನಿರ್ಮಾಣ ಮಾಡಿಕೊಳ್ಳದಿರಿ.
ಧನು
ಮನೆಯಿಂದ ದೂರ ಇರುವ ಮಕ್ಕಳ ವರ್ತನೆಗಳು ಪದೇ ಪದೇ ನೆನಪಾಗುತ್ತದೆ. ಸ್ಟೇಷನರಿ ಹೋಲ್‌ಸೇಲ್ ವ್ಯಾಪಾರ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿ. ನಿಮ್ಮ ವ್ಯಕ್ತಿತ್ವವು ಇತರರನ್ನು ವಿಶೇಷವಾಗಿ ಆಕರ್ಷಿಸುವುದು.
ಮಕರ
ಮಗಳಿಗೆ ಅನುರೂಪ ವರ ದೊರೆತು ನೆಮ್ಮದಿ ಕಂಡು ಬರುವುದು. ಸಮಸ್ಯೆಗಳ ಬಗ್ಗೆಯೆ ಹೆಚ್ಚು ಯೋಚನೆ ಮಾಡುವುದರಿಂದ ಅದರ ಬಗ್ಗೆ ಪರಿಹಾರ ಸಿಗುವ ಸೂಚನೆಗಳಿಲ್ಲ. ವಾತ ಸಂಬಂಧಿ ಕಾಯಿಲೆಗಳು ಆಗಬಹುದು.
ಕುಂಭ
ವಿವಾಹದ ವಿಚಾರದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿಷ್ಠುರವಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾದೀತು. ದೂಷಿಸಿದ ವ್ಯಕ್ತಿಗಳಿಗೆ ನಿಮ್ಮ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದು.
ಮೀನ
ಸುಖ-ದುಃಖ, ಲಾಭ-ನಷ್ಟಗಳೆರಡೂ ಸಮಾನವಾಗಿದ್ದರೂ ಪ್ರತಿಷ್ಟಿತ ಜನರ ಸಹಕಾರದಿಂದ ಸುಧಾರಣೆಯಾಗಲಿದೆ. ಅಸಾಧಾರಣ ರೀತಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ.