ಶನಿವಾರ, ಮೇ 15, 2021
23 °C

ಅಂಧ ಮಗುವಿನ ಚಿಕಿತ್ಸೆಗೆ ನೆರವು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನೊಬ್ಬ ಸ್ವಂತ ಜಮೀನು, ಸೂರು ಇಲ್ಲದ ಕಡುಬಡವ. ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವೆ. ಆದರೆ ನನ್ನ ಮಗ ರಂಗನಾಥ (9) ಅಂಧನಾಗಿದ್ದು, ಕೋಟ್ಸ್ ಪ್ಲಸ್ ಸಿಂಡ್ರೋಮ್ ಹಾಗೂ ನ್ಯೂರೋಜೆನಿಕ್ ಬ್ಲಾಡರ್ ಎಂಬ ಕಾಯಿಲೆಗಳಿಂದ ಬಳಲುತ್ತಿದ್ದಾನೆ.ಆತನಿಗೆ ಕಳೆದ 8 ತಿಂಗಳಿನಿಂದ ಚಿಕಿತ್ಸೆ ಕೊಡಿಸುತ್ತಿದ್ದೇನೆ. ಈವರೆಗೆ ಚಿಕಿತ್ಸೆಗಾಗಿ ಮೂರುವರೆ ಲಕ್ಷ ರೂಪಾಯಿಗಳಿಗೂ ಅಧಿಕ ಹಣ ಖರ್ಚು ಮಾಡಿದ್ದೇನೆ. ಈ ಹಣ ಹೊಂದಿಸಲು ಸಾಲ ಸಹ ಮಾಡಿದ್ದೇನೆ.ಅಷ್ಟೇ ಅಲ್ಲದೇ ಆತನ ಔಷಧೋಪಚಾರಕ್ಕಾಗಿ ಪ್ರತಿ ತಿಂಗಳಿಗೆ 20,000 ರೂಪಾಯಿಗಳಿಗೂ ಅಧಿಕ ಹಣ ಖರ್ಚಾಗುತ್ತಿದೆ. ಅದನ್ನು ಭರಿಸಲು ನಾನು ಅಸಹಾಯಕನಾಗಿದ್ದೇನೆ. ಆದ್ದರಿಂದ ದಾನಿಗಳು ಉದಾರವಾಗಿ ನೆರವು ನೀಡಬೇಕಾಗಿ ಕೋರುವೆ.ನನ್ನ ಹೆಸರಿನಲ್ಲಿರುವ ಎಸ್‌ಬಿಎಂ ಗಂಡಸಿ ಶಾಖೆ ಅಕೌಂಟ್ ನಂ. 54014919846, ಇಲ್ಲಿಗೆ ಚೆಕ್ ಅಥವಾ ನಗದನ್ನು ಜಮೆ ಮಾಡಬಹುದು. 

- ನರಸಿಂಹ, (ಮೊ: 9141352376),ಅಂಚೆ ವಿಳಾಸ: ನರಸಿಂಹ,

s/o ರಂಗಪ್ಪ, ಸೆಲೂನ್ ಶಾಪ್,  ಗಂಡಸಿ (ಹಳೆ ಬಸ್ ನಿಲ್ದಾಣ) ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ, ಕರ್ನಾಟಕ ರಾಜ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.