ಮೈಸೂರು: `ನಟ ರಾಕೇಶ್ ಹಾಗೂ ನಟಿ ಸ್ಮಿತಾ ಮುಖ್ಯಪಾತ್ರದಲ್ಲಿ ನಟಿಸಿರುವ `ಪರಿ~ ಕನ್ನಡ ಚಿತ್ರ ಅಕ್ಟೋಬರ್ 8 ರಂದು ತೆರೆ ಕಾಣಲಿದೆ~ ಎಂದು ಚಿತ್ರ ನಿರ್ದೇಶಕ ಸುಧೀರ್ ಅತ್ತಾವರ್ ತಿಳಿಸಿದರು.

`ಸವಾರಿ~ ಕನ್ನಡ ಚಿತ್ರಕ್ಕೆ `ಮರಳಿ.. ಮರೆಯಾಗಿ~ ಹಾಡಿನ ಸಾಹಿತ್ಯ ರಚನೆ ಮಾಡಿದ್ದು, ಇದೀಗ ಚೊಚ್ಚಲ ಚಿತ್ರ `ಪರಿ~ಯನ್ನು ನಿರ್ದೇಶಿಸಿದ್ದೇನೆ. ಚಿತ್ರದಲ್ಲಿ ಹಾಡುಗಳು ಉತ್ತಮವಾಗಿವೆ. ಸಾಹಿತ್ಯ, ಸಂಗೀತ ಚೆನ್ನಾಗಿ ಮೂಡಿಬಂದಿದೆ. ಚಿತ್ರವು ಆ್ಯಕ್ಷನ್ ಮತ್ತು ರೊಮ್ಯಾನ್ಸ್ನಿಂದ ಕೂಡಿದ್ದು, ಲಿಕ್ಕರ್ ಮಾಫಿಯಾ ಕಥೆಯನ್ನು ಆಧರಿಸಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆನಂದ್ ಆಡಿಯೋ ಸಂಸ್ಥೆಯ ಮಾಲೀಕ ಮೋಹನ್ ಮಾತನಾಡಿ, ಇದು ಹೊಸಬರ ಚಿತ್ರವಾದರೂ ಹಾಡುಗಳು ಕೇಳಲು ಮಧುರವಾಗಿದೆ. ಇದು ಸಂಸ್ಥೆಯು ಆಡಿಯೋ ಹಕ್ಕನ್ನು ಖರೀದಿಸಲು ಪ್ರೇರೇಪಿಸಿತು~ ಎಂದರು.

ಚಿತ್ರಕ್ಕೆ ಉದಿತ್ ನಾರಾಯಣ್, ಶಾನ್, ಪ್ರಿಯಾ ಹಿಮೇಶ್, ಗಾಯತ್ರಿ ಗಾಂಜವಾಲ, ಬಿ.ಕೆ.ಸುಮಿತ್ರ, ಸಾಧನ ಸರ್ಗಂ, ಉಷಾ ಉತ್ತುಪ್, ಮಾಣಿಕ್ಯ ವಿನಾಯಗಂ, ಮೈಸೂರು ಜನ್ನಿ, ಸಮನ್ವಿತ ಅವರ ಹಿನ್ನೆಲೆ ಗಾಯನವಿದೆ ಎಂದರು.

ತ್ರಿವಿಕ್ರಮ ಬೆಳ್ತಂಗಡಿ ಮತ್ತು ಲಿಂಗಪ್ಪ ಸಂಡೂರು ಅರ್ಪಿಸುವ ಚಿತ್ರದ ಆಡಿಯೋ ಸೆ.17ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದ್ದು, ಅ.8ರಂದು ಚಿತ್ರ ಬಿಡುಗಡೆಯಾಗಲಿದೆ. ಹಾಡಿನ ಚಿತ್ರದ ಸಾಹಿತ್ಯದ ಬಗ್ಗೆ ಅಂತರ ಕಾಲೇಜು ಸ್ಪರ್ಧೆಯನ್ನೂ ಏರ್ಪಡಿಸಿದೆ. ಇದರಲ್ಲಿ ವಿಜೇತರಾದವರಿಗೆ ಸಿಡಿ ಅಂಗಡಿಯವರೆ ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ತ್ರಿವಿಕ್ರಮ ಬೆಳ್ತಂಗಡಿ, ಚಂದ್ರು ಸೊಂದೋಗಿ, ಅರುಣ್ ತುಮಟಿ, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.