ಮಂಗಳವಾರ, ಮೇ 11, 2021
26 °C

ಅಕ್ಷಿಪಟಲದಲ್ಲಿ `ದುವಾ' ಪದರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ):  ಮಾನವನ ಕಣ್ಣಿನ ಪಟಲದಲ್ಲಿ ಹೊಸ ಪದರ ಇರುವುದನ್ನು ಭಾರತ ಮೂಲದ ವಿಜ್ಞಾನಿ ಹರ್ಮೀಂದರ್ ದುವಾ ನೇತೃತ್ವದ ತಂಡ ಪತ್ತೆ ಹಚ್ಚಿದೆ.ಹೊಸ ಸಂಶೋಧನೆಯ ನೇತೃತ್ವ ವಹಿಸಿದ್ದ ನಾಟಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ  ನೇತ್ರವಿಜ್ಞಾನ ಮತ್ತು ದೃಶ್ಯ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಆಗಿರುವ ಹರ್ಮೀಂದರ್ ದುವಾ  ಅವರ  ಹೆಸರನ್ನೇ ಈ ಪದರಕ್ಕೆ (`ದುವಾ ಪದರ') ಇಡಲಾಗಿದೆ.ಈ ಸಂಶೋಧನೆಯು ನೇತ್ರವಿಜ್ಞಾನದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಯಾಗಿದ್ದು, ಪಟಲದ ಕಸಿಕಟ್ಟುವಿಕೆಗೆ ಒಳಗಾಗುವ ರೋಗಿಗಳಿಗೆ ಪರಿಣಾಮಕಾರಿಯಾದ ಮತ್ತು ಫಲಪ್ರದ ಶಸ್ತ್ರಕ್ರಿಯೆ ನಡೆಸಲು ತಜ್ಞರಿಗೆ ಇದು ನೆರವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.ಕಣ್ಣನ್ನು ರಕ್ಷಿಸುವ ಮಸೂರದಂತೆ ವರ್ತಿಸುವ ಈ ಪಟಲದ ಮೂಲಕವೇ ಬೆಳಕು ಕಣ್ಣನ್ನು ಪ್ರವೇಶಿಸುತ್ತದೆ.ಅಕ್ಷಿಪಟಲದ ಮುಂಭಾಗದಿಂದ  ಹಿಂಭಾಗದವರಗೆ ಐದು ಪದರಗಳಿವೆ ಎಂದು ಇದುವರೆಗೆ ನಂಬಲಾಗಿತ್ತು. (ಐದು ಪದರಗಳು: ಕಾರ್ನಿಯಲ್ ಎಪಿಥೀಲಿಯಂ, ಬೌಮನ್ಸ್ ಪದರ, ಕಾರ್ನಿಯಲ್ ಸ್ಟ್ರೋಮಾ, ಡೆಸೆಮೆಟ್ಸ್ ಮೆಂಬ್ರೇನ್ ಮತ್ತು ಕಾರ್ನಿಯಲ್ ಎಂಡೊಥೀಲಿಯಂ). ಈಗ ಪತ್ತೆ ಮಾಡಲಾಗಿರುವ ದುವಾ ಪದರವು ಅಕ್ಷಿಪಟಲದ ಹಿಂಭಾಗದಲ್ಲಿ ಕಾರ್ನಿಲ್ ಸ್ಟ್ರೋಮಾ ಮತ್ತು ಡೆಸೆಮೆಟ್ಸ್ ಮೆಂಬ್ರೇನ್ ನಡುವೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಮಾನವನ ಅಕ್ಷಿ ಪಟಲವು ಸುಮಾರು 550 ಮೈಕ್ರಾನ್‌ನಷ್ಟು (0.5 ಮಿ.ಮೀ) (ಒಂದು ಮೈಕ್ರಾನ್ ಅಂದರೆ 0.001 ಮಿ.ಮೀ) ದಪ್ಪ ಇದೆ. ಪ್ರೊ. ದುವಾ ಮತ್ತು ತಂಡ ಪತ್ತೆ ಹಚ್ಚಿರುವ ಪದರದ ದಪ್ಪ ಕೇವಲ 15 ಮೈಕ್ರಾನ್.`ಇದೊಂದು ಹೊಸ ಸಂಶೋಧನೆಯಾಗಿದ್ದು, ಇದರಿಂದಾಗಿ ನೇತ್ರವಿಜ್ಞಾನ ಕುರಿತ ಎಲ್ಲಾ ಪಠ್ಯಗಳನ್ನು ಮತ್ತೆ ಹೊಸದಾಗಿ  ಸಿದ್ಧಪಡಿಸುವ ಅಗತ್ಯವಿದೆ. ಅಕ್ಷಿ ಪಟಲದ ಅಂಗಾಂಶದಲ್ಲಿ  ಹೊಸ ಪದರವನ್ನು ಪತ್ತೆ ಹಚ್ಚಿರುವುದು ಸುರಕ್ಷಿತ ಮತ್ತು ಸರಳ ಶಸ್ತ್ರಕ್ರಿಯೆಗೆ ನೆರವಾಗಲಿದೆ' ಎಂದು ದುವಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.