ಅಗ್ಗದ ದರದಲ್ಲಿ ಫ್ಲ್ಯಾಟ್ ಖರೀದಿಗೆ ನೆರವು ಸೌಲಭ್ಯ

7

ಅಗ್ಗದ ದರದಲ್ಲಿ ಫ್ಲ್ಯಾಟ್ ಖರೀದಿಗೆ ನೆರವು ಸೌಲಭ್ಯ

Published:
Updated:
ಅಗ್ಗದ ದರದಲ್ಲಿ ಫ್ಲ್ಯಾಟ್ ಖರೀದಿಗೆ ನೆರವು ಸೌಲಭ್ಯ

ಬೆಂಗಳೂರು: ಅಗ್ಗದ ದರಗಳಲ್ಲಿ ಅಪಾರ್ಟ್‌ಮೆಂಟ್ ಖರೀದಿಸುವ ಸೌಲಭ್ಯ ಒದಗಿಸುವ ಉದ್ದೇಶದ `ಡಿಸ್ಕೌಂಡೆಡ್‌ಫ್ಲ್ಯಾಟ್ಸ್~ ಅಂತರಜಾಲ ತಾಣಕ್ಕೆ ನಗರದಲ್ಲಿ ಚಾಲನೆ ನೀಡಲಾಗಿದೆ.

ಗೃಹ ನಿರ್ಮಾಣ ಸಂಸ್ಥೆಗಳು ಮತ್ತು ಮಾರಾಟಗಾರರು ಕೊಡಮಾಡುವ ಆರಂಭಿಕ ರಿಯಾಯ್ತಿ ಕೊಡುಗೆಗಳನ್ನು ಸಗಟು ಖರೀದಿ ರೂಪದಲ್ಲಿ ಪಡೆದುಕೊಳ್ಳಲೂ ಈ ತಾಣವು ನೆರವಾಗಲಿದೆ. ಅಪಾರ್ಟ್‌ಮೆಂಟ್ಸ್‌ಗಳ ಖರೀದಿದಾರರ ಪರವಾಗಿ ಡಿಸ್ಕೌಂಟೆಡ್ ಫ್ಲ್ಯಾಟ್ಸ್, ಗೃಹ ನಿರ್ಮಾಣ ಸಂಸ್ಥೆಗಳ ಬಳಿ ಚೌಕಾಸಿ ನಡೆಸಿ, ಅತ್ಯುತ್ತಮ ವ್ಯವಹಾರ ಕುದುರಿಸುತ್ತದೆ. ಇದರಿಂದ ಫ್ಲ್ಯಾಟ್ ಖರೀದಿಸುವ ವೇಳೆ ಪ್ರತಿ ಚದರ ಅಡಿಗೆ ಕನಿಷ್ಠ ರೂ. 100ಗಳಿಂದ ರೂ. 300ವರೆಗೆ ಉಳಿತಾಯ ಸಾಧ್ಯವಾಗಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಸುಗ್ಲಾ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಸೇರಿದಂತೆ ದೇಶದ 6 ಮಹಾನಗರಗಳಲ್ಲಿ ಈ ಸೇವೆ ಲಭ್ಯ ಇದೆ.   ಒಟ್ಟು 7 ಸಾವಿರ ಯೋಜನೆಗಳು ಸೇರಿದಂತೆ ಬೆಂಗಳೂರಿನ 45 ಕಟ್ಟಡ ನಿರ್ಮಾಣ ಸಂಸ್ಥೆಗಳು ಈ ಸೌಲಭ್ಯದಲ್ಲಿ ಭಾಗಿಯಾಗಿವೆ. ಖರೀದಿದಾರರಿಗೆ    ಹೆಚ್ಚುವರಿ ಶುಲ್ಕದ ಹೊರೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ discountedflats.com ತಾಣಕ್ಕೆ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry