ಬೆಂಗಳೂರು: ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ನೆರವು ನೀಡುವ ಗೋರಖ್ಸಿಂಗ್ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ನವದೆಹಲಿಗೆ ನಿಯೋಗ ಕರೆದೊಯ್ಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.

ಗುಟ್ಕಾ, ಪಾನ್ಮಸಾಲ ನಿಷೇಧ ಸಂಬಂಧ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ವರದಿಯ ಅನುಷ್ಠಾನ ಸಂಬಂಧ ಕೇಂದ್ರದೊಂದಿಗೆ ಮತ್ತೊಮ್ಮೆ ಚರ್ಚಿಸಲಾಗುವುದು. ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರ ಪರವಾಗಿದೆ ಎಂದು ಭರವಸೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುವ ಉದ್ದೇಶದಿಂದ ಗುಟ್ಕಾ ನಿಷೇಧ ಮಾಡಲಾಗಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಅಡಿಕೆಗೆ ಸೂಕ್ತ ಬೆಲೆ ಸಿಗದೆ ಇದ್ದರೆ ಅಡಿಕೆ ಬೆಳೆಯುವ ಪ್ರದೇಶದ ಚುನಾಯಿತ ಪ್ರತಿನಿಧಿಗಳು, ರೈತ ಮುಖಂಡರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳ ಲಾಗುವುದು ಎಂದರು.

ನಾಲ್ಕು ವಾರಗಳ ಒಳಗೆ ನಿಷೇಧ ಮಾಡುವಂತೆ ಮೇ 3ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆ ಪ್ರಕಾರ ಮೇ 30ರಂದು ನಿಷೇಧ ಮಾಡಲಾಗಿದೆ. ಸರ್ಕಾರ ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡಿಲ್ಲ. ಅಡಿಕೆ ಬೆಲೆ ಕುಸಿಯುತ್ತದೆ ಎಂದು ಆತಂಕಪಡುವ ಅಗತ್ಯವಿಲ್ಲ. ನಿಷೇಧ ಮಾಡಿದ ನಂತರ ಅಡಿಕೆ ಬೆಲೆ ಕ್ವಿಂಟಲ್ಗೆ 50 ರೂಪಾಯಿ ಮಾತ್ರ ಕಡಿಮೆ ಆಗಿದೆ ಎಂದರು.

ಸಾರ್ವಜನಿಕರ ಹಿತದೃಷ್ಟಿಯಿಂದ ನಿಷೇಧ ಮಾಡಲಾಗಿದೆ. ಇದನ್ನು ತಡೆಹಿಡಿದರೆ ಗುಟ್ಕಾ ತಯಾರಕರಿಗೆ ಅನುಕೂಲವಾಗಲಿದೆ. ದಾಸ್ತಾನು ಇರುವ ಗುಟ್ಕಾ ಮಾರಾಟ ಮಾಡುತ್ತಾರೆ. ನೀವು (ಬಿಜೆಪಿ) ಅವರ ಪರವಾಗಿ ನಿಲ್ಲುತ್ತೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆದರೆ, ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಸರ್ಕಾರ ನಿರ್ದಿಷ್ಟ ಉತ್ತರ ನೀಡಿಲ್ಲ. ಅಡಿಕೆ ಬೆಳೆಗಾರರ ರಕ್ಷಣೆಗೆ ಬಂದಿಲ್ಲ ಎಂದು ಶೆಟ್ಟರ್ ದೂರಿದರು. ಸಭಾತ್ಯಾಗ ಮಾಡಲು ಬಿಜೆಪಿ ಸದಸ್ಯರು ಎದ್ದು ನಿಲ್ಲುತ್ತಿದ್ದಂತೆಯೇ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನವನ್ನು ಬುಧವಾರ ಬೆಳಿಗ್ಗೆ 11ಕ್ಕೆ ಮುಂದೂಡಿದರು.

ಬೆಳೆಗಾರರ ಕೈಹಿಡಿಯಲಿದೆ: ಇದಕ್ಕೂ ಮುನ್ನ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಗುಟ್ಕಾ ಮತ್ತು ಪಾನ್ಮಸಾಲ ನಿಷೇಧ ಮಾಡಿರುವುದರಿಂದ ಅಡಿಕೆ ಬೆಳೆಗಾರರಿಗೆ ತೊಂದರೆ ಆಗುವುದಿಲ್ಲ ಎಂದು ಕ್ಯಾಂಪ್ಕೊ ಅಧ್ಯಕ್ಷರೇ ಧೈರ್ಯ ತುಂಬಿದ್ದಾರೆ. ಸದನದಲ್ಲಿ ಈ ರೀತಿ ಚರ್ಚೆ ಮಾಡುವುದರಿಂದ ಬೆಳೆಗಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದರು.

ಬೆಳೆಗಾರರಿಗೆ ತೊಂದರೆಯಾದರೆ ಸರ್ಕಾರ ಅವರ ಕೈಹಿಡಿಯಲಿದೆ. ಒಂದು ತಿಂಗಳ ನಂತರ ಅಡಿಕೆ ಬೆಲೆಯಲ್ಲಿ ಏರು - ಪೇರು ಆದರೆ ಜನಪ್ರತಿನಿಧಿಗಳು, ಬೆಳೆಗಾರರನ್ನು ಕರೆದು ಚರ್ಚಿಸಲಾಗುವುದು. ಅಡಿಕೆ ಬೆಲೆ ಕುಸಿದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಅವಕಾಶಗಳಿವೆ. ಆದರೆ, ನಮ್ಮ ಸಹೋದರ - ಸಹೋದರಿಯರು ಕ್ಯಾನ್ಸರ್ಗೆ ತುತ್ತಾಗಿ ಜೀವನ ಹಾಳು ಮಾಡಿಕೊಂಡರೆ ಸರಿಪಡಿಸಲು ಆಗುವುದಿಲ್ಲ. ಕಿದ್ವಾಯಿಗೆ ಹೋಗಿ ನೋಡಿದರೆ ಅಲ್ಲಿರುವ ರೋಗಿಗಳ ಸ್ಥಿತಿ ಹೇಗಿದೆ ಎಂಬುದು ಗೊತ್ತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿರೋಧ: ಇದಕ್ಕೂ ಮೊದಲು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮಾತನಾಡಿ ಅಡಿಕೆ ಬೆಳೆಗಾರರ ಹಿತವನ್ನು ಕಾಯುವಂತೆ ಒತ್ತಾಯಿಸಿದರು.

ಅಡಿಕೆಗೆ ಕರ್ನಾಟಕ ತಾಯಿ ನೆಲ. ಬೇರೆ ರಾಜ್ಯಗಳಲ್ಲಿ ನಿಷೇಧಿಸಿದ್ದಾರೆಂದು ನಮ್ಮ ರಾಜ್ಯದಲ್ಲಿ ಹಾಗೆ ಮಾಡುವುದು ಸರಿಯಲ್ಲ -ಡಿ.ಎನ್.ಜೀವರಾಜ್

ದೇಶದ ಶೇ 60ರಷ್ಟು ಅಡಿಕೆ ರಾಜ್ಯದಲ್ಲೇ ಬೆಳೆಯುತ್ತಿದ್ದು, ಅವಲಂಬಿತರ ಸಂಖ್ಯೆ ಹೆಚ್ಚಿದೆ. ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ರೈತರು ಇದನ್ನೇ ನಂಬಿಕೊಂಡಿದ್ದಾರೆ. ಹೀಗಾಗಿ ನಿಷೇಧವನ್ನು ತಕ್ಷಣ ವಾಪಸ್ ಪಡೆಯಬೇಕು.-ವಿಶ್ವೇಶ್ವರ ಹೆಗಡೆ ಕಾಗೇರಿ

ನಿಷೇಧ ಮಾಡಿರುವ ಆದೇಶವನ್ನು ಕೂಡಲೇ ತಡೆಹಿಡಿಯಬೇಕು. ಪ್ರತಿಪಕ್ಷಗಳ ಶಾಸಕರು, ಬೆಳೆಗಾರರನ್ನು ಕರೆದು ಚರ್ಚಿಸಬೇಕು -ಜಗದೀಶ ಶೆಟ್ಟರ್

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಿಷೇಧ ಮಾಡಿರುವ ಆದೇಶವನ್ನು ತಡೆಹಿಡಿದು ಸಾಧಕ - ಬಾಧಕಗಳ ಬಗ್ಗೆ ಚರ್ಚಿಸಬೇಕು - ಬಿ.ಬಿ.ನಿಂಗಯ್ಯ

ಅಡಿಕೆಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಬೇಕು - ಜಿ.ಟಿ.ದೇವೇಗೌಡ
ಗುಟ್ಕಾ ನಿಷೇಧ ಮಾಡಿ ಸರ್ಕಾರ ಕೈತೊಳೆದುಕೊಳ್ಳಬಾರದು. ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು -ವೈ.ಎಸ್.ವಿ.ದತ್ತ

15 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಗುಟ್ಕಾದಲ್ಲಿರುವ ಹಾನಿಕಾರಕ ಅಂಶಗಳನ್ನು ಹೊರತುಪಡಿಸಿ, ಗುಟ್ಕಾ ತಯಾರಿಸುವಂತೆ ಕಂಪೆನಿಗಳಿಗೆ ಸೂಚನೆ ಕೊಡಿ. ಸಮಸ್ಯೆಗೆ ಪರಿಹಾರ ಹುಡುಕಲು ಸಮಿತಿ ರಚಿಸಬೇಕು -ವಡ್ನಾಳ್ ರಾಜಣ್ಣ

ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸದೆ ಸೂಕ್ತ ರಕ್ಷಣೆ ನೀಡಬೇಕು
-ರುದ್ರೇಶ್ಗೌಡ, ಎ.ಎಸ್.ಹೆಬ್ಬಾರ್

`ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ತರಾತುರಿಯಲ್ಲಿ ಗುಟ್ಕಾ ನಿಷೇಧ ಮಾಡಿದ್ದು, ಅಡಿಕೆ ಬೆಳೆಯುವ ರೈತರಿಗೆ ಆಗಲೇ ಸಂಕಷ್ಟ ಆರಂಭವಾಗಿದೆ - ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.