ಅಡಿಕೆ: ವರ್ತಕರ ಅಘೋಷಿತ ಬಂದ್

7

ಅಡಿಕೆ: ವರ್ತಕರ ಅಘೋಷಿತ ಬಂದ್

Published:
Updated:

ಶಿವಮೊಗ್ಗ: ಅಡಿಕೆ ಧಾರಣೆ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರವೂ ಮಾರುಕಟ್ಟೆಯಲ್ಲಿ ಅಘೋಷಿತ ಬಂದ್ ಆಚರಿಸಲಾಯಿತು. ಯಾವುದೇ ಅಡಿಕೆ ಖರೀದಿಸದಂತೆ ದೆಹಲಿ, ಮಧ್ಯಪ್ರದೇಶಗಳಿಂದ ಸೂಚನೆ ಬಂದಿದೆ. ಅಲ್ಲದೇ, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿರ್ದಿಷ್ಟ ಅವಧಿಯವರೆಗೆ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಎಪಿಎಂಸಿ ಅಡಿಕೆ ವರ್ತಕ ಮಂಜುನಾಥ್ ತಿಳಿಸಿದ್ದಾರೆ.ಗುಟ್ಕಾ ನಿಷೇಧದ ಕುರಿತಂತೆ ಕ್ಯಾಂಪ್ಕೋ ಮತ್ತಿತರ ಸಹಕಾರ ಸಂಸ್ಥೆಗಳು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಫೆ. 17ರಂದು ನಡೆಯಲಿದೆ.  ಸರ್ಕಾರ ಭರವಸೆ ನೀಡಿದ್ದಂತೆ ಕೆಂಪು ಅಡಿಕೆಗೆ ಇನ್ನೆರಡು ದಿವಸದಲ್ಲಿ ಬೆಂಬಲ ಬೆಲೆ ಘೋಷಣೆಯಾಗಬಹುದು ಎಂದು ಮ್ಯಾಮ್‌ಕೋಸ್ ಉಪಾಧ್ಯಕ್ಷ ನರಸಿಂಹನಾಯಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry