ಬುಧವಾರ, ಜೂನ್ 16, 2021
22 °C

ಅಡಿಕೆ ಸಹಾಯಧನ: 15ರೊಳಗೆ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅಡಿಕೆ ಪುನಃಶ್ಚೇತನದಡಿ ಪ್ರತಿ ಎಕರೆಗೆ ರೂ6,000 ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 700 ಜನ ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದ್ದು, ಇನ್ನುಳಿದ ರೈತರಿಗೆ ಮಾರ್ಚ್ 15ರೊಳಗೆ ಸಹಾಯಧನ ನೀಡಲಾಗು ವುದು ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.ಸಂಪಾಜೆಯಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪಯಶ್ವಿನಿ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.ಸಹಾಯಧನ ಕೋರಿ ಸಂಪಾಜೆ ಗ್ರಾ.ಪಂ.ನಿಂದ 150 ಅರ್ಜಿ, ಚೆಂಬು ಗ್ರಾ.ಪಂ.ನಿಂದ 600 ಅರ್ಜಿ, ಪೆರಾಜೆ ಗ್ರಾ.ಪಂ.ನಿಂದ 175 ಒಟ್ಟು 1,025 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ಹೇಳಿದರು.ಅಡಿಕೆಗೆ ತಗುಲಿರುವ ಹಳದಿ ರೋಗಕ್ಕೆ ಇದುವರೆಗೆ ಯಾವುದೇ ಮದ್ದು ಕಂಡುಹಿಡಿಯಲಾಗಿಲ್ಲ. ಹಳದಿ ರೋಗ ನಿವಾರಣೆಯಾಗುತ್ತಿಲ್ಲವೆಂದು ರೈತರು ಕಂಗಾ ಲಾಗದೆ ಪರ‌್ಯಾಯ ಬೆಳೆಗಳಾದ ಬಾಳೆ, ತೆಂಗು ಬೆಳೆದ ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಹೇಳಿದರು.ಚೆಂಬು, ಪೆರಾಜೆ, ಸಂಪಾಜೆ ವ್ಯಾಪ್ತಿಯಲ್ಲಿ ಸಣ್ಣನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗುತ್ತಿದೆ. ಸಮುದಾಯ ಭವನ ಹಾಗೂ ರುದ್ರಭೂಮಿಗೆ ಆಗ್ರಹಿಸುತ್ತಿರುವ ಪಂಚಾಯಿತಿಗಳು ಜಾಗವನ್ನು ಗುರುತಿಸಿ, ವರದಿಯನ್ನು ನೀಡಿದರೆ ಅವುಗಳನ್ನು ಮಂಜೂರು ಮಾಡಿಕೊಡುವುದಾಗಿ ಅವರು ಭರವಸೆ ನೀಡಿದರು.ಶಾಸಕ ಅಪ್ಪಚ್ಚು ರಂಜನ್ ಅವರ ಜೊತೆಗೂಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ಇದುವರೆಗೆ 400 ಕೋಟಿ ರೂಪಾಯಿ ಅನುದಾನವನ್ನು ತಂದಿದ್ದೇವೆ. ಇದರ ಸದುಪಯೋಗವಾಗಲಿ ಎಂದು ಹಾರೈಸಿದರು.ನಾಗರಹೊಳೆ ಕಾಳ್ಗಿಚ್ಚು: ನಾಗರಹೊಳೆ ಅರಣ್ಯದಲ್ಲಿ ಕಾಳ್ಗಿಚ್ಚು ಉಂಟಾಗುವ ಸಂಭವ ಕುರಿತು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೆ, ಆದರೆ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ವಹಿಸದ ಪರಿಣಾಮವಾಗಿ ಇಂದು ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟುಹೋಗಿದೆ ಎಂದು ಅವರು ವಿಷಾದಿಸಿದರು.ಕಡಮಕಲ್ ರಸ್ತೆ ಮುಂಚೆಯಿಂದಲೇ ಇತ್ತು. ಅಲ್ಲಿನ ಗಿರಿಜನರ ಬೇಡಿಕೆಯಂತೆ ನಾವು ಇದನ್ನು ಅಭಿವೃದ್ಧಿಪಡಿಸುವುದಕ್ಕೆ ಪ್ರಯತ್ನಿಸಿದ್ದೇವು.  ಅದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಿದರು ಎಂದು ಅವರು ಹೇಳಿದರು.ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸುವವರು ಗಿರಿಜನರ ಜೊತೆ ವಾಸವಿದ್ದು ತೋರಿಸಲಿ ಎಂದು ಸವಾಲು ಹಾಕಿದರು.ನಾನೇಕೆ ರಾಜೀನಾಮೆ ನೀಡಲಿ?

ಇತ್ತೀಚೆಗೆ ಪ್ರತಿಯೊಂದು ಮಾತಿಗೂ ವಿರೋಧ ಪಕ್ಷದವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಅಂತಹ ತಪ್ಪು ನಾನೇನು ಮಾಡಿದ್ದೇನೆ. ನನ್ನ ಕ್ಷೇತ್ರದ ಜನರ ಆಶೀರ್ವಾದ ಇದ್ದರೆ ಪೂರ್ಣಾವಧಿಯವರೆಗೆ ಸ್ಪೀಕರ್ ಆಗಿ ಮುಂದುವರಿಯುತ್ತೇನೆ ಎಂದು ಹೇಳಿದರು.ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಬಾಲಚಂದ್ರ ಕಳಗಿ ಸ್ವಾಗತಿಸಿದರು. ಜಿ.ಪಂ. ಸದಸ್ಯರಾದ ಬಬ್ಬೀರ ಸರಸ್ವತಿ, ಎಸ್.ಎನ್. ರಾಜಾರಾವ್, ತಾ.ಪಂ ಸದಸ್ಯೆ ಪಿ.ಎಂ. ಯಶೋಧ ಮೋನಪ್ಪ, ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ತಿರುಮಲ್ಲೇಶ್ವರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.